Paneer Paratha (ಸಾಂದರ್ಭಿಕ ಚಿತ್ರ)
Paneer Paratha: ತೂಕ ಹೆಚ್ಚಿಸಿಕೊಳ್ಳುವ ಪ್ರಕ್ರಿಯೆ ಸುಲಭದ ಮಾತಲ್ಲ. ಅನೇಕರು ಹಲವಾರು ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಆದರೂ ತೂಕ ಹೆಚ್ಚಳವಾಗುವುದಿಲ್ಲ. ಇದರಿಂದ ಅನೇಕ ರೀತಿಯ ಔಷಧಗಳ ಮೊರೆಹೋಗುತ್ತಾರೆ. ಇವು ದೇಹಕ್ಕೆ ಅಪಾಯಕಾರಿಯಾಗಿದ್ದರು ಸೇವಿಸುತ್ತಾರೆ. ಹಾಗಾಗಿ ನೀವೇನಾದರೂ ತೂಕವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಈ ಪನೀರ್ ಪರಾಠ ಸೇವಿಸಿ.
* 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಮಾಡುವ ವಿಧಾನ
ಮೊದಲು ಒಂದು ಬೌಲ್ಗೆ ಗೋಧಿ ಹಿಟ್ಟು, ಉಪ್ಪು, 1 ಚಮಚ ತುಪ್ಪ ಹಾಕಿ ಕಲಸಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ನೀರು ಸೇರಿಸಿ ಚಪಾತಿ ಹದಕ್ಕೆ ನಾದಿಕೊಂಡು 15-20 ನಿಮಿಷ ನೆನೆಯಲು ಬಿಡಿ.
ಇದಾದ ಬಳಿಕ ಪನೀರ್ ಅನ್ನು ಚೂರು ಮಾಡಿ, ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಎಲ್ಲಾ ಮಸಾಲೆ ಪುಡಿಗಳು ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ , ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಿ.
ಚಪಾತಿ ಹಿಟ್ಟನ್ನು ಚಿಕ್ಕ ಉಂಡೆಯನ್ನಾಗಿ ತೆಗೆದುಕೊಂಡು ಅದಕ್ಕೆ ರೆಡಿ ಮಾಡಿಟ್ಟುಕೊಂಡಿರುವ ಪನ್ನೀರ್ ಮಿಶ್ರಣವನ್ನು ಸೇರಿಸಿ ಅಂಚುಗಳನ್ನು ಎಳೆದು ಮುಚ್ಚಿ ಉಂಡೆಯನ್ನಾಗಿ ಮಾಡಿಕೊಳ್ಳಿ. ನಂತರ ಇದನ್ನು ಸ್ವಲ್ಪ ಹಿಟ್ಟು ಉದುರಿಸಿಕೊಂಡು ಪರಾಠ ಹದಕ್ಕೆ ಉದ್ದಿಕೊಳ್ಳಿ. ನಂತರ, ಒಲೆಯ ಮೇಲೆ ತವ ಇಟ್ಟು ಮಾಡಿಟ್ಟುಕೊಂಡಿರುವ ಪರಾಠವನ್ನು ಹಂಚಿನ ಮೇಲೆ ಹಾಕಿ ಬೇಯಿಸಿಕೊಂಡು ಚಟ್ನಿ ಜೊತೆ ಸವಿಯಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.