ಸಾಂದರ್ಭಿಕ ಚಿತ್ರ 
ಆಹಾರ

ಜಿಮ್‌ಗೆ ಹೋಗುವ ಅವಶ್ಯಕತೆಯಿಲ್ಲ! ಮನೆಯಲ್ಲೇ ಈ ಪಾನೀಯ ಸೇವಿಸಿ ಸ್ಲಿಮ್ ಆಗಿ ಕಾಣಿಸಿ! Recipe

Recipe: ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಸುಲಭದ ಮಾತೇನಲ್ಲ. ಇದಕ್ಕೆ ಪ್ರತಿನಿತ್ಯ ಕಷ್ಟ ಪಡಬೇಕಾಗುತ್ತದೆ. ಹಾಗೆಯೇ ಅನೇಕ ರೀತಿಯ ಪೌಷ್ಟಿಕಾಂಶಗಳ ಜೊತೆ ಸಂಬಂಧ ಹೊಂದಿರಬೇಕಾಗುತ್ತದೆ. ಆದಾಗ್ಯೂ, ಪ್ರತಿನಿತ್ಯ ನಿಯಮಿತ ಆಹಾರ ಹಾಗೂ ಅದರ ಜೊತೆಗೆ ಈ ಪಾನೀಯಗಳನ್ನು ಸೇವಿಸುವುದರಿಂದ ಹಸಿವು ನಿಯಂತ್ರಿಸುತ್ತದೆ. ಜೊತೆಗೆ ತೂಕವನ್ನು ಇಳಿಸಿಕೊಳ್ಳಲು ಸಹಾಯವಾಗುತ್ತದೆ.

ನಿಂಬೆ ಡಿಟಾಕ್ಸ್ ವಾಟರ್ 

ಬೇಕಾಗುವ ಪದಾರ್ಥಗಳು

1 ಲೀಟರ್​ ನೀರು
1 ನಿಂಬೆ ಹಣ್ಣು
ಸ್ವಲ್ಪ ಪುದೀನಾ ಎಲೆಗಳು
ಸೌತೇಕಾಯಿ 

ಮಾಡುವ ವಿಧಾನ

ಮೊದಲು ಪುದೀನಾ ಎಲೆಗಳು ಮತ್ತು ಸೌತೆಕಾಯಿಯನ್ನು ಮಿಕ್ಸಿ ಜಾರಿನಲ್ಲಿ ರುಬ್ಬಿಕೊಳ್ಳಿ. ನಂತರ, ಒಂದು ಲೀಟರ್​ ನೀರಿಗೆ ನಿಂಬೆಹಣ್ಣನ್ನು ಹಿಂಡಿ ಅದಕ್ಕೆ ರುಬ್ಬಿರುವ ಮಿಶ್ರಣವನ್ನು ಸೇರಸಿರಿ ನಂತರ ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. 

ಜೀರಿಗೆ ನೀರು 

ಬೇಕಾಗುವ ಪದಾರ್ಥಗಳು

1 ಚಮಚ ಜೀರಿಗೆ 
1 ಗ್ಲಾಸ್​ ನೀರು

ಮಾಡುವ ವಿಧಾನ

ಮೊದಲು ಒಂದು ಪಾತ್ರೆಗೆ 1 ಲೋಟ ನೀರನ್ನು ಹಾಕಿ ಕುದಿಯಲು ಬಿಡಿ. ನಂತರ ಅದಕ್ಕೆ ಜೀರಿಗೆ ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ. ನಂತರ ಫಿಲ್ಟರ್​ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ಹೊಟ್ಟೆಯ ಬೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.