Vegetable samabar (ಸಾಂದರ್ಭಿಕ ಚಿತ್ರ)
Vegetable samabar: ಬ್ಯಾಚುಲರ್‌ಗೆ ಅಡುಗೆ ಮಾಡುವುದೇ ಒಂದು ತಲೆನೋವು ಇದು ನೂರಕ್ಕೆ ನೂರು ಸತ್ಯವಾದ ಮಾತು ಎಂದರೆ ತಪ್ಪಾಗದು. ಹಾಗಾಗಿ ಅವರು ಆದಷ್ಟು ಹೋಟೆಲ್ಗಳಿಗೆ ಅವಲಂಬಿಸಿರುತ್ತಾರೆ. ಕೆಲವೊಮ್ಮೆ ಅದೇ ಆಹಾರ ತಿಂದೂ ತಿಂದು ಬೇಸರ ಬಂದಿದ್ದರೆ, ಹಾಗೇ ಉಪವಾಸ ಮಲಗಿ ಬಿಡುತ್ತಾರೆ. ಹಾಗಾಗಿ ನೀವೇನಾದರೂ ಅಡುಗೆ ಮಾಡಿಕೊಂಡು ಸೇವಿಸಬೇಕೆಂದು ಅಂದುಕೊಂಡಿದ್ದರೆ, ದಿಢೀರ್ ಅಂತ ಈ ಸಾಂಬರ್ ಮಾಡಿ ಸೇವಿಸಿ...
ಬೇಕಾಗುವ ಸಾಮಗ್ರಿಗಳು
* 2-3 ಟೀಸ್ಪೂನ್ ಸಾಂಬಾರ್ ಪುಡಿ
* 1 ಕಪ್ ಮಿಕ್ಸ್ ತರಕಾರಿಗಳು
* ಸಾಸಿವೆ, ಜೀರಿಗೆ, ಕರಿಬೇವು
ಮಾಡುವ ವಿಧಾನ
ಮೊದಲು ಒಂದು ಕುಕ್ಕರ್ಗೆ ಬೇಳೆ, ಅರಿಶಿನ ಪುಡಿ, ಉಪ್ಪು, ಈರುಳ್ಳಿ, ಟೊಮ್ಯಾಟೋ, ತರಕಾರಿ (ಇದ್ದರೆ), ಸಾಂಬಾರ್ ಪುಡಿ, ಹುಳಿ ಸೇರಿಸಿ 2 ವಿಶಲ್ ಹೊಡೆಸಿಕೊಳ್ಳಿ. ನಂತರ ಕುಕ್ಕರ್ ಬಾಯಿ ತೆರೆದು ಸಾಂಬಾರ್ ಪದಾರ್ಥವನ್ನು ಸ್ವಲ್ಪ ಸ್ಮಾಶ್ ಮಾಡಿಕೊಂಡು ಒಲೆಯ ಮೇಲಿಟ್ಟು ಬೇಯಿಸಿಕೊಳ್ಳಿ. ನಂತರ ಅದಕ್ಕೆ ನೀರು, ಉಪ್ಪು, ಬೆಲ್ಲ, ಸೇರಿಸಿರಿ.
ಇದಾದ ಬಳಿಕ ಚಿಕ್ಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ ಕರಿಬೇವು, ಒಣ ಮೆಣಸು, ಹಿಂಗು ಹಾಕಿ ಒಗ್ಗರಣೆ ಮಾಡಿ. ಸಾಂಬಾರ್ ಮೇಲೆ ಸುರಿಯಿರಿ. ನಂತರ ಅನ್ನ ಮಾಡಿಕೊಂಡು ಸವಿಯಿರಿ (ಏಜೆನ್ಸೀಸ್).