Recipe: ಸಿಹಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇದನ್ನು ಹಲವಾರು ಜನರು ಎಥೇಚ್ಛವಾಗಿ ತಿನ್ನಲು ಬಳಸುತ್ತಾರೆ. ಅಂದಹಾಗೇ, ಚಾಕಲೇಟ್ ಕೇಕ್ ಚಾಕೋಲಾವಾ ಇವುಗಳೆನ್ನೆಲ್ಲವನ್ನೂ ಅನೇಕರು ಆರ್ಡರ್ ಮಾಡಿ ತಿನ್ನುತ್ತಾರೆ. ಅಂತವರು ಮನೆಯಲ್ಲಿಯೇ ಈ ಚಾಕೋ ಲಾವಾ ಕೇಕನ್ನು ತಯಾರಿಸಿ ಸೇವಿಸಿರಿ. ಇದು ಆರೋಗ್ಯಕರವಾಗಿದ್ದು, ಚಿಕ್ಕವರಿಂದ ಹಿರಿಯರವರೆಗೂ ಸೇವಿಸಬಹುದು.
100 ಗ್ರಾಂ ಡಾರ್ಕ್ ಚಾಕೊಲೇಟ್
ತಯಾರಿಸುವ ವಿಧಾನ
ಮೊದಲು ಒಂದು ಪಾತ್ರೆಗೆ ಚಾಕಲೇಟ್ ಹಾಗೂ ಬೆಣ್ಣೆಯನ್ನು ಹಾಕಿ ಒಲೆಯ ಮೇಲೆ ಇಟ್ಟು ಕರಗಿಸಿಕೊಳ್ಳಿ. ನಂತರ ತಣ್ಣಗಾಗಲು ಬಿಡಿ. ಕರಗಿದ ಚಾಕೊಲೇಟ್ ಮಿಶ್ರಣಕ್ಕೆ ಪುಡಿ ಸಕ್ಕರೆ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಅದಕ್ಕೆ ಮೊಟ್ಟೆಗಳನ್ನು ಸೇರಿಸಿಕೊಳ್ಳಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಅದಕ್ಕೆ ವೆನಿಲ್ಲಾ ಎಸೆನ್ಸ್ ಮತ್ತು ಚಿಟಿಕೆ ಉಪ್ಪು ಸೇರಿಸಿ. ಕೊನೆಗೆ ಮೈದಾ ಹಿಟ್ಟು ಸೇರಿಸಿ ಮೃದುವಾಗಿ ಮಿಶ್ರಣ ಮಾಡಿಟ್ಟುಕೊಳ್ಳಿ.
ಕೆಲವು ಕಪ್ಗಳಿಗೆ ಬೆಣ್ಣೆಯನ್ನು ಹಚ್ಚಿ ಸ್ವಲ್ಪ ಮೈದಾ ಚೆಲ್ಲಿರಿ. ಆ ಬೌಲ್ಗೆ ಅರ್ಧದಷ್ಟು ತಯಾರಿಸಿದ ಮಿಶ್ರಣವನ್ನು ಹಾಕಿ. ಮಧ್ಯದಲ್ಲಿ 2-3 ಚಾಕೊಲೇಟ್ ತುಂಡುಗಳನ್ನು ಇಟ್ಟು ಮೇಲೆ ಮತ್ತೆ ಬ್ಯಾಟರ್ ಹಾಕಿಕೊಳ್ಳಿ. ಇದಾದ ಬಳಿಕ ಓವನ್ನಲ್ಲಿ 10-12 ನಿಮಿಷಗಳ ಕಾಲ ಬೇಯಿಸಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.