ಸಾಂದರ್ಭಿಕ ಚಿತ್ರ 
ಆಹಾರ

ಹೋಟೆಲ್ ಪದಾರ್ಥ ಬಿಡಿ, ಮನೆಯಲ್ಲೇ ಗಮ್ಮತ್ತಾದ ಕಾಜು ಪನೀರ್ ಕಡಾಯಿ ಮಾಡಿ! Kaju Paneer Kadai

Kaju Paneer Kadai: ಕಾಜು ಪನ್ನೀರ್ ಕಡಾಯಿ ಒಂದು ರುಚಿಕರವಾದ, ಕ್ರೀಮಿ ಮತ್ತು ಸ್ವಲ್ಪ ಶ್ರೀಮಂತ ಗ್ರೇವಿ ತರಹದ ತರಕಾರಿ ರೆಸಿಪಿ. ಇದನ್ನು ಸಾಮಾನ್ಯವಾಗಿ ನಾನ್, ರೊಟ್ಟಿ, ಚಪಾತಿ ಅಥವಾ ಪುಲಾವ್ ಜೊತೆಗೆ ಸೇವಿಸುತ್ತಾರೆ. ಇದೊಂದು ಕಡಾಯಿ ಪನ್ನೀರ್‌ಗೆ ಸ್ವಲ್ಪ ವ್ಯತ್ಯಾಸವಾಗಿ ಗೋಡಂಬಿಯನ್ನು ಹೆಚ್ಚು ಬಳಸಿ ಕ್ರೀಮಿ ಗ್ರೇವಿ ಮಾಡುವ ಶೈಲಿಯಾಗಿದೆ. ಹಾಗಿದ್ದರೆ ಇನ್ಯಾಕೆ ತಡ ಈಗ್ಲೇ ಮಾಡಿ ರುಚಿಕರ ಕಾಜು ಪನೀರ್​ ಕಡಾಯಿ..

ಬೇಕಾಗುವ ಪದಾರ್ಥಗಳು

* 200 ಗ್ರಾಂ ಪನ್ನೀರ್
* 15–20 ಗೋಡಂಬಿ
* 3 ಟೇಬಲ್ ಸ್ಪೂನ್ ತುಪ್ಪ
* 3-4 ಲವಂಗ
* 2 ಏಲಕ್ಕಿ
* 1 ಚಮಚ ಜೀರಿಗೆ
* 2 ಈರುಳ್ಳಿ
* 1 ½ ಚಮಚ ಬೆಳ್ಳುಳ್ಳಿ-ಶುಂಠಿ ಪೇಸ್ಟ್
* 3-4 ಟೊಮ್ಯಾಟೋ
* ½ ಚಮಚ ಅರಿಶಿಣ
* 1–1½ ಚಮಚ ಮೆಣಸಿನ ಪುಡಿ
* 1 ಚಮಚ ಧನಿಯ ಪುಡಿ
* ½ ಚಮಚ ಜೀರಿಗೆ ಪುಡಿ
* ¾ ಚಮಚ ಗರಂ ಮಸಾಲಾ
* 1 ಚಮಚ ಕಸೂರಿ ಮೆಥಿ
* ಉಪ್ಪು
* 1 ಕಪ್ ನೀರು
* ಕೊತ್ತುಂಬರಿ ಸೊಪ್ಪು

ಮಾಡುವ ವಿಧಾನ

ಮೊದಲು ಒಂದು ಬಾಣಲಿಯಲ್ಲಿ 10–12 ಕಾಜುಗಳನ್ನು ಸ್ವಲ್ಪ ತುಪ್ಪ ಸೇರಿಸಿ ಹುರಿದುಕೊಳ್ಳಿ. ಅದೇ ಕಡಾಯಿಗೆ 1 ಟೇಬಲ್ ಸ್ಪೂನ್ ಎಣ್ಣೆ ಹಾಕಿ, ಪನ್ನೀರ್ ಕ್ಯೂಬ್‌ಗಳನ್ನು ಸ್ವಲ್ಪ ಹುರಿದು ತೆಗೆದಿಟ್ಟುಕೊಳ್ಳಿ. ನಂತರ ಅದೇ ಬಾಣಲೆಗೆ ಲವಂಗ, ಏಲಕ್ಕಿ, ಜೀರಿಗೆ ಹಾಕಿ ಸುಗಂಧ ಬರುವವರೆಗೆ ಹುರಿದುಕೊಳ್ಳಿ. ನಂತರ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸ್ವಲ್ಪ ಫ್ರೈ ಮಾಡಿಕೊಳ್ಳಿ.
ಆ ಮಿಶ್ರಣಕ್ಕೆ ಮೊದಲು ರುಬ್ಬಿಕೊಂಡಿರುವ ಕಾಜು ಪೇಸ್ಟ್, ಟೊಮೊಟೋ, ಉಪ್ಪು, ನೀರು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಈ ಮಿಶ್ರಣಕ್ಕೆ ಗರಂ ಮಸಾಲಾ, ಕಸೂರಿ ಮೇಥಿ ಸೇರಿಸಿರಿ. ಹುರಿದ ಪನ್ನೀರ್ ಮತ್ತು ಕಾಜು ಸೇರಿಸಿ 2 ನಿಮಿಷ ಕುದಿಸಿ. ಗ್ರೇವಿ ದಪ್ಪವಾಗಬೇಕು, ತುಂಬಾ ತೆಳುವಾಗಬಾರದು. ಕೊತ್ತುಂಬರಿ ಸೊಪ್ಪು ಸೇರಿಸಿ ರೊಟ್ಟಿ, ಚಪಾತಿಯೊಂದಿಗೆ ಸೇವಿಸಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.