Idli Batter Betel Leaf: 
ಆಹಾರ

ಬೇಸಿಗೆಯಲ್ಲಿ ಇಡ್ಲಿ ಹಿಟ್ಟು ಅತಿಯಾಗಿ ಉಬ್ಬಿ, ಹುಳಿಯಾಗುತ್ತಿದೆಯೇ?; ಮೃದುವಾದ ಇಡ್ಲಿ, ದೋಸೆಗಾಗಿ ಈ ಎಲೆ ಬಳಸಿ..Betel Leaf

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆಯ ಶಾಖಕ್ಕೆ ಇಡ್ಲಿ ಹಿಟ್ಟು ಬೇಗನೆ ಹುಳಿಯಾಗುವುದು, ಉಬ್ಬುವುದನ್ನು ತಪ್ಪಿಸಲು ಹೀಗೆ ಮಾಡಿ
  • ಹಿಟ್ಟಿನ ಮೇಲೆ ವೀಳ್ಯದೆಲೆ ಇಡುವುದರಿಂದ ಹುದುಗುವಿಕೆ ಪ್ರಕ್ರಿಯೆ ಎಲೆಯ ನಿಯಂತ್ರಣದಲ್ಲಿ ಇರುತ್ತದೆ
  • ವೀಳ್ಯದೆಲೆ ಬಳಸುವ ಈ ಸುಲಭ ಉಪಾಯವು ಮೃದುವಾದ ಇಡ್ಲಿ ಮಾಡಿಕೊಳ್ಳಲು ಸಹಾಯ ಮಾಡುತ್ತದೆ
Idli Batter Betel Leaf: ಬೇಸಿಗೆಯಲ್ಲಿ ಕಾಡುವ ಹೆಚ್ಚು ತಾಪಮಾನವು ಹಾಲನ್ನು ಬೇಗನೆ ಹೆಪ್ಪುಗಟ್ಟುವಂತೆ ಮಾಡಿ, ಹುಳಿಯಾಗುವಂತೆ ಮಾಡುತ್ತದೆ. ಅದರಂತೆ, ರಾತ್ರಿ ರುಬ್ಬಿಟ್ಟ ದೋಸೆ ಮತ್ತು ಇಡ್ಲಿ ಹಿಟ್ಟು ಹೆಚ್ಚು ಉಷ್ಣತೆಯಿಂದ ಬೇಗನೆ ಉಬ್ಬಿ, ಹುಳಿಯಾಗಿ ಮುಂಜಾನೆ ಬಳಕೆಗೆ ಅನುಪಯುಕ್ತವಾಗಿಬಿಡುತ್ತದೆ. ಇದನ್ನು ಕಾಪಾಡಿಕೊಳ್ಳುವುದು ಹೇಗೆ ಎನ್ನುವುದೇ ಎಲ್ಲರ ತಲೆನೋವು.
ಇಡ್ಲಿ, ದೋಸೆ ಹಿಟ್ಟು (Idli, Dosa Batter) ಅತಿಯಾಗಿ ಉಬ್ಬಿ ಹುಳಿಯಾಗಿ ತಿನ್ನಲು ಆಗದಂತೆ ಇರುವುದನ್ನು ತಡೆಯಲು ಸುಲಭ ಟಿಪ್ಸ್​ ಇದೆ. ನಮ್ಮ ಪೂರ್ವಜರು ಈ ವಿಧಾನವನ್ನು ಬಳಕೆ ಮಾಡುತ್ತಿದ್ದರು. ಕಾಲಾನಂತರ ಆಧುನಿಕ ಜಗತ್ತಿನಲ್ಲಿ ಹಲವರು ರೆಡಿಮೇಡ್​​ ಹಿಟ್ಟಿಗೆ ಒಗ್ಗಿಕೊಂಡು ಹಣ ಖರ್ಚು ಮಾಡುತ್ತಿದ್ದಾರೆ. ಅದರ ಬದಲಾಗಿ ಈ ಟಿಪ್ಸ್​ ಬಳಕೆ ಮಾಡಿ. ಮನೆಯಲ್ಲೇ ಆರೋಗ್ಯಕರ ದೋಸೆ ಇಡ್ಲಿ ಹಿಟ್ಟನ್ನು ತಯಾರಿ ಮಾಡಿಕೊಳ್ಳಬಹುದು.

ಮಲೆನಾಡಿಗರ ವಾಣಿಜ್ಯ ಬೆಲೆ ವೀಳ್ಯದೆಲೆ

ಮಲೆನಾಡು ಜನರ ಆದಾಯವಾಗಿರುವ ವೀಳ್ಯದೆಲೆಯು ಇಡ್ಲಿ ಹಿಟ್ಟು ಹದವಾಗಿ ಹುದಗುವುದನ್ನು ನಿಯಂತ್ರಿಸಿ, ಹಿಟ್ಟಿನ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕಾರಿ ಮಾಡುತ್ತದೆ ಎನ್ನಲಾಗಿದೆ. ಹಾಗಾದ್ರೆ ಇದನ್ನು ನಾವು ಹಿಟ್ಟು ತಯಾರಿಸಿದಾಗ ಬಳಕೆ ಮಾಡೋದು ಹೇಗೆ ಅನ್ನೋದು ಈ ಲೇಖನದಲ್ಲಿ ವಿವರಿಸಲಾಗಿದೆ.
ವೀಳ್ಯದೆಲೆಯಲ್ಲಿ ಆಂಟಿಮೈಕ್ರೋಬಿಯಲ್​ ಮತ್ತು ಕಿಣ್ವಕ ಗುಣಲಕ್ಷಣಗಳು ಇವೆ. ಇವು ಪರಿಸರವನ್ನು ಸೂಕ್ಷ್ಮ ರೀತಿಯಲ್ಲಿ ಹ್ಯಾಂಡಲ್​ ಮಾಡುತ್ತದೆ. ನೀವು ರಾತ್ರಿ ಹಿಟ್ಟನ್ನು ರುಬ್ಬಿ ಅದಕ್ಕೆ ಒಂದು ಎಲೆಯನ್ನು ಹಾಕಿದಾಗ ಅದುಆರೋಗ್ಯಕರ ಉಬ್ಬುವಿಕೆಗೆ ಸಹಾಯ ಮಾಡುತ್ತದೆ.
  • ಹಿಟ್ಟಿನಲ್ಲಿ ಅನಗತ್ಯ ಬ್ಯಾಕ್ಟೀರಿಯಾ ಬೆಳೆಯಲು ತಡೆಹಿಡಿಯುತ್ತದೆ.
  • ಹಿಟ್ಟು ಎಷ್ಟು ಉಬ್ಬಬೇಕೋ ಅಷ್ಟು ಮಾತ್ರ ಹುದುಗಲು ಸಹಾಯ ಮಾಡುತ್ತದೆ. ಇದು ಹಿಟ್ಟು ಉಬ್ಬುವುದನ್ನು ಏಕಾಏಕಿ ನಿಲ್ಲಿಸೋದಿಲ್ಲ. ಅನಗತ್ಯವಾಗಿ ಹುದುಗೋದನ್ನು ನಿಯಂತ್ರಿಸುತ್ತದೆ.

ಬಳಕೆ ಮಾಡೋದು ಹೇಗೆ?

  • ಇಡ್ಲಿ ಹಿಟ್ಟನ್ನು ರುಬ್ಬಿದ ನಂತರ, ಅದನ್ನು ಪಾತ್ರೆಗೆ ಸುರಿದು ಚೆನ್ನಾಗಿ ಕಲಸಿ.
  • ಚೆನ್ನಾಗಿ ಕಲಿಸಿದ ಇಡ್ಲಿ ಹಿಟ್ಟಿಗೆ ತೊಳೆದ ವೀಳ್ಯದೆಲೆಯನ್ನು ಹಾಕಿ, ನೆನಪಿರಲಿ ಎಲೆಯ ಹಿಂಭಾಗ ಹಿಟ್ಟನ್ನು ಸ್ಪರ್ಶಿಸಬೇಕು ಮುಂಭಾಗವಲ್ಲ.
  • ಪಾತ್ರೆಯನ್ನು ಮುಚ್ಚಳದಿಂದ ಮುಚ್ಚಿಡಿ.
  • ಹಿಟ್ಟು ಸರಿಯಾಗಿ ಉಬ್ಬಿದ ನಂತರ, ಇಡ್ಲಿ ಮಾಡುವ ಮೊದಲು ಎಲೆಯನ್ನು ತೆಗೆದು ಹಾಕಿ.

ಇದರಿಂದ ಆಗುವ ಪ್ರಯೋಜನಳೇನು?

  • ವೀಳ್ಯದೆಲೆಯಲ್ಲಿರುವ ನೈಸರ್ಗಿಕ ಗುಣಗಳು ಹಿಟ್ಟು ಅತಿಯಾಗಿ ಹುಳಿಯಾಗದಂತೆ ನೋಡಿಕೊಳ್ಳುತ್ತವೆ. ಅವಶ್ಯಕತೆಗಿಂತಲೂ ಹೆಚ್ಚಾಗಿ ಹುಬ್ಬುವುದನ್ನು ನಿಯಂತ್ರಿಸುತ್ತದೆ.
  • ದೋಸೆ, ಮತ್ತು ಇಡ್ಲಿ ಹಿಟ್ಟಿಗೆ ವೀಳ್ಯೆದೆಲೆ ಹಾಕುವ ಟ್ರಿಕ್ ಬಳಸುವುದರಿಂದ ಬೇಸಿಗೆಯಲ್ಲೂ ಇಡ್ಲಿಗಳು ಮಲ್ಲಿಗೆಯಂತೆ ಮೃದುವಾಗಿ ಬರುತ್ತವೆ.
  • ಹಿಟ್ಟು ಹದವಾಗಿ ಉಬ್ಬುವುದರಿಂದ ಇಡ್ಲಿಯ ನೈಜ ರುಚಿ ಹಾಗೆಯೇ ಉಳಿಯುತ್ತದೆ, (ಏಜೆನ್ಸೀಸ್)