ಸಾಂದರ್ಭಿಕ ಚಿತ್ರ 
ಆಹಾರ

ಸೈಲೆಂಟ್ ಕಿಲ್ಲರ್ ಕೊಲೆಸ್ಟ್ರಾಲ್‌ಗೆ ಬ್ರೇಕ್ ಹಾಕಲು ಪೌಷ್ಟಿಕತಜ್ಞರ ಟಾಪ್ 5 ಆಯ್ಕೆಗಳು! Cholesterol Control food

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ಚಿಕ್ಕ ವಯಸ್ಸಿನಿಂದಲೇ ಕೊಲೆಸ್ಟ್ರಾಲ್​ ಸಮಸ್ಯೆಗೆ ತುತ್ತಾಗುತ್ತಾರೆ
  • ಈ ಸಮಸ್ಯೆಯು ಹೆಚ್ಚಾಗಲು ಪ್ರಾರಂಭಿಸಿದಾಗ ದೇಹದ ಸ್ಥಿತಿ ಹದಗೆಡಲು ಹೆಚ್ಚು ಸಮಯ ಬೇಕಾಗುವುದಿಲ್ಲ
  • ಕೊಲೆಸ್ಟಾಲ್​ ಒಂದು ಮೇಣದಂಥ ವಸ್ತುವಾಗಿರುತ್ತದೆ. ಇದು ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದರೆ ಮಾತ್ರ ಅಪಾಯಕಾರಿ
Cholesterol Control food: ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ಚಿಕ್ಕ ವಯಸ್ಸಿನಿಂದಲೇ ಕೊಲೆಸ್ಟ್ರಾಲ್​ ಸಮಸ್ಯೆಗೆ ತುತ್ತಾಗುತ್ತಾರೆ. ಈ ಸಮಸ್ಯೆಯು ಹೆಚ್ಚಾಗಲು ಪ್ರಾರಂಭಿಸಿದಾಗ ದೇಹದ ಸ್ಥಿತಿ ಹದಗೆಡಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಇದರಿಂದ ನೀವು ಹೃದಯ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ಜನರು ಆದಷ್ಟು ನಿಮ್ಮ ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ.

ಕೊಲೆಸ್ಟ್ರಾಲ್​ನಿಂದಾಗುವ ಹಾನಿ ಏನು? 

ಕೊಲೆಸ್ಟಾಲ್​ ಒಂದು ಮೇಣದಂಥ ವಸ್ತುವಾಗಿರುತ್ತದೆ. ಇದು ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದರೆ ಮಾತ್ರ ಅಪಾಯಕಾರಿ. ಕೊಲೆಸ್ಟ್ರಾಲ್​ ಹೃದಯದ ಸಣ್ಣ ರಕ್ತನಾಳಗಳ ಒಳಗೆ ಶೇಖರಣೆಯಾಗಿ ಪ್ಲೇಕ್' ಎಂಬ ಪದರವನ್ನು ನಿರ್ಮಿಸುತ್ತದೆ. ಇದರಿಂದ ರಕ್ತನಾಳಗಳು ಕಿರಿದಾಗುತ್ತವೆ. ಹೃದಯಕ್ಕೆ ರಕ್ತ ಪೂರೈಕೆ ಕಡಿಮೆಯಾದಾಗ ಎದೆನೋವು ಅಥವಾ ಹೃದಯಾಘಾತದಿಂದ ಹಿಡಿದು ಬೇರೆ ಕಾಯಿಲೆಗಳಿಗೆ ಎಡೆ ಮಾಡಿಕೊಡಬಹುದು. 
ಹಾಗಾಗಿ ನೀವು ಕೊಲೆಸ್ಟ್ರಾಲ್​ನಿಂದ ದೂರ ಇರಬೇಕೆಂದು ಏನಾದರು ಬಯಸಿದರೆ ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿಕೊಳ್ಳಿ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸುವುದಲ್ಲದೇ, ಕೊಲೆಸ್ಟ್ರಾಲ್​ ಬರದಂತೆ ತಡೆಯುತ್ತದೆ.

ಓಟ್ಸ್

ಓಟ್ಸ್ ಒಂದು ಪ್ರಯೋಜನಕಾರಿ ಆಹಾರವಾಗಿದ್ದು, ಇದರಲ್ಲಿ  ಕರಗುವ ಫೈಬರ್ ಇರುತ್ತದೆ. ಈ ಫೈಬರ್​ ಆಹಾರದಲ್ಲಿರುವ ಹೆಚ್ಚುವರಿ ಕೊಲೆಸ್ಟ್ರಾಲ್​ ಮಟ್ಟವನ್ನು ಕರುಳಿನಲ್ಲಿ ಸಂಗ್ರಹಿಸಿ ಮಲದ ಮೂಲಕ ಹೊರಹಾಕುತ್ತದೆ. ಹಾಗಾಗಿ ನೀವೇನಾದರೂ ಕೊಲೆಸ್ಟ್ರಾಲ್​ ಗುಣಗಳನ್ನು ಹೊಂದಿದ್ದರೆ, ನಿಯಮಿತವಾಗಿ ಓಟ್ಸ್​ ಸೇವಿಸುವ ಮೂಲಕ ಇದನ್ನು ಕಡಿಮೆ ಮಾಡಬಹುದು.

ಸೇಬು

ದಿನಕ್ಕೆ ಒಂದು ಸೇಬು ವೈದ್ಯರಿಂದ ದೂರ ಎಂಬುದು ಪೌಷ್ಟಿಕಾಂಶಯುಕ್ತ ಆಹಾರದ ಮಹತ್ವವನ್ನು ಸಾರುವ ಹಳೆಯ ಗಾದೆಮಾತು. ಇದರಲ್ಲಿ ಹಲವಾರು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿದ್ದು, ಜೀರ್ಣಕ್ರಿಯೆಗೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯು ಕೊಲೆಸ್ಟ್ರಾಲ್ ಮಟ್ಟ ಮತ್ತು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಬೀಜಗಳು

ಬಾದಾಮಿ, ಗೋಡಂಬಿ, ವಾಲ್ನಟ್ಸ್​ಗಳನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹಕ್ಕೆ ಒಳ್ಳೆಯ ಪ್ರಯೋಜನಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಎಲ್ಲಾ ಬೀಜಗಳು ಅಪರ್ಯಾಪ್ತ ಕೊಬ್ಬನ್ನು ಹೊಂದಿರುತ್ತವೆ. ಇದರೊಂದಿಗೆ, ಸಸ್ಯ ಸೆರಾಲ್ಟ್​ಗಳನ್ನು ಸಹ ಪಡೆಯುತ್ತೀರಿ. ಹಾಗಾಗಿ ಪ್ರತಿನಿತ್ಯ 4-6 ಈ ಬೀಜಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. 

ಮೀನುಗಳು

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಸಾಲ್ಮನ್, ಮ್ಯಾಕೆರೆಲ್ ಮತ್ತು ಹೆರಿಂಗ್ ಮೀನುಗಳು ಅತ್ಯಂತ ಪರಿಣಾಮಕಾರಿ.  ಈ ಮೀನುಗಳಲ್ಲಿ ಸಮೃದ್ಧವಾಗಿರುವ ಒಮೆಗಾ-3 ಕೊಬ್ಬಿನ ಆಮ್ಲಗಳು ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಅಥವಾ LDL ಕಡಿಮೆಯಾಗುತ್ತದೆ. 

ಅವಕಾಡೊ

ಆವಕಾಡೊದಲ್ಲಿ ಮೊನೊ ಅನ್ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್‌ಗಳು ಸಮೃದ್ಧವಾಗಿವೆ. ಈ ಆರೋಗ್ಯಕರ ಕೊಬ್ಬುಗಳು ರಕ್ತದಲ್ಲಿನ 'ಕೆಟ್ಟ' ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು 'ಒಳ್ಳೆಯ' ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರಲ್ಲಿರುವ ಕರಗುವ ನಾರು ಜೀರ್ಣಾಂಗವ್ಯೂಹದಲ್ಲಿ ಕೊಲೆಸ್ಟ್ರಾಲ್ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ ಮತ್ತು ಅದನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.