ಸಾಂದರ್ಭಿಕ ಚಿತ್ರ 
ಆಹಾರ

ಬ್ಯಾಚುಲರ್ ಸ್ಪೆಷಲ್: ಕೇವಲ 20 ನಿಮಿಷದಲ್ಲಿ ಮಾಡಿ ರುಚಿಕರ ಮಶ್ರೂಮ್ ಬಿರಿಯಾನಿ! Mushroom Rice

Mushroom Rice: ಬ್ಯಾಚುಲರ್‌ಗಳಿಗೆ ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುವುದು ಅಥವಾ ಹೆಚ್ಚು ಪಾತ್ರೆಗಳನ್ನು ತೊಳೆಯುವುದು ಎಂದರೆ ದೊಡ್ಡ ಕೆಲಸ. ಹಾಗಾಗಿ ಅವರು ಹೋಟೆಲ್​ಗಳಿಗೆ ಹೋಗಿ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ನಾವಿಂದು ಕೇವಲ ಒಂದು ಕುಕ್ಕರ್ ಬಳಸಿ ಅತ್ಯಂತ ಸುಲಭವಾಗಿ ಮತ್ತು ರುಚಿಕರವಾಗಿ ಮಶ್ರೂಮ್ ಬಿರಿಯಾನಿ ಮಾಡುವುದನ್ನು ಹೇಳಿಕೊಡಲಿದ್ದೇವೆ.

ಬೇಕಾಗುವ ಸಾಮಗ್ರಿಗಳು

* 1½ ಕಪ್ ಬಾಸ್ಮತಿ ಅಕ್ಕಿ
* 200-250 ಗ್ರಾಂ ಬಟನ್ ಮಶ್ರೂಮ್
* 2 ಈರುಳ್ಳಿ
* 1 ಟೊಮೇಟೊ
* ½ ಕಪ್ ಹಸಿರು ಬಟಾಣಿ
* 3-4 ಟೇಬಲ್ ಸ್ಪೂನ್ ತುಪ್ಪ / ಎಣ್ಣೆ
* ಲವಂಗ, ಏಲಕ್ಕಿ, ದಾಲ್ಚಿನ್ನಿ, ಬಿರಿಯಾನಿ ಎಲೆ, ಜೀರಿಗೆ
* 2 ಹಸಿರು ಮೆಣಸಿನಕಾಯಿ
* 1 ಟೇಬಲ್ ಸ್ಪೂನ್ ಬೆಳ್ಳುಳ್ಳಿ ಪೇಸ್ಟ್
* 1 ಟೀಸ್ಪೂನ್ ಬಿರಿಯಾನಿ ಮಸಾಲಾ
* ಉಪ್ಪು ರುಚಿಗೆ ತಕ್ಕಷ್ಟು
* 2¾ ಕಪ್ ನೀರು
* ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಅಕ್ಕಿಯನ್ನು 30 ನಿಮಿಷ ನೆನೆಸಿ ನೀರು ಬಸಿದಿಡಿ. ನಂತರ ಒಂದು ಬಾಣಲೆಗೆ ತುಪ್ಪ ಹಾಕಿ ಅದಕ್ಕೆ, ಲವಂಗ, ಏಲಕ್ಕಿ, ದಾಲ್ಚಿನ್ನಿ, ಬಿರಿಯಾನಿ ಎಲೆ, ಜೀರಿಗೆ ಹಾಕಿ ಫ್ರೈ ಮಾಡಿ. ನಂತರ ಈರುಳ್ಳಿ ಹಾಕಿ ಬಣ್ಣ ಬರುವವರೆಗೆ ಹುರಿಯಿರಿ. ಈ ಮಿಶ್ರಣಕ್ಕೆ ಬೆಳ್ಳುಳ್ಳಿ ಪೇಸ್ಟ್ ಹಸಿರು ಮೆಣಸಿನಕಾಯಿ ಹಾಕಿ 1 ನಿಮಿಷ ಹುರಿಯಿರಿ.
ಇದಾದ ಬಳಿಕ ಮಶ್ರೂಮ್ ತುಂಡುಗಳು ಹಾಕಿ 4-5 ನಿಮಿಷ ಹುರಿಯಿರಿ. ನಂತರ ಟೊಮೇಟೊ, ಬಟಾಣಿ, ಮಸಾಲೆಗಳು, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಈ ಮಿಶ್ರಣಕ್ಕೆ ನೆನೆಸಿದ ಅಕ್ಕಿ ಹಾಕಿ 2 ನಿಮಿಷ ಹುರಿದು ನೀರು ಸುರಿಯಿರಿ. ಕುದಿಯಲು ಬಿಟ್ಟು ಮುಚ್ಚಿ ಕಡಿಮೆ ಕುಕ್ಕರ್​ನಲ್ಲಿ 3 ವಿಶಲ್​ ಕೂಗಿಸಿ ಸ್ವಲ್ಪ ಸಮಯ ಬಿಟ್ಟು ತೆಗೆಯಿರಿ. ಮೇಲೆ ಕೊತ್ತುಂಬರಿ ಸೊಪ್ಪು ಸೇರಿಸಿ ಸವಿಯಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.