ಸಾಂದರ್ಭಿಕ ಚಿತ್ರ 
ಆಹಾರ

ಬ್ಯಾಚುಲರ್ಸ್​ಗಳೇ ದಿನ ಒಂದೇ ಆಹಾರ ತಿಂದು ಬೇಸರ ಆಗಿದ್ಯಾ? ಹಾಗಿದ್ದರೆ, ಈ ಕಿಚಡಿ ಒಮ್ಮೆ ಟ್ರೈ ಮಾಡಿ...Recipe

Recipe: ಕಿಚಡಿ ಒಂದು ಸರಳ, ಆರೋಗ್ಯಕರ ಮತ್ತು ಆರಾಮದಾಯಕವಾದ ಆಹಾರ. ಇದರ ಸೇವನೆಯು ಹೊಟ್ಟೆ ತುಂಬಿಸುವುದರ ಜೊತೆಗೆ ರುಚಿಯನ್ನು ಹೆಚ್ಚಿಸುತ್ತದೆ. ಈ ಖಾದ್ಯವನ್ನು ಕೆಲವೇ ನಿಮಿಷಗಳಲ್ಲಿ ಮಾಡಬಹುದು ಜೊತೆಗೆ ಸುಲಭ ವಿಧಾನವು ಆಗಿರುತ್ತದೆ. ಹಾಗಿದ್ದರೆ, ಏಕೆ ತಡ ಈಗಲೇ ತಯಾರಿಸಿ...

ಬೇಕಾಗುವ ಪದಾರ್ಥಗಳು

* ½ ಕಪ್ ಹೆಸರುಬೇಳೆ
* ½ ಕಪ್ ಅಕ್ಕಿ
* 1 ಈರುಳ್ಳಿ
* 1 ಟೊಮ್ಯಾಟೋ
* 2-3 ಹಸಿ ಮೆಣಸಿನಕಾಯಿ
* 1 ಇಂಚು ಶುಂಠಿ
* 2 ಟೇಬಲ್‌ಸ್ಪೂನ್ ತುಪ್ಪ ಅಥವಾ ಎಣ್ಣೆ
* 1 ಟೀಸ್ಪೂನ್ ಜೀರಿಗೆ
* ಸ್ವಲ್ಪ ಇಂಗು
* ½ ಚಮಚ ಅರಿಶಿನ
* ರುಚಿಗೆ ತಕ್ಕಷ್ಟು ಉಪ್ಪು
* 4-5 ಕಪ್ ನೀರು
* ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಹೆಸರುಬೇಳೆ ಮತ್ತು ಅಕ್ಕಿಯನ್ನು ಒಟ್ಟಿಗೆ 2-3 ಬಾರಿ ಚೆನ್ನಾಗಿ ತೊಳೆದು 15-20 ನಿಮಿಷ ನೆನೆಸಿ ಇಟ್ಟುಕೊಳ್ಳಿ. ನಂತರ ಒಂದು ಕುಕ್ಕರ್​ಗೆ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ, ಅದಕ್ಕೆ ಇಂಗು, ಸಾಸಿವೆ, ಜೀರಿಗೆ ಹಾಕಿ ಸಿಡಿಯಲು ಬಿಡಿ ಇದಾದ ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸು, ಶುಂಠಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಟೊಮಾಟೋ ಸೇರಿಸಿ 1-2 ನಿಮಿಷ ಹುರಿಯಿರಿ. ನೆನೆಸಿದ ಬೇಳೆ-ಅಕ್ಕಿ ಹಾಕಿ, ಉಪ್ಪು ಸೇರಿಸಿ 1-2 ನಿಮಿಷ ಮಿಶ್ರಣ ಮಾಡಿ ಕೊತ್ತುಂಬರಿ ಸೇರಿಸಿ ಮುಚ್ಚಳ ಮುಚ್ಚಿ. 3-4 ಸೀಟಿ ಬರುವವರೆಗೂ ಬೇಯಿಸಿ. ನಂತರ ತುಪ್ಪ ಸೇರಿಸಿ ಊಟ ಮಾಡಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.