Kidney stones: ಮೂತ್ರಪಿಂಡದ ಕಲ್ಲುಗಳಾಗುವುದು ಗಂಭೀರ ಸಮಸ್ಯಗಳೇನಲ್ಲ. ಆದರೆ, ಕಲ್ಲಿನ ಗಾತ್ರವು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಮೂತ್ರಪಿಂಡದ ಕಲ್ಲುಗಳ ನೋವು ತೀವ್ರವಾಗಿರುತ್ತದೆ ಹಾಗೂ ಅಸಹನೀಯವಾಗಿರುತ್ತದೆ. ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆಗೆ ಹಲವಾರು ಕಾರಣಗಳಿವೆ. ನೀರು ಕುಡಿಯದಿರುವುದು, ಮೂತ್ರನಾಳದ ಸೋಂಕು ಇನ್ನಿತರ ಸಮಸ್ಯೆಗಳಿಂದಲೂ ಬರಬಹುದು.
ಮೂತ್ರಪಿಂಡದ ಕಲ್ಲುಗಳ ಲಕ್ಷಣಗಳು ಹೊಟ್ಟೆ ಅಥವಾ ಮೂತ್ರಕೋಶದಲ್ಲಿ ತೀವ್ರವಾದ ನೋವನ್ನು ಅನುಭವಿಸುವಂತೆ ಮಾಡುತ್ತದೆ. ಅನೇಕರಿಗೆ ವಾಂತಿ, ವಾಕರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ, ನಡುಕ ಅಥವಾ ಅತಿಯಾದ ಬೆವರುವಿಕೆಯಂತಹ ಸಮಸ್ಯೆಯನ್ನು ಅನುಭವಿಸುತ್ತಾರೆ.
ಈ ಸಮಸ್ಯೆಗೆ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ, ಮೂತ್ರಪಿಂಡದಲ್ಲಿ ಕಲ್ಲುಗಳು ದೊಡ್ಡ ಗಾತ್ರದಲ್ಲಿ ಬೆಳೆಯಲು ಆರಂಭವಾಗುತ್ತದೆ. ಅವುಗಳು ಪತ್ತೆಯಾದ ತಕ್ಷಣವೇ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು. ದುಬಾರಿ ಚಿಕಿತ್ಸೆಗಳ ಬದಲಿಗೆ ಮನೆಯಲ್ಲಿ ಈ ಮನೆಮದ್ದುಗಳನ್ನು ಮಾಡುವುದರಿಂದ ಸುಲಭವಾಗಿ ಕರಗಿಸಿಕೊಳ್ಳಬಹುದು.
1. ದಂಡೇಲಿಯನ್ ಬೇರು
ದಂಡೇಲಿಯನ್ ಬೇರು ಒಂದು ಆಯುರ್ವೇದ ಗಿಡಮೂಲಿಕೆ. ಇದರ ರಸವು ಮೂತ್ರನಾಳದಲ್ಲಿ ಸಂಗ್ರಹವಾದ ಹರಳುಗಳನ್ನು ಕರಗಿಸಲು ಸಹಾಯ ಮಾಡುತ್ತದೆ. ಹಾಗಾಗಿ ಯಾರು ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆಯನ್ನು ಅನುಭವಿಸುತ್ತೀರೋ ಅವರು ದಂಡೇಲಿಯನ್ ಬೇರಿನ ಚಹಾವನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2. ತುಳಸಿ ಎಲೆಗಳು
ತುಳಸಿ ಚಹಾದಲ್ಲಿ ಅಸಿಟಿಕ್ ಆಮ್ಲದ ಸಂಯೋಜನೆಯನ್ನು ಹೊಂದಿದೆ. ಇದರ ರಸವನ್ನು ಕುಡಿಯುವುದರಿಂದ ಕಲ್ಲುಗಳಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ತುಳಸಿಯಲ್ಲಿರುವ ಲಿಥಿಯಾಸಿಸ್ ವಿರೋಧಿ ಗುಣಲಕ್ಷಣಗಳು ಕಲ್ಲುಗಳ ಗಾತ್ರವನ್ನು ಕಡಿಮೆ ಮಾಡಲು, ಅವುಗಳನ್ನು ಒಡೆಯಲು ಮತ್ತು ಅವುಗಳ ರಚನೆಯನ್ನು ತಡೆಯಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳನ್ನು ಸ್ವಲ್ಪ ಉಪ್ಪಿನೊಂದಿಗೆ ಪ್ರತಿದಿನ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳಿಂದ ಪರಿಹಾರ ಪಡೆಯಬಹುದು.
3. ಆಪಲ್ ಸೈಡರ್ ವಿನೆಗರ್
ಆಪಲ್ ಸೈಡರ್ ವಿನೆಗರ್ ಮೂತ್ರಪಿಂಡಗಳಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಇದು ದೇಹದಲ್ಲಿ ಉತ್ಕರ್ಷಣ ನಿರೋಧಕಗಳ ಮಟ್ಟವನ್ನು ಹೆಚ್ಚಿಸಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಇದು ಮೂತ್ರಪಿಂಡದ ಕಾಯಿಲೆಗಳನ್ನು ತಡೆಗಟ್ಟುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. NCBI ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಆಪಲ್ ಸೈಡರ್ ವಿನೆಗರ್ ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ.
4. ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರಗಳು
ಕ್ಯಾಲ್ಸಿಯಂ ಭರಿತ ಆಹಾರಗಳ ಸೇವನೆ ಮಾಡುವುದರಿಂದ ಕಲ್ಲುಗಳನ್ನು ಉತ್ಪತ್ತಿ ಮಾಡುತ್ತದೆ ಎಂಬುದು ತಪ್ಪು ಕಲ್ಪನೆಯಾಗಿದೆ. ಪ್ರತಿನಿತ್ಯ ಹಾಲು, ಮೊಸರು, ಚೀಸ್ ಮತ್ತು ಆಕ್ಸಲೇಟ್ ಭರಿತ ಆಹಾರವನ್ನು ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
5. ಸೆಲರಿ ಬೇರು
ನಿಯಮಿತ ಸೆಲರಿ ಬೇರಿನ ನೀರನ್ನು ಸೇವಿಸುವುದರಿಂದ ಇದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುವ ವಿಷವನ್ನು ನಿರ್ವಾಂಶ ಮಾಡಿ, ಮೂತ್ರಪಿಂಡದಿಂದ ಕಲ್ಲುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಮೂತ್ರಪಿಂಡದ ಕಲ್ಲು ರಚನೆಯನ್ನು ತಡೆಯುವುದು ಹೇಗೆ?
ಪ್ರತಿನಿತ್ಯ ಕನಿಷ್ಟ 3-4 ,ಲೀಟರ್ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ನೈಸರ್ಗಿಕವಾಗಿ ಕರಗಿಸಲು ಸಹಾಯವಾಗುತ್ತದೆ. ನೀರಿನೊಂದಿಗೆ ದಾಳಿಂಬೆ ರಸ, ನಿಂಬೆ ಪಾನಕ ಅಥವಾ ಸೂಪ್‌ನಂತಹ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸವನ್ನು ಕುಡಿಯುವುದು ಉತ್ತಮ ಆಯ್ಕೆಯಾಗಿದೆ. ಇವು ಸಣ್ಣ ಕಲ್ಲುಗಳನ್ನು ತೆಗೆದುಹಾಕುವುದಲ್ಲದೆ ಮೂತ್ರಪಿಂಡದ ಕಲ್ಲುಗಳು ಬೆಳೆಯುವುದನ್ನು ತಡೆಯುತ್ತವೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.