Hog Plum Pickle (ಸಾಂದರ್ಭಿಕ ಚಿತ್ರ)
Hog Plum Pickle: ಉಪ್ಪಿನಕಾಯಿ ಎಂಬುದು ಎಲ್ಲರ ನೆಚ್ಚಿನ ಖಾದ್ಯವಾಗಿದೆ. ಆದಷ್ಟು ಜನರು ಇದನ್ನು ಊಟದೊಂದಿಗೆ, ತಿಂಡಿಯೊಂದಿಗೆ ಸೇವಿಸುತ್ತಾರೆ. ಇನ್ನೂ ಕೆಲವರು ಮದ್ಯಪಾನದೊಂದಿಗೆ ಸೇವಿಸುತ್ತಾರೆ. ಅದೇ ರೀತಿ ಅಮಟೆಕಾಯಿ ಉಪ್ಪಿನಕಾಯಿ ಕೂಡಾ ಒಂದು. ಇದನ್ನು ಮಾಡುವುದು ಸರಳವಾದರೂ ರುಚಿ ತುಂಬಾ ಜನಪ್ರಿಯ. ಹಾಗಾಗಿ ನೀವೇನಾದರೂ, ಉಪ್ಪಿನಕಾಯಿ ತಿನ್ನಬೇಕೆಂದಿದ್ದರೆ, ಇಂದೇ ಮಾಡಿ.
ಬೇಕಾಗುವ ಸಾಮಗ್ರಿಗಳು
ಮಾಡುವ ವಿಧಾನ
ಮೊದಲು ಅಮಟೆಕಾಯಿಗಳನ್ನು ಚೆನ್ನಾಗಿ ತೊಳೆದು ತೊಟ್ಟನ್ನು ತೆಗೆದುಕೊಳ್ಳಿ. ನಂತರ ನೀರು ಇರದಂತೆ ಒಣಗಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಸಾಸಿವೆ ಬೀಜ, ಮೆಂತ್ಯ, ಉಪ್ಪು, ಅರಿಶಿನ, ಮೆಣಸಿನಕಾಯಿ ಸೇರಿಸಿ ಪುಡಿ ಮಾಡಿಕೊಳ್ಳಿ.
ನಂತರ ಒಂದು ಗಾಜಿನ ಜಾರ್ನ್ನು ತೆಗೆದುಕೊಳ್ಳಿ ಅದನ್ನು ಬಿಸಿ ನೀರಿನಲ್ಲಿ ತೊಳೆದು ಸಂಪೂರ್ಣ ಒಣಗಿಸಿ. ಅದಕ್ಕೆ ಒಣಗಿದ ಅಮಟೆಕಾಯಿಗಳನ್ನು ಜಾರ್‌ನಲ್ಲಿ ಹಾಕಿ. ಮೇಲೆ ಮಸಾಲೆ ಪುಡಿ ಚೆಲ್ಲಿರಿ. ನಂತರ ಬಿಸಿ ಮಾಡಿ ತಣಿಸಿದ ನೀರನ್ನು ಹಾಕಿ. ಈ ವೇಳೆ ಅಮಟೆಕಾಯಿ ಸಂಪೂರ್ಣವಾಗಿ ಮುಳುಗಿಸಿ ಕಲಸಿರಿ.
ಜಾರ್ ಅನ್ನು ಚೆನ್ನಾಗಿ ಮುಚ್ಚಿ. ಮೊದಲ 4–5 ದಿನಗಳು ದಿನಕ್ಕೊಮ್ಮೆ ಕುಲುಕಿರಿ. ಇದು 7-10 ದಿನಗಳ ನಂತರ ತಿನ್ನಲು ಸಿದ್ಧವಾಗುತ್ತದೆ. ಫ್ರಿಜ್ನಲ್ಲಿ ತೆಗೆದಿಟ್ಟರೆ ಸುಮಾರು 6-7 ತಿಂಗಳುಗಳ ಕಾಲ ಸೇವಿಸಬಹುದು (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.