Sabudana Kheer (ಸಾಂದರ್ಭಿಕ ಚಿತ್ರ) 
ಆಹಾರ

ಉಪವಾಸದ ವೇಳೆ ಹೊಟ್ಟೆ ತುಂಬಿರಬೇಕೆ? ಸಬ್ಬಕ್ಕಿ ಪಾಯಸಕ್ಕಿಂತ ಬೆಸ್ಟ್ ಮತ್ತೊಂದಿಲ್ಲ.. Sabudana Kheer

Sabudana Kheer: ಉಪವಾಸದ ಸಮಯದಲ್ಲಿ ಸಬ್ಬಕ್ಕಿ ಪಾಯಸ ಸೇವಿಸಲು ಮುಖ್ಯ ಕಾರಣ ಇದರಲ್ಲಿರುವ ಹೇರಳವಾದ ಕಾರ್ಬೋಹೈಡ್ರೇಟ್ಸ್. ಇದು ದೇಹಕ್ಕೆ ತಕ್ಷಣದ ಶಕ್ತಿ ನೀಡುತ್ತದೆ ಮತ್ತು ಹೊಟ್ಟೆ ತುಂಬಿದ ಅನುಭವ ಉಂಟುಮಾಡುತ್ತದೆ. ಅಲ್ಲದೆ, ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ದೇಹದ ಉಷ್ಣತೆಯನ್ನು ಸಮತೋಲನದಲ್ಲಿಟ್ಟು, ಉಪವಾಸದ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೇಕಾಗುವ ಸಾಮಗ್ರಿಗಳು

* ½ ಕಪ್ ಸಬ್ಬಕ್ಕಿ
* 3 ರಿಂದ 4 ಕಪ್ ಹಾಲು
* ½ ಕಪ್ ಸಕ್ಕರೆ
* ½ ಚಮಚ ಏಲಕ್ಕಿ ಪುಡಿ
* ಗೋಡಂಬಿ ಮತ್ತು ದ್ರಾಕ್ಷಿ
* 2 ಚಮಚ ತುಪ್ಪ
* ಸ್ವಲ್ಪ ಕೇಸರಿ ದಳ

ಮಾಡುವ ವಿಧಾನ

ಮೊದಲು ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು, 1 ಗಂಟೆ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಒಂದು ಪಾತ್ರೆಯಲ್ಲಿ 2 ಕಪ್ ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿ ಬಂದಾಗ ನೆನೆಸಿದ ಸಬ್ಬಕ್ಕಿಯನ್ನು ಹಾಕಿ. ನಂತರ ಅದನ್ನು ಚೆನ್ನಾಗಿ ಬೇಯಿಸಿಕೊಳ್ಳಿ.
ಸಬ್ಬಕ್ಕಿ ಬೆಂದ ನಂತರ ಅದಕ್ಕೆ ಕಾಯಿಸಿಟ್ಟ ಹಾಲನ್ನು ಸೇರಿಸಿ. ಮಧ್ಯಮ ಉರಿಯಲ್ಲಿ ಸಬ್ಬಕ್ಕಿ ಮತ್ತು ಹಾಲು ಚೆನ್ನಾಗಿ ಬೆರೆತು ಪಾಯಸ ದಪ್ಪವಾಗುವವರೆಗೆ ಕುದಿಸಿ. ತಳ ಹಿಡಿಯದಂತೆ ಕೈಯಾಡಿಸುತ್ತಾ ಇರಿ. ಪಾಯಸ ಸ್ವಲ್ಪ ದಪ್ಪಗಾದ ಮೇಲೆ ಸಕ್ಕರೆಯನ್ನು ಸೇರಿಸಿ. ಸಕ್ಕರೆ ಸಂಪೂರ್ಣವಾಗಿ ಕರಗಿದ ನಂತರ 2-3 ನಿಮಿಷ ಕುದಿಸಿ.
ಒಂದು ಸಣ್ಣ ಪ್ಯಾನ್‌ನಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹಾಕಿ ಕೆಂಪಾಗುವವರೆಗೆ ಹುರಿಯಿರಿ. ಇದನ್ನು ಪಾಯಸಕ್ಕೆ ಸೇರಿಸಿ ಮಿಕ್ಸ್ ಮಾಡಿ ಸೇವಿಸಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.