Mutton Sukka: ಮಟನ್ ಸುಕ್ಕ ಕೇವಲ ಒಂದು ಅಡುಗೆಯಲ್ಲ, ಅದು ಅನೇಕರ ಪಾಲಿಗೆ ನೆನಪುಗಳ ಬುತ್ತಿ. ಅಂದಹಾಗೇ, ಭಾನುವಾರ ಬಂತೆಂದರೆ ಸಾಕು ಅನೇಕರಿಗೆ ಬಾಡೂಟ ಸವಿಯುವ ನೆನಪಾಗಿರುತ್ತದೆ. ಇದು ಬಯಕೆ ಅಷ್ಟೇ ಅಲ್ಲದೇ, ಆಹಾರದ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ಆದರೆ, ಈ ರೆಸಿಪಿ ಮಾಡಲು ಸ್ವಲ್ಪ ಜನರಿಗೆ ಕಷ್ಟವಾಗುವುದರಿಂದ ಆಸೆ ಇದ್ದರೂ, ಇದನ್ನು ನಿರಾಕರಿಸುತ್ತಾರೆ. ಅಂತವರಿಗಾಗಿ ನಾವಿಂದು ಮಟನ್ ಸುಕ್ಕ ಮಾಡುವುದನ್ನು ಹೇಳಿಕೊಡಲಿದ್ದೇವೆ...
ಬೇಕಾಗುವ ಸಾಮಗ್ರಿಗಳು
* ½ ಕೆಜಿ ಬೇಯಿಸಿದ ಮಟನ್ ತುಂಡುಗಳು
ಮಾಡುವ ವಿಧಾನ
ಮೊದಲು ಒಂದು ಬಾಣಲೆಗೆ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಕರಿಬೇವು ಮತ್ತು ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಅದಕ್ಕೆ ಮೊದಲೇ ಮೊದಲೇ ಬೇಯಿಸಿಟ್ಟುಕೊಂಡ ಮಟನ್ ತುಂಡುಗಳನ್ನು ಸೇರಿಸಿಕೊಳ್ಳಿ. ಇದಾದ ಬಳಿಕ ಗರಂ ಮಸಾಲ ಮತ್ತು ಕಾಳು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಮಟನ್ ತುಂಡುಗಳು ಸ್ವಲ್ಪ ಡ್ರೈ ಆಗಿ, ಮಸಾಲೆ ಎಲ್ಲಾ ಅದಕ್ಕೆ ಅಂಟಿಕೊಳ್ಳುವವರೆಗೆ ಸಣ್ಣ ಉರಿಯಲ್ಲಿ ಬಾಡಿಸಿ. ಅದಕ್ಕೆ ಸ್ವಲ್ಪ ನಿಂಬೆ ರಸ ಹಿಂಡಿದರೆ ಚಪಾತಿ, ಅನ್ನ, ರೋಟಿ ಈ ರೀತಿಯ ಆಹಾರಗಳೊಂದಿಗೆ ಸೇವಿಸಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.