Mango vs Watermelon (ಸಾಂದರ್ಭಿಕ ಚಿತ್ರ) 
ಆಹಾರ

ಮಾವು vs ಕಲ್ಲಂಗಡಿ: ಬೇಸಿಗೆಯ ಬಿಸಿಲಿಗೆ ದೇಹವನ್ನು ತಂಪಾಗಿಸಲು ಯಾವುದು ನಂ. 1 ಆಯ್ಕೆ? Mango vs Watermelon

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆ ಹೆಚ್ಚಾದಂತೆ ಜನರು ದೇಹವನ್ನು ತಂಪಾಗಿರಿಸಲು ​​ಹಣ್ಣುಗಳನ್ನು ಅವಲಂಬಿಸುತ್ತಾರೆ
  • ಈ ಸೀಸನ್​ನಲ್ಲಿ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮತ್ತು ಮಾವಿನ ಹಣ್ಣುಗಳು ಲಭ್ಯ
  • ಜಲಸಂಚಯನ ವಿಚಾರಕ್ಕೆ ಬಂದರೆ ಕಲ್ಲಂಗಡಿ ಉತ್ತಮ ಎಂದು ಹೇಳಲಾಗುತ್ತದೆ
  • ಇದರಲ್ಲಿ ಕ್ಯಾಲೊರಿಗಳು ಕಡಿಮೆ ಇರುತ್ತವೆ ಮತ್ತು ಎಲೆಕ್ಟ್ರೋಲೈಟ್‌ಗಳು ಸಮೃದ್ಧವಾಗಿವೆ
Mango vs Watermelon: ಬೇಸಿಗೆ ಹೆಚ್ಚಾದಂತೆ ಜನರು ದೇಹವನ್ನು ತಂಪಾಗಿರಿಸಲು ಕೂಲ್​ಡ್ರಿಂಕ್ಸ್​, ಹಣ್ಣುಗಳನ್ನು ಅವಲಂಬಿಸುತ್ತಾರೆ. ಆದಾಗ್ಯೂ, ಹಣ್ಣುಗಳ ವಿಚಾರಕ್ಕೆ ಬಂದರೆ, ಈ ಸೀಸನ್​ನಲ್ಲಿ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮತ್ತು ಮಾವಿನ ಹಣ್ಣುಗಳು ಲಭ್ಯವಾಗುತ್ತವೆ. ಈ ಎರಡೂ ಹಣ್ಣುಗಳು ದೇಹದ ಮೇಲೆ ವಿಭಿನ್ನ ರೀತಿಯಲ್ಲಿ ಕೆಲಸ ಮಾಡುತ್ತದೆ.
ಒಂದು ಹಣ್ಣು ದೇಹಕ್ಕೆ ಸಾಕಷ್ಟು ನೀರನ್ನು ನೀಡಿದರೆ, ಮತ್ತೊಂದು ಹಣ್ಣು ಉತ್ತಮ ರುಚಿ ಮತ್ತು ಶಕ್ತಿಯನ್ನು ನೀಡುತ್ತದೆ. ಇವುಗಳಲ್ಲಿ ಯಾವುದು ಶಾಖವನ್ನು ಎದುರಿಸಲು ಮತ್ತು ದೇಹದಲ್ಲಿ ಜಲಸಂಚಯವನ್ನು ಕಾಪಾಡಲು ಹೆಚ್ಚು ಸಹಾಯ ಮಾಡುತ್ತದೆ ಎಂದು ನೋಡೋಣ ಬನ್ನಿ...

ಜಲಸಂಚಯನಕ್ಕೆ ಯಾವುದು ಉತ್ತಮ?

ಜಲಸಂಚಯನ ವಿಚಾರಕ್ಕೆ ಬಂದರೆ ಕಲ್ಲಂಗಡಿ ಉತ್ತಮ ಎಂದು ಹೇಳಲಾಗುತ್ತದೆ. ಆದಾಗ್ಯೂ, ಸುಮಾರು 90 ಶೇಕಡದಷ್ಟು ನೀರನ್ನು ಹೊಂದಿರುವುದರಿಂದ ಇದು ದೇಹವನ್ನು ಹೈಡ್ರೇಟ್​ ಮಾಡುತ್ತದೆ. ಇದರಲ್ಲಿ ಕ್ಯಾಲೊರಿಗಳು ಕಡಿಮೆ ಇರುತ್ತವೆ ಮತ್ತು ಎಲೆಕ್ಟ್ರೋಲೈಟ್‌ಗಳು ಸಮೃದ್ಧವಾಗಿವೆ. ಬಿಸಿಲಿನಲ್ಲಿ ದಣಿದಾಗ ಒಂದು ತುಂಡು ಕಲ್ಲಂಗಡಿ ಸೇವಿಸಿದರೆ ದೇಹಕ್ಕೆ ಬೇಕಾದ ನೀರಿನ ಅಂಶ ತಕ್ಷಣವೇ ಲಭ್ಯವಾಗುತ್ತದೆ.
ಮಾವಿನ ಹಣ್ಣಿನಲ್ಲಿ ನೀರಿನಾಂಶ ಸುಮಾರು 83% ರಷ್ಟು ಇರುತ್ತದೆ. ಇದು ಕಲ್ಲಂಗಡಿಗಿಂತ ಕಡಿಮೆ. ಮಾವು ಶಕ್ತಿಯ ಉತ್ತಮ ಮೂಲವಾಗಿದ್ದರೂ ಮತ್ತು ವಿಟಮಿನ್ ಎ, ಸಿ ಗಳಿಂದ ಸಮೃದ್ಧವಾಗಿದ್ದರೂ, ಇದರಲ್ಲಿ ಸಕ್ಕರೆ ಮತ್ತು ಕ್ಯಾಲೊರಿ ಅಂಶ ಹೆಚ್ಚಾಗಿರುತ್ತದೆ. ಮಾವು ದೇಹಕ್ಕೆ ಪೋಷಕಾಂಶಗಳನ್ನು ನೀಡುತ್ತದೆ, ಆದರೆ ಜಲಸಂಚಯನಕ್ಕಾಗಿ ಇದನ್ನು ಕಲ್ಲಂಗಡಿಗೆ ಹೋಲಿಸಿದರೆ ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ.

ಪೌಷ್ಟಿಕಾಂಶದ ಪ್ರಯೋಜನಗಳು

ಎರಡೂ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದಾಗಿದ್ದರೂ ಕೂಡಾ ಅವುಗಳು ತುಂಬಾ ಪ್ರಯೋಜನವನ್ನು ನೀಡುತ್ತವೆ. ಆದಾಗ್ಯೂ, ಮಾವಿನ ಹಣ್ಣಿನಲ್ಲಿ ವಿಟಮಿನ್​ ಎ ಸಿ ಸಮೃದ್ಧವಾಗಿರುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ.
ಕಲ್ಲಂಗಡಿಯಲ್ಲಿ ಲೈಕೋಪೀನ್ ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ದೇಹವನ್ನು ಹೈಡ್ರೇಟ್​ ಆಗಿರಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್​ಗಳು ಕಣ್ಣು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ ಮತ್ತು ಶಾಖ

ಕಲ್ಲಂಗಡಿ ಹೊಟ್ಟೆಗೆ ತುಂಬಾ ಹಗುರವಾಗಿರುವುದರಿಂದ ಇದು ಜೀರ್ಣಕ್ರಿಯೆ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ. ಆದಾಗ್ಯೂ, ಮಾವಿನ ಹಣ್ಣು ದೇಹದ ಉಷ್ಣತೆಯನ್ನು ಹೆಚ್ಚಿಸಿ ಅಜೀರ್ಣ ಸಮಸ್ಯೆಯನ್ನು ಉಂಟು ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.