Weight loss recipe (ಸಾಂದರ್ಭಿಕ ಚಿತ್ರ) 
ಆಹಾರ

ತೂಕ ಇಳಿಸಲು ಬೆಸ್ಟ್ ಲಂಚ್: ಪ್ರೋಟೀನ್ ಸಮೃದ್ಧ ಸಾಲ್ಮನ್ ಮತ್ತು ಫೈಬರ್ ಭರಿತ ಕ್ವಿನೋವಾ ಮಿಕ್ಸ್ Weight loss recipe

Weight loss recipe: ತೂಕ ಇಳಿಸಿಕೊಳ್ಳುವ ಹಾದಿ ಸುಲಭವೇನಲ್ಲ. ಅದಕ್ಕೆ ಅದರದ್ದೇ ಆದ ಪರಿಶ್ರಮ ಇರುತ್ತದೆ. ಆದಾಗ್ಯೂ, ಪ್ರೋಟೀನ್ ಸಮೃದ್ಧ ಸಾಲ್ಮನ್ ಮತ್ತು ಫೈಬರ್ ಭರಿತ ಕ್ವಿನೋವಾ ಮಿಕ್ಸ್ ಸೇವನೆಯು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತಿದ್ದು, ಯಾರಾದರೂ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಈ ಆಹಾರವನ್ನು ಊಟದಲ್ಲಿ ಬಳಸಬಹುದು. ಹಾಗಿದ್ದರೆ, ಇನ್ಯಾಕೆ ತಡ ಈಗ್ಲೇ ಈ ರೆಸಿಪಿ ಮಾಡೋದು ಹೇಗೆ ಎಂಬುದನ್ನು ಕಲಿಯಿರಿ..

ಬೇಕಾಗುವ ಸಾಮಗ್ರಿಗಳು

* 2 ಸಾಲ್ಮನ್ ಫಿಲೆಟ್‌ಗಳು
* 1 ಕಪ್ ಕ್ವಿನೋವಾ
* 1 ಕಪ್ ಬ್ರೊಕೊಲಿ
* 1 ಸೌತೆಕಾಯಿ
* 1-2 ಕ್ಯಾರೆಟ್
* 5 ಟೊಮೊಟೋ
* 1 ಕ್ಯಾಪ್ಸಿಕಂ
* 2-3 ಚಮಚ ಆಲಿವ್ ಎಣ್ಣೆ
* 1 ನಿಂಬೆ ಹಣ್ಣು
* ಬೆಳ್ಳುಳ್ಳಿ ಸ್ವಲ್ಪ
* ಮಸಾಲೆಗಳು: ಉಪ್ಪು, ಕಾಳು ಮೆಣಸು, ಗರಂ ಮಸಾಲ

ತಯಾರಿಸುವ ವಿಧಾನ

ಓವನ್ ಅನ್ನು 200°C ಗೆ ಪ್ರಿ-ಹೀಟ್ ಮಾಡಿಕೊಳ್ಳಿ. ನಂತರ ಬೇಯಿಸುವ ಟ್ರೇಯನ್ನು ಪಾರ್ಚ್‌ಮೆಂಟ್ ಪೇಪರ್ ಅಥವಾ ಅಲ್ಯೂಮಿನಿಯಂ ಫಾಯಿಲ್‌ನಿಂದ ಹಾಕಿಟ್ಟುಕೊಳ್ಳಿ.
ಇದಾದ ಬಳಿಕ ಬ್ರೊಕೊಲಿ, ಸೌತೆಕಾಯಿ, ಕ್ಯಾರೆಟ್, ಮತ್ತು ಕ್ಯಾಪ್ಸಿಕಂ, ಟೊಮೆಟೋವನ್ನು ಒಂದು ಬೌಲ್‌ನಲ್ಲಿ ಹಾಕಿ. ಅದಕ್ಕೆ ಎಣ್ಣೆ, ಉಪ್ಪು, ಮೆಣಸು, ಬೆಳ್ಳುಳ್ಳಿ ಮತ್ತು ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ,15-20 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ.
1 ಕಪ್ ಕ್ವಿನೋವಾಕ್ಕೆ 2 ಕಪ್ ನೀರು ಅಥವಾ ವೆಜಿಟಬಲ್ ಬ್ರೂತ್ ಹಾಕಿ, ಉಪ್ಪು ಸೇರಿಸಿ 15 ನಿಮಿಷ ಕುದಿಯಲು ಬಿಡಿ. ನಂತರ 5 ನಿಮಿಷ ರೆಸ್ಟ್ ಕೊಡಿ ಮತ್ತು ಫೋರ್ಕ್‌ನಿಂದ ಫ್ಲಫ್ ಮಾಡಿ ಸ್ವಲ್ಪ ಲೆಮನ್ ರಸ ಸೇರಿಸಿ.
ಸಾಲ್ಮನ್ ಫಿಲೆಟ್‌ಗಳನ್ನು ಒಣಗಿಸಿ, ಎಣ್ಣೆ ಹಚ್ಚಿ. ಉಪ್ಪು, ಮೆಣಸು, ಲೆಮನ್ ರಸ ಮತ್ತು ಮಸಾಲೆಗಳನ್ನು ತುಂಬಿ. ತರಕಾರಿಗಳ ಜೊತೆಗೆ ಟ್ರೇಯಲ್ಲಿ ಇರಿಸಿ 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ ನಂತರ ಸೇವಿಸಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.