ಸಾಂದರ್ಭಿಕ ಚಿತ್ರ 
ಆಹಾರ

5 ನಿಮಿಷದಲ್ಲಿ ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ಚಟ್‌ಪಟ್ ಚಟ್ನಿ! ಒಮ್ಮೆ ಟ್ರೈ ಮಾಡಿ..Recipe

Recipe: ಚಳಿಗಾಲ ಬೇರೆ ಪ್ರಾರಂಭವಾಗಿದೆ. ಬಾಯಿ ತಿನ್ನೋಕೆ ಹದ ಹದ ಕೇಳ್ತಿದೆ. ಏನು ತಿನ್ಬೇಕು ಅಂತ ಯೋಚನೆ ಮಾಡ್ತಿದ್ದೀರಾ? ನಿಮ್ಮ ಮನೆಯಲ್ಲಿರುವ ಕೆಲವೇ ಕೆಲವು ಪದಾರ್ಥಗಳು ಬಳಸಿಕೊಂಡು 10 ನಿಮಿಷಗಳ ಒಳಗೆ ಚಟಾಪಟಾ ಅಂತ ಈ ಚಟ್ನಿ ತಯಾರಿಸಿ ರೊಟ್ಟಿ, ಚಪಾತಿ ಜೊತೆ ಸವಿಯಿರಿ..

ಬೇಕಾಗುವ ಪದಾರ್ಥಗಳು

* 1 ಕಪ್​ ಶೆಂಗಾ
1 ಚಮಚ ಜೀರಿಗೆ
4 ಎಸಳು ಬೆಳ್ಳುಳ್ಳಿ‘
1 ಕಪ್​ ಈರುಳ್ಳಿ
1 ಕಪ್​ ಟೊಮಟೋ
2 ಹಸಿ ಮೆಣಸಿನಕಾಯಿ
ಕೊತ್ತುಂಬರಿ ಸೊಪ್ಪು 
1 ಚಮಚ ಖಾರದ ಪುಡಿ
ರುಚಿಗೆ ಉಪ್ಪು 
ಮಾಡುವ ವಿಧಾನ
ಮೊದಲು ಒಂದು ಕಪ್​ಗೆ ಶೇಂಗಾ, ಬೆಳ್ಳುಳ್ಳಿ, ಜೀರಿಗೆ ಹಾಕಿ ಕುಟ್ಟಿಕೊಳ್ಳಿ. ನಂತರ ಮತ್ತೊಂದು ಬಟ್ಟಲಿಗೆ ಈರುಳ್ಳಿ, ಟೊಮಟೋ,  ಹಸಿ ಮೆಣಸಿನಕಾಯಿ, ಕೊತ್ತುಂಬರಿ ಸೊಪ್ಪು ಹಾಕಿ ಅದಕ್ಕೆ ಕುಟ್ಟಿಕೊಂಡಿರುವ ಮಿಶ್ರಣವನ್ನು ಸೇರಿಸಿ. ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್​  ಮಾಡಿ ನಂತರ ಒಂದು ಸ್ವಲ್ಪ ಬಿಸಿ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.