Recipe: ಚಳಿಗಾಲ ಪ್ರಾರಂಭವಾದಗಿನಿಂದ ದೇಹವು ರುಚಿ ರುಚಿಯಾದ ಆಹಾರವನ್ನು ತಿನ್ನಲು ಬಾಯಿ ಬಯಸುತ್ತದೆ. ಈ ಸಂದರ್ಭದಲ್ಲಿ ಅನೇಕರು ಹೋಟೆಲ್ ಊಟ ಸವಿಯಲು ಬಯಸುತ್ತಾರೆ. ಹೆಚ್ಚಾಗಿ ರೋಟಿ ಕರಿ ತಿನ್ನುತ್ತಾರೆ. ಹೆಚ್ಚಾದ ಹೋಟೆಲ್ ಊಟವು ಆರೋಗ್ಯವನ್ನು ಕೆಡಿಸಬಹುದು. ಹಾಗಾಗಿ ನೀವೇನಾದರೂ, ಈ ರೀತಿಯ ಆಹಾರಗಳನ್ನು ತಿನ್ನಲು ಬಯಸುತ್ತಿದ್ದರೆ, ಮನೆಯಲ್ಲಿಯೇ ಶುದ್ಧವಾಗಿ ಈ ಪನೀರ್ ಕರಿ ಮಾಡಿ ಸೇವಿಸುವಿರಿ. ಇದು ರುಚಿಯ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ.
ಬೇಕಾಗುವ ಪದಾರ್ಥಗಳು
* 1 ಟೇಬಲ್ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
* 1-2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
* 1 ಟೇಬಲ್ ಸ್ಪೂನ್ ಕಸೂರಿ ಮೇಥಿ
* ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ
* ಲವಂಗ, ಏಲಕ್ಕಿ, ಚಕ್ಕೆ (ಸ್ವಲ್ಪ)
ಮಾಡುವ ವಿಧಾನ
ಮೊದಲು ಕ್ಯಾಶ್ಯೂನಟ್ಗಳನ್ನು ಬಿಸಿ ನೀರಿನಲ್ಲಿ 15 ನಿಮಿಷ ನೆನೆಸಿ, ಟೊಮೇಟೊಗಳೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಒಂದು ಪ್ಯಾನ್ಗೆ 2 ಟೇಬಲ್ ಸ್ಪೂನ್ ಬೆಣ್ಣೆ, ಎಣ್ಣೆ ಬಿಸಿ ಮಾಡಿ ಅದಕ್ಕೆ ಲವಂಗ, ಏಲಕ್ಕಿ, ಚಕ್ಕೆ, ಈರುಳ್ಳಿ ಹಾಕಿ ಅದು ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿಕೊಳ್ಳಿ.
ಈ ಮಿಶ್ರಣಕ್ಕೆ ರುಬ್ಬಿದ ಟೊಮೊಟೋ ಮಿಶ್ರಣವನ್ನು ಸೇರಿಸಿ, ಅದಕ್ಕೆ ಕೆಂಪು ಮೆಣಸಿನ ಪುಡಿ, ಉಪ್ಪು, ಸ್ವಲ್ಪ ಸಕ್ಕರೆ ಹಾಕಿ. ಎಣ್ಣೆ ಬಿಟ್ಟುಬರುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ಅಗತ್ಯವಿದ್ದರೆ, ನೀರನ್ನು ಹಾಕಿಕೊಳ್ಳಿ. ನಂತರ ಕ್ರೀಮ್, ಗರಂ ಮಸಾಲಾ, ಕಸೂರಿ ಮೇಥಿ ಸೇರಿಸಿ ಮಿಶ್ರಣ ಮಾಡಿ. ಬೆಣ್ಣೆಯಲ್ಲಿ ಫ್ರೈ ಮಾಡಿಕೊಂಡ ಪನೀರ್ ಕ್ಯೂಬ್ಗಳನ್ನು ಸೇರಿಸಿ 3-4 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ. ಕೊನೆಯಲ್ಲಿ ಬೆಣ್ಣೆ ಹಾಕಿ ಆರಿಸಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.