Watermelon Rind Benefits 
ಆಹಾರ

ಕಲ್ಲಂಗಡಿ ತಿಂದು ಸಿಪ್ಪೆ ಬಿಸಾಡ್ತಿದ್ದೀರಾ?; ನಿಲ್ಲಿ ಮಾರ್ರೆ..ಇದ್ರಿಂದ ಆರೋಗ್ಯಕ್ಕೆ ಸಿಗೋ ಲಾಭ ಎಷ್ಟಿದೆ ಗೊತ್ತಾ?..Watermelon Rind Benefits

ಪ್ರಮುಖ ಮುಖ್ಯಾಂಶಗಳು

  • ಕಲ್ಲಂಗಡಿ ಹಣ್ಣಿನ ಕೆಂಪು ಭಾಗಕ್ಕಿಂತ ಬಿಳಿ ಸಿಪ್ಪೆಯ ಭಾಗ ಹೆಚ್ಚು ಪೌಷ್ಟಿಕಾಂಶ
  • 'ಸಿಟ್ರುಲೈನ್' ಅಮೈನೋ ಆಮ್ಲ ಹೃದಯದ ಆರೋಗ್ಯಕ್ಕೆ ರಾಮಬಾಣ
  • ಸಿಪ್ಪೆಯನ್ನು ಎಸೆಯುವ ಬದಲು ಚಟ್ನಿ, ಜ್ಯೂಸ್ ಅಥವಾ ಉಪ್ಪಿನಕಾಯಿ ಮಾಡಿ ತಿನ್ನಿ
ಹಿಂದಿನ ಕಾಲದಿಂದಲೂ ಕಲ್ಲಂಗಡಿ ಹಣ್ಣಿನ ಬಿಳಿ ಭಾಗವು ತಿನ್ನಲು ಯೋಗ್ಯವಲ್ಲ. ಸಿಹಿ ಇರೋದಿಲ್ಲ ಎಂದು ಭಾವಿಸಿ ಅದನ್ನು ಬಿಸಾಡಿ ನಾವು ಮೂರ್ಖರಾಗುತ್ತಿದ್ದೇವೆ. ಆದರೆ, ನಿಜವಾಗಿಯೂ ಆರೋಗ್ಯಕರ ಅಂಶವಿರೋದು ಬಿಳಿ ಭಾಗದಲ್ಲಿ. ಹಾಗಾದ್ರೆ ರುಚಿಯು ಇರಬೇಕು ಸಿಪ್ಪೆ ಬಿಸಾಡಲು ಬಾರದು ಎಂದರೆ ಏನು ಮಾಡಬೇಕು, ಈ ಸಿಪ್ಪೆಯಲ್ಲಿ ಯಾವೆಲ್ಲ ಅಂಶ ಇರುತ್ತೆ, ಹೇಗೆಲ್ಲ ಫಲಕಾರಿ ಎನ್ನುವ ಬಗ್ಗೆ ಇಂದು ತಿಳಿದುಕೊಳ್ಳೋಣ.
ಕಲ್ಲಂಗಡಿ ಸಿಪ್ಪೆಯಲ್ಲಿ ಅಡಗಿರುವ ಆರೋಗ್ಯಕಾರಿ ಅಂಶ ಯಾವುದು?
ಕಲ್ಲಂಗಡಿ ಹಣ್ಣಿನ ಹಸಿರು ಮಿಶ್ರಿತ ಬಿಳಿಬಾಗದ ಸಿಪ್ಪೆಯ ತಿರುಳು ಹಲವು ಆರೋಗ್ಯಕಾರಿ ಅಂಶವನ್ನು ಹೊಂದಿದೆ. ಈ ಹಣ್ಣಿನಲ್ಲಿ ಪ್ರತ್ಯಾಮ್ಲ ಸಮೃದ್ಧವಾಗಿದೆ. ಇದು ದೇಹದ ಕೊಲೆಸ್ಟ್ರಾಲ್​ ಕಡಿಮೆ ಮಾಡುವತ್ತದೆ. ಜೊತೆಗೆ ದೇಹಕ್ಕೆ ಸೇರುವ ರಾಸಾಯನಿಕ ಅಂಶಗಳಿಗೆ ಮಟ್ಟಹಾಕುವ ಯತ್ನವನ್ನು ಮಾಡುತ್ತದೆ. 
ಕಲ್ಲಂಗಡಿ ಹಣ್ಣಿನ ಬಿಳಿ ಭಾಗದಲ್ಲಿ 'ಎಲ್-ಸಿಟ್ರುಲೈನ್' ಎಂಬ ಶಕ್ತಿಶಾಲಿ ಅಮೈನೋ ಆಮ್ಲ ಇರುತ್ತದೆ. ಇದು ನಮ್ಮ ದೇಹಕ್ಕೆ ಹೊಕ್ಕಿದಾಗ ಅರ್ಜಿನೈನ್​ ಆಗಿ ಬದಲಾಗುತ್ತದೆ. ಜೊತೆಗೆ  ರಕ್ತನಾಳಗಳ ಆರೋಗ್ಯಕ್ಕೆ ಅತ್ಯಗತ್ಯವಾದ ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸುವಂತೆ. ದೇಹದಲ್ಲಿರುವ ಕಿಡ್ನಿ ಕಲ್ಲು ಕರಗುವಂತೆ ಮಾಡುತ್ತದೆ ಎನ್ನಲಾಗಿದೆ.
📄 Embedded Content

ಹೃದಯಕ್ಕೆ ಹೇಗೆ ಸಹಕಾರಿ? 

ಇನ್ನು ಕಲ್ಲಂಗಡಿಯಲ್ಲಿರುವ ವಿಟಮಿನ್​ ಸಿ, ಬೀಟಾ, ಕೆರೋಟಿನ್​ ಲ್ಯೂಟಿನ್​ ಎಂಬ ಅಂಶಗಳು ಮುಖದ ತಾಜಾತನ, ಗಾಯಗಳ ಮಾಗುವಿಕೆ, ಹೃದಯ ರಕ್ಷಣೆಯಂತಹ ಕೆಲಸವನ್ನು ಮಾಡುತ್ತದೆ. ಇದು ರಕ್ತನಾಳಗಳನ್ನು ಸಡಿಲಗೊಳಿಸುವ ಮೂಲಕ ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ.

ಏನೆಲ್ಲ ಪ್ರಯೋಜನ ಸಿಗುತ್ತೆ?

 ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಇದು ವರದಾನವಾಗಿದ್ದು, ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಫೈಬರ್ ಹೆಚ್ಚಿರುವ ಕಾರಣ, ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಈ ಸಿಪ್ಪೆಯಲ್ಲಿ ವಿಟಮಿನ್ ಸಿ, ಬಿ6, ರಿಬೋಫ್ಲಾವಿನ್ ಮತ್ತು ವಿಟಮಿನ್ ಎ ಅಂಶಗಳು ಹೇರಳವಾಗಿವೆ. ಇದು ಕ್ಯಾನ್ಸರ್​ ಕಣಗಳ ವಿರುದ್ಧ ಹೋರಾಡಲು ಸಹಕಾರಿ ಎನ್ನಲಾಗಿದೆ.  ಮೆದುಳಿನ ಆರೋಗ್ಯಕ್ಕೆ ಬೇಕಾದ ವಿಟಮಿನ್​ಗಳು ಈ ಸಿಪ್ಪೆಯಲ್ಲಿದೆ ಎಂದು ಲವ್ನೀತ್ ಬಾತ್ರಾ ಹೇಳಿದ್ದಾರೆ. 

ಕಲ್ಲಂಗಡಿ ಸಿಪ್ಪೆ ಬಳಕೆ ಮಾಡಿಕೊಳ್ಳೋದು ಹೇಗೆ

  • ಕಲ್ಲಂಗಡಿ ಸಿಪ್ಪೆಯನ್ನು ನೇರವಾಗಿ ತಿನ್ನಲು ಕಷ್ಟವೆನಿಸಿದರೆ,  ಹಣ್ಣಿನ ಜ್ಯೂಸ್ ಮಾಡುವಾಗ ಬಿಳಿ ಭಾಗವನ್ನೂ ಸೇರಿಸಿಕೊಂಡು ಜ್ಯೂಸ್ ಮಾಡಿ ಕುಡಿಯಿರಿ
  • ತೆಂಗಿನಕಾಯಿ ಮತ್ತು ಸಾಂಬಾರ ಪದಾರ್ಥಗಳೊಂದಿಗೆ ಕಲ್ಲಂಗಡಿ ಸಿಪ್ಪೆಯ ಚಟ್ನಿ ರುಚಿಯಾಗಿರುತ್ತದೆ.
  • ಇತರ ತರಕಾರಿಗಳಂತೆ ಮಸಾಲೆ ಸೇರಿಸಿ ಪಲ್ಯ ಮಾಡಬಹುದು.
  • ಸಿಪ್ಪೆಯಿಂದ ರುಚಿಕರವಾದ ಉಪ್ಪಿನಕಾಯಿ ಕೂಡ ತಯಾರಿಸಬಹುದು, (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.