Methi Ragi Cheela (ಸಾಂದರ್ಭಿಕ ಚಿತ್ರ)
Methi Ragi Cheela: ಮೆಂತ್ಯೆ ರಾಗಿ ಚೀಲಾ ಒಂದು ಸೂಪರ್ ಹೆಲ್ತಿ, ಕಡಿಮೆ ಕ್ಯಾಲರಿ, ಹೈ ಪ್ರೋಟೀನ್ ಮತ್ತು ಹೆಚ್ಚು ಫೈಬರ್ ಹೊಂದಿದ್ದು, ಇದನ್ನು ಸಂಜೆಯ ತಿಂಡಿ ಹಾಗೂ ಬೆಳಿಗ್ಗಿನ ಉಪಹಾರವಾಗಿ ಸೇವಿಸಲಾಗುತ್ತದೆ. ಇದನ್ನು ಸೇವಿಸುವುದರಿಂದ ತೂಕ ನಿಯಂತ್ರಣ, ರಕ್ತದ ಸಕ್ಕರೆ ನಿಯಂತ್ರಣ ಮತ್ತು ಜೀರ್ಣಕ್ರಿಯೆಗೆ ಅದ್ಭುತವಾಗಿದೆ.
ಬೇಕಾಗುವ ಸಾಮಗ್ರಿಗಳು
* 1 ಕಪ್ ಸಣ್ಣಗೆ ಕತ್ತರಿಸಿದ ಮೆಂತ್ಯೆ ಸೊಪ್ಪು
* 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
ಮಾಡುವ ವಿಧಾನ
ಒಂದು ಬೌಲ್‌ನಲ್ಲಿ ರಾಗಿ ಹಿಟ್ಟು ಮತ್ತು ಕಡಲೆ ಹಿಟ್ಟು ಸೇರಿಸಿಕೊಳ್ಳಿ. ಅದಕ್ಕೆ ಉಪ್ಪು, ಅರಿಶಿಣ, ಜೀರಿಗೆ, ಚಾಟ್ ಮಸಾಲಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸಣ್ಣಗೆ ಕತ್ತರಿಸಿದ ಮೆಂತ್ಯೆ ಸೊಪ್ಪು, ಈರುಳ್ಳಿ, ಹಸಿ ಮೆಣಸು, ಜಿಂಜರ್ ಪೇಸ್ಟ್ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಸ್ವಲ್ಪ ನೀರನ್ನು ಸೇರಿಸಿಕೊಂಡು ಚೆನ್ನಾಗಿ ಕಲಸಿಕೊಂಡು ಹಿಟ್ಟನ್ನು ರೆಡಿ ಮಾಡಿಕೊಳ್ಳಿ.
ನಂತರ, ಪ್ಯಾನ್ ಅನ್ನು ಮಧ್ಯಮ ಜ್ವಾಲೆಯಲ್ಲಿ ಇರಿಸಿ ಸ್ವಲ್ಪ ಎಣ್ಣೆ ಮತ್ತು ತುಪ್ಪ ಹಾಕಿ ರೆಡಿ ಮಾಡಿಕೊಂಡಿರುವ ಹಿಟ್ಟನ್ನು ಸುರಿಯಿರಿ. ನಂತರ ಎರಡೂ ಕಡೆ ಬೇಯಿಸಿ ಕಾಯಿ ಚಟ್ನಿಯೊಂದಿಗೆ ಸೇವಿಸಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.