ಕೆಂಪು ಅಥವಾ ಬಿಳಿ? ಯಾವ ಡ್ರ್ಯಾಗನ್ ಫ್ರೂಟ್ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು?
- ಕೆಂಪು ಅಥವಾ ಬಿಳಿ ಡ್ರ್ಯಾಗನ್ ಫ್ರೂಟ್ ಯಾವುದು ಉತ್ತಮ?
- ಕೆಂಪು ಡ್ರ್ಯಾಗನ್ ಫ್ರೂಟ್‌ನಲ್ಲಿದೆ ಬೆಟಾಸಯನಿನ್
- ಎರಡೂ ಹಣ್ಣುಗಳಲ್ಲೂ ಇದೆ ಫೈಬರ್ ಮತ್ತು ವಿಟಮಿನ್ ಸಿ
Dragon Fruit Benefits: ಡ್ರ್ಯಾಗನ್ ಫ್ರೂಟ್ ಈಗ ಬಹುತೇಕ ಎಲ್ಲರಿಗೂ ಗೊತ್ತಿರುವ ಹೆಲ್ತಿ ಹಣ್ಣು. ಹೊರಗೆ ಗುಲಾಬಿ ಬಣ್ಣದಲ್ಲಿದ್ದು, ಒಳಗೆ ಕಪ್ಪು ಬೀಜಗಳ ಜೊತೆ ಕೆಂಪು ಅಥವಾ ಬಿಳಿ ತಿರುಳು ಇರುತ್ತದೆ. ಎರಡೂ ನೋಡಲು ಒಂದೇ ರೀತಿ ಕಂಡರೂ ರುಚಿ, ಪೋಷಕಾಂಶ ಹಾಗೂ ಆರೋಗ್ಯ ಪ್ರಯೋಜನಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ.
ಕೆಂಪು ಡ್ರ್ಯಾಗನ್ ಫ್ರೂಟ್ ಏನು ಸ್ಪೆಷಲ್?
ಕೆಂಪು ಅಥವಾ ಮೆಜೆಂಟಾ ಬಣ್ಣದ ತಿರುಳಿರುವ ಡ್ರ್ಯಾಗನ್ ಫ್ರೂಟ್ ಸಾಮಾನ್ಯವಾಗಿ ಹೆಚ್ಚು ಸಿಹಿಯಾಗಿರುತ್ತದೆ. ಇದರ ಗಾಢ ಬಣ್ಣಕ್ಕೆ ಬೆಟಾಸಯನಿನ್ ಎಂಬ ಆ್ಯಂಟಿಆಕ್ಸಿಡೆಂಟ್ ಕಾರಣ. ಇದು ದೇಹದಲ್ಲಿನ ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಕೆಂಪು ಡ್ರ್ಯಾಗನ್ ಫ್ರೂಟ್‌ನಲ್ಲಿದೆ ಬೆಟಾಸಯನಿನ್ ಇನ್ನು, ಇದರಲ್ಲಿರುವ ನಾರಿನಂಶ ಮತ್ತು ವಿಟಮಿನ್ ಸಿ ಜೀರ್ಣಕ್ರಿಯೆ ಹಾಗೂ ರೋಗನಿರೋಧಕ ಶಕ್ತಿಗೆ ಸಹಾಯ ಮಾಡುತ್ತವೆ. ಜೊತೆಗೆ, ಹೃದಯ ಮತ್ತು ತ್ವಚೆಯ ಆರೋಗ್ಯಕ್ಕೂ ಕೆಂಪು ಡ್ರ್ಯಾಗನ್ ಫ್ರೂಟ್ ಪ್ರಯೋಜನಕಾರಿಯಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಬಿಳಿ ಡ್ರ್ಯಾಗನ್ ಫ್ರೂಟ್‌ನಲ್ಲೇನಿದೆ?
ಬಿಳಿ ತಿರುಳಿನ ಡ್ರ್ಯಾಗನ್ ಫ್ರೂಟ್ ರುಚಿಯಲ್ಲಿ ಮೃದುವಾಗಿದ್ದು, ಲೈಟ್ ಆಗಿ ಸಿಹಿಯಾಗಿರುತ್ತದೆ. ಇದರಲ್ಲಿ ನಾರಿನಂಶ ಮತ್ತು ನೀರಿನಂಶ ಉತ್ತಮವಾಗಿದ್ದು, ಜೀರ್ಣಕ್ರಿಯೆ ಹಾಗೂ ಕರುಳಿನ ಆರೋಗ್ಯಕ್ಕೆ ಸಹಾಯ ಮಾಡಬಹುದು. ಕಡಿಮೆ ಕ್ಯಾಲೊರಿ ಇರುವುದರಿಂದ ತೂಕ ನಿಯಂತ್ರಣ ಮಾಡುವವರಿಗೂ ಇದು ಉತ್ತಮ ಆಯ್ಕೆ ಎನ್ನಬಹುದು.
ಕರುಳಿನ ಆರೋಗ್ಯಕ್ಕೆ ಬಿಳಿ ಡ್ರ್ಯಾಗನ್ ಫ್ರೂಟ್ ಸಹಕಾರಿ ಹಾಗಾದ್ರೆ ಯಾವುದು ಬೆಸ್ಟ್?
ಆ್ಯಂಟಿಆಕ್ಸಿಡೆಂಟ್‌ಗಳು ಬೇಕು ಅನ್ನೋದಾದ್ರೆ ಕೆಂಪು ಡ್ರ್ಯಾಗನ್ ಫ್ರೂಟ್ ಉತ್ತಮ ಆಯ್ಕೆಯಾಗಬಹುದು. ತೂಕ ನಿಯಂತ್ರಣಕ್ಕೆ ಗಮನ ಕೊಡ್ತಿದ್ದರೆ ಬಿಳಿ ಡ್ರ್ಯಾಗನ್ ಫ್ರೂಟ್ ಆಯ್ಕೆ ಮಾಡಬಹುದು.
ಒಂದನ್ನೇ ಬೆಸ್ಟ್ ಅಂತ ಹೇಳೋದಕ್ಕಿಂತ, ಎರಡೂ ಬಗೆಯ ಡ್ರ್ಯಾಗನ್ ಫ್ರೂಟ್‌ಗಳನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸೋದು ಉತ್ತಮ. ಯಾವುದೇ ಹಣ್ಣು ನಿರ್ದಿಷ್ಟ ಕಾಯಿಲೆಗೆ ಚಿಕಿತ್ಸೆ ನೀಡುತ್ತದೆ ಎಂದು ಭಾವಿಸಬಾರದು. (ಏಜೆನ್ಸೀಸ್)