Gulab Jamun Ice cream (ಸಾಂದರ್ಭಿಕ ಚಿತ್ರ) 
ಆಹಾರ

ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ಗುಲಾಬ್ ಜಾಮೂನ್ ಐಸ್‌ಕ್ರೀಂ! Gulab Jamun Ice cream

Gulab Jamun Ice cream: ಐಸ್​ಕ್ರೀಮ್​ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಳಿಗಾಲ ಆಗಲಿ, ಬೇಸಿಗೆಕಾಲ ಆಗಲಿ, ಮಳೆಗಾಲವಾಗಲಿ ಆದಷ್ಟು ಜನರು ಐಸ್​ ಕ್ರೀಮ್​ ತಿನ್ನಲು ಹಾತೊರೆಯುತ್ತಿರುತ್ತಾರೆ. ಗುಲಾಬ್ ಜಾಮೂನ್ ಐಸ್‌ಕ್ರೀಮ್ ಒಂದು ಸೂಪರ್ ರುಚಿಕರ ಫ್ಯೂಷನ್ ಡೆಸರ್ಟ್ ಆಗಿದ್ದು, ಇದನ್ನು ಮನೆಯಲ್ಲೇ ಐಸ್‌ಕ್ರೀಮ್ ಮೆಷೀನ್ ಇಲ್ಲದೆ ಮಾಡಬಹುದು. ಇದು ಎಗ್‌ಲೆಸ್, ಸರಳ ಮತ್ತು ಕೇವಲ 4-5 ಪದಾರ್ಥಗಳೊಂದಿಗೆ ತಯಾರಾಗುತ್ತದೆ. ಹಾಗಿದ್ದರೆ, ಇನ್ಯಾಕೆ ತಡ ಈಗಲೇ ಟ್ರೈ ಮಾಡಿ...

ಬೇಕಾಗುವ ಪದಾರ್ಥಗಳು

* 2 ಕಪ್ ಫ್ರೆಶ್ ಕ್ರೀಮ್
* 1 ಕ್ಯಾನ್ ಸ್ವೀಟನ್ಡ್ ಕಂಡೆನ್ಸ್ಡ್ ಮಿಲ್ಕ್
* 10-15 ಗುಲಾಬ್ ಜಾಮೂನ್
* 1-2 ಟೀಸ್ಪೂನ್ ರೋಸ್ ವಾಟರ್
* ½ ಟೀಸ್ಪೂನ್ ಏಲಕ್ಕಿ ಪೌಡರ್
* ಸ್ವಲ್ಪ ಕೇಸರಿ
* ಸ್ಲಿವರ್ಡ್ ಬದಾಮ್, ಪಿಸ್ತಾ ಅಥವಾ ರೋಜ್ ಪೆಟಲ್ಸ್

ಮಾಡುವ ವಿಧಾನ

ಗುಲಾಬ್ ಜಾಮೂನ್‌ಗಳನ್ನು ಸಿರಪ್‌ನಿಂದ ತೆಗೆದುಕೊಂಡು ಅದನ್ನು ಪೇಪರ್ ಟವೆಲ್ ಮೇಲೆ 10-15 ನಿಮಿಷ ಇಟ್ಟು ಒಣಗಿಸಿ. ನಂತರ ಸಣ್ಣ ಪೀಸ್‌ಗಳಾಗಿ ಕತ್ತರಿಸಿ ಅಥವಾ ಕ್ರಷ್ ಮಾಡಿ. ದೊಡ್ಡ ಬೌಲ್‌ನಲ್ಲಿ ತಣ್ಣಗಿರುವ ಕ್ರೀಮ್ ಅನ್ನು ಎಲೆಕ್ಟ್ರಿಕ್ ಬೀಟರ್‌ನಿಂದ ಸ್ಟಿಫ್ ಪೀಕ್ಸ್ ಬರುವವರೆಗೆ ಮಿಶ್ರಣ ಮಾಡಿ ಇಟ್ಟುಕೊಳ್ಳಿ.
ನಂತರ ಮತ್ತೊಂದು ಬೌಲ್​ ತೆಗೆದುಕೊಂಡು ಅದಕ್ಕೆ ಸ್ವೀಟನ್ಡ್ ಕಂಡೆನ್ಸ್ಡ್ ಮಿಲ್ಕ್, ಏಲಕ್ಕಿ ಪೌಡರ್, ರೋಸ್ ವಾಟರ್, ಕೇಸರಿ ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ. ವಿಪ್ಡ್ ಕ್ರೀಮ್‌ಗೆ ಈ ಮಿಶ್ರಣವನ್ನು ಸ್ವಲ್ಪ ಹಾಕಿ, ಚಮಚ ಬಳಸಿ ಮೆಲ್ಲಗೆ ಫೋಲ್ಡ್ ಮಾಡಿ.
ಈಗ ಸಣ್ಣ ಗುಲಾಬ್ ಜಾಮೂನ್ ಪೀಸ್‌ಗಳಲ್ಲಿ ಸುಮಾರು ಅರ್ಧ ಭಾಗವನ್ನು ಮಿಶ್ರಣಕ್ಕೆ ಸೇರಿಸಿ ಮೆಲ್ಲಗೆ ಕಲೆಸಿ. ನಂತರ ಏರ್‌ಟೈಟ್ ಕಂಟೈನರ್ ಅಥವಾ ಬ್ರೆಡ್ ಲೋಫ್ ಪ್ಯಾನ್‌ಗೆ ಈ ಮಿಶ್ರಣವನ್ನು ಸುರಿದು, ಮೇಲೆ ಉಳಿದ ಗುಲಾಬ್ ಜಾಮೂನ್ ಪೀಸ್‌ಗಳನ್ನು ಹರಡಿ, ಸ್ವಲ್ಪ ಬದಾಮ್, ಪಿಸ್ತಾ ಸಿಂಪಡಿಸಿ. ನಂತರ ಬಟ್ಟಲುಗಳಲ್ಲಿ ಹಾಕಿ ಫ್ರಿಜ್​ನಲ್ಲಿಟ್ಟು ಸ್ವಲ್ಪ ಗಟ್ಟಿಯಾದ ನಂತರ ಸೇವಿಸಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.