ಸಾಂದರ್ಭಿಕ ಚಿತ್ರ 
ಆಹಾರ

ಮನೆಯಲ್ಲಿರುವ ತರಕಾರಿಗಳಲ್ಲೇ ಮಾಡಿ ಸ್ಪೆಷಲ್ ವೆಜಿಟೇಬಲ್ ತಡ್ಕಾ! Vegitable tadka

Vegitable tadka: ವೆಜಿಟೇಬಲ್ ತಡ್ಕಾ ಎಂಬುದು ತರಕಾರಿಗಳು ಮತ್ತು ಬೇಳೆಕಾಳುಗಳ ಮಿಶ್ರಣದಿಂದ ತಯಾರಿಸುವ ಒಂದು ಪೌಷ್ಟಿಕ ಹಾಗೂ ಅತ್ಯಂತ ರುಚಿಕರವಾದ ಅಡುಗೆ. ಇದನ್ನು ಸಾಮಾನ್ಯವಾಗಿ ಬಿಸಿ ಅನ್ನ, ಚಪಾತಿ ಅಥವಾ ರೋಟಿಯೊಂದಿಗೆ ಸವಿಯಲಾಗುತ್ತದೆ. ಈ ಆಹಾರವು ರುಚಿಯನ್ನು ನೀಡುವುದಲ್ಲದೇ, ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಹಾಗಿದ್ದರೆ, ಯಾಕೆ ತಡ ಇಂದೇ ರೆಡಿ ಮಾಡಿ ಸವಿಯಿರಿ.

ಬೇಕಾಗುವ ಸಾಮಾಗ್ರಿಗಳು

* 2 ಕಪ್​ ಮಿಕ್ಸ್ ತರಕಾರಿಗಳು
* 2 ಈರುಳ್ಳಿ
* 2-3 ಟೊಮೇಟೊ
* 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
* 2-3 ಹಸಿ ಮೆಣಸಿನಕಾಯಿ
* 3-4 ಚಮಚ ಎಣ್ಣೆ ಅಥವಾ ತುಪ್ಪ
* 1 ಚಮಚ ಜೀರಿಗೆ
* ಒಂದು ಚಿಟಿಕೆ ಇಂಗು
* 8-10 ಎಲೆಗಳು ಕರಿಬೇವು
* ½ ಚಮಚ ಅರಿಶಿನ
* 1½ ಚಮಚ ಧನಿಯಾ ಪುಡಿ
* 1 ಚಮಚ ಜೀರಿಗೆ ಪುಡಿ
* ¾ ಚಮಚ ಗರಂ ಮಸಾಲಾ
* 1 ಚಮಚ ಖಾರದ ಪುಡಿ
* ಉಪ್ಪು – ರುಚಿಗೆ ತಕ್ಕಂತೆ
* ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ

ಮೊದಲು ಎಲ್ಲಾ ತರಕಾರಿಗಳನ್ನು ಚೆನ್ನಾಗಿ ತೊಳೆದು, ಉದ್ದವಾಗಿ ಹೆಚ್ಚಿಕೊಳ್ಳಿ. ನಂತರ ಒಂದು ಕಡಾಯಿಗೆ 2-3 ಚಮಚ ಎಣ್ಣೆ ಕಾಯಿಸಿ. ಜೀರಿಗೆ, ಹಿಂಗ್, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿದುಕೊಳ್ಳಿ. ಆ ಮಿಶ್ರಣಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನಕಾಯಿ ಹಾಕಿ 30 ಸೆಕೆಂಡ್ ಹುರಿದುಕೊಳ್ಳಿ.
ಈ ಮಿಶ್ರಣಕ್ಕೆ ಟೊಮೇಟೊ ಹಾಕಿ, ಅರಿಶಿನ, ಉಪ್ಪು ಸೇರಿಸಿ. ಟೊಮೇಟೊ ಮೃದುವಾಗಿ, ಎಣ್ಣೆ ಬೇರ್ಪಡುವವರೆಗೆ ಬೇಯಿಸಿಕೊಳ್ಳಿ. ಇದಕ್ಕೆ ಧನಿಯಾ ಪುಡಿ, ಜೀರಿಗೆ ಪುಡಿ, ಮಿರ್ಚಿ ಪುಡಿ ಹಾಕಿ 1 ನಿಮಿಷ ಹುರಿಯಿರಿ.
ಎಲ್ಲ ತರಕಾರಿಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ನೀರು ಹಾಕಿ, ಮುಚ್ಚಳ ಹಾಕಿ ಮಧ್ಯಮ ಜ್ವಾಲೆಯಲ್ಲಿ 10-12 ನಿಮಿಷ ಬೇಯಿಸಿಕೊಳ್ಳಿ. ಕೊನೆಯಲ್ಲಿ ಗರಂ ಮಸಾಲ ಹಾಕಿ 2-3 ನಿಮಿಷ ಬೇಯಿಸಿ ಅನ್ನ ಅಥವಾ ಚಪಾತಿ, ರೊಟ್ಟಿಯೊಂದಿಗೆ ಸವಿಯಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.