Smokers: ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಒತ್ತಡ, ಆಯಾಸ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ ಇವೆಲ್ಲವೂ ಜನರನ್ನು ಕೆಟ್ಟ ಚಟಗಳತ್ತ ನೂಕುತ್ತದೆ. ಹಾಗಾಗಿ ಹೆಚ್ಚಿನ ಜನರು ಧೂಮಪಾನ, ಮದ್ಯಪಾನದತ್ತ ಮುಖ ಮಾಡುತ್ತಾರೆ. ನೀವು ಧೂಮಪಾನ ಹಿಂದೆ ಮಾಡಿ, ಈಗ ಬಿಟ್ಟಿದ್ದರೆ ಅಥವಾ ಬಿಡಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಶ್ವಾಸಕೋಶವನ್ನು ಹೇಗೆ ಆರೋಗ್ಯವಾಗಿಡುವುದು ಎಂದು ಯೋಚಿಸುತ್ತಿರಬಹುದು.
ಅತ್ಯಂತ ಪ್ರಭಾವಶಾಲಿ ಮನೆಮದ್ದುಗಳಲ್ಲಿ ಕಬ್ಬಿನ ರಸವು ಒಂದು. ಇದು ದೇಹವನ್ನು ಶುದ್ಧೀಕರಿಸಲು, ಶಕ್ತಿಯನ್ನು ಹೆಚ್ಚಿಸಲು ಮತ್ತು ಶ್ವಾಸಕೋಶದ ಕಾರ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.
ಕಬ್ಬಿನ ರಸದಲ್ಲಿರುವ ಉತ್ಕರ್ಷಣ ನಿರೋಧಕಗಳು ವಿಷವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಾಗಾಗಿ ನೀವೇನಾದರೂ ದೀರ್ಘಕಾಲವಾಗಿ ಧೂಮಪಾನ ಮಾಡುತ್ತಿದ್ದರೆ, ಕಬ್ಬಿನ ರಸವನ್ನು ಸೇವಿಸುವುದು ಅತ್ಯಗತ್ಯವಾಗಿದೆ. ಇದು ನಿಮ್ಮ ಶ್ವಾಸಕೋಶಗಳಿಗೆ ಸಂಪೂರ್ಣವಾಗಿ ಪ್ರಯೋಜನ ನೀಡಿಲ್ಲದಿದ್ದರೂ, ಶ್ವಾಸಕೋಶವನ್ನು ಶುದ್ದೀಕರಿಸಲು ಸಹಾಯ ಮಾಡುತ್ತದೆ.
ಕಬ್ಬಿನ ರಸವು ಶ್ವಾಸಕೋಶದಿಂದ ವಿಷ ಮತ್ತು ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಶ್ವಾಸಕೋಶವನ್ನು ಸಂಪೂರ್ಣವಾಗಿ ಶುದ್ಧೀಕರಿಸದಿದ್ದರೂ, ಬೆಂಬಲವನ್ನು ನೀಡುತ್ತದೆ. ಹಾಗೆಯೇ ಅವುಗಳನ್ನು ಸಂಪೂರ್ಣವಾಗಿ ಶುದ್ಧೀಕರಿಸಲು ಸಹಾಯ ಮಾಡುತ್ತದೆ. ನೀವೇನಾದರೂ, ಸಂಪೂರ್ಣ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ, ಧೂಮಪಾನದ ಅಭ್ಯಾಸವನ್ನು ತ್ಯಜಿಸುವುದು ಅಗತ್ಯವಾಗಿದೆ.
ಕಬ್ಬಿನ ರಸವು ದೇಹಕ್ಕೆ ಹೆಚ್ಚು ನೀರು ಒದಗಿಸುವ ಪಾನೀಯವಾಗಿದೆ. ಧೂಮಪಾನಿಗಳಿಗೆ ಬಾಯಿ, ಗಂಟಲು ಮತ್ತು ಉಸಿರಾಟದ ಪ್ರದೇಶಗಳು ಒಣಗುವುದು ಸಾಮಾನ್ಯ. ಹಾಗಾಗಿ ಕಬ್ಬಿನ ರಸವನ್ನು ಕುಡಿಯುವುದರಿಂದ ಉಸಿರಾಡುವಾಗ ಉರಿಯುವ ಸಂವೇದನೆಯನ್ನು ಕಡಿಮೆ ಮಾಡುತ್ತದೆ. ಅತಿಯಾದ ಧೂಮಪಾನವು ವ್ಯಕ್ತಿಯ ಶ್ವಾಸಕೋಶದ ವಾಯುಮಾರ್ಗಗಳಲ್ಲಿ ಉರಿಯನ್ನು ಹೆಚ್ಚಿಸುತ್ತದೆ.
ಕಬ್ಬಿನ ರಸದಲ್ಲಿರುವ ನೈಸರ್ಗಿಕ ಉರಿಯೂತ ನಿವಾರಕ ಗುಣಗಳು ಉಸಿರಾಡುವ ಮಾರ್ಗದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅತಿಯಾದ ಧೂಮಪಾನವು, ಧೂಮಪಾನಿಗಳ ರೋಗನಿರೋಧಕ ಶಕ್ತಿಯನ್ನು ಸ್ವಾಭಾವಿಕವಾಗಿ ದುರ್ಬಲಗೊಳಿಸುತ್ತದೆ. ಇದರಿಂದಾಗಿ ಅವರು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಅಂತವರು ಕಬ್ಬಿನ ರಸವನ್ನು ಸೇವಿಸುವುದರಿಂದ ಇದರಲ್ಲಿರುವ ಜೀವಸತ್ವಗಳು, ಕಬ್ಬಿಣ ಮತ್ತು ಮೆಗ್ನೀಸಿಯಮ್ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.
ಧೂಮಪಾನ ಮಾಡುವುದರಿಂದ ದೇಹದಲ್ಲಿ ಲೋಳೆಯ ರೂಪದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದು ಗಂಟಲಲ್ಲಿ ಕೆಮ್ಮು, ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು. ಕಬ್ಬಿನ ರಸವನ್ನು ಸೇವಿಸುವುದರಿಂದ ನೀರಿನ ಅಂಶವನ್ನು ಹೆಚ್ಚಿಸುವ ಮೂಲಕ ಲೋಳೆಯನ್ನು ತೆಳುಗೊಳಿಸಲು ಸಹಾಯ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.