ಸಾಂದರ್ಭಿಕ ಚಿತ್ರ 
ಆಹಾರ

ಗ್ಯಾಸ್ ಹಚ್ಚುವ ಕೆಲಸವೇ ಇಲ್ಲ; ಕೇವಲ 10 ನಿಮಿಷದಲ್ಲಿ ಸಿದ್ಧವಾಗಲಿದೆ ಲೇಯರ್ ಬ್ರೆಡ್ ಮಿಲ್ಕ್ ಡೆಸರ್ಟ್! Bread Milk Cake

Bread Milk Cake: ಬ್ರೆಡ್ ಮಿಲ್ಕ್ ಕೇಕ್ ಒಂದು ತುಂಬಾ ಸುಲಭ, ರುಚಿಕರ ಮತ್ತು ನೋ-ಬೇಕ್ ಡೆಸರ್ಟ್ ಆಗಿದೆ. ಈ ಆಹಾರವನ್ನು ಉಳಿದ ಬ್ರೆಡ್‌ನಿಂದಲೇ ತಯಾರಿಸಬಹುದು. ಇದು ಮೃದುವಾಗಿ, ಹಾಲಿನ ರುಚಿಯೊಂದಿಗೆ ಇರುತ್ತದೆ. ಹಾಗಾಗಿ ನೀವೇನಾದರೂ ಕಡಿಮೆ ಸಮಯದಲ್ಲಿ ಕೇಕ್​ ಮಾಡಲು ಪ್ರಯತ್ನಿಸುತ್ತಿದ್ದರೆ, ಇಂದೇ ಈ ಕೇಕ್​ ರೆಸಿಪಿ ತಯಾರಿಸಿ ಸೇವಿಸಿ..

ಬೇಕಾಗುವ ಸಾಮಗ್ರಿಗಳು

* 8-10 ಬ್ರೆಡ್
* ಅರ್ಧ ಲೀಟರ್​ ಹಾಲು
* 2-3 ಚಮಚ ಕಂಡೆನ್ಸ್ಡ್ ಮಿಲ್ಕ್ ಅಥವಾ ಸಕ್ಕರೆ
* ಕೆಲವು ಹನಿ ವೆನಿಲಾ ಎಸೆನ್ಸ್
* ಒಣದ್ರಾಕ್ಷಿ, ಬಾದಾಮಿ, ಕೇಸರಿ

ಮಾಡುವ ವಿಧಾನ

ಮೊದಲು ಎಲ್ಲಾ ಬ್ರೆಡ್​ಗಳಲ್ಲಿರುವ ಕಂದು ಅಂಚುಗಳನ್ನು ತೆಗೆದು ತ್ರಿಕೋನ ಆಕಾರಕ್ಕೆ ಕತ್ತರಿಸಿಕೊಂಡು ಒಂದರ ಮೇಲೆ ಒಂದರಂತೆ ಇಟ್ಟುಕೊಳ್ಳಿ. ನಂತರ ಹಾಲನ್ನು ಆ ಎಲ್ಲಾ ಬ್ರೆಡ್​ ತುಂಡುಗಳ ಮೇಲೆ ಸುರಿಯಿರಿ. ಇದಾದ ಬಳಿಕ ಅದರ ಮೇಲೆ ಕಂಡೆನ್ಸ್ಡ್ ಮಿಲ್ಕ್ ಅಥವಾ ಸಕ್ಕರೆಯನ್ನು ಸೇರಿಸಿ. ಮತ್ತೊಂದು ಬ್ರೆಡ್​ ಇಟ್ಟು ಮತ್ತೆ ಹಾಲು ಸುರಿಯಿರಿ. ಈಗ ಅದರ ಮೆಲೆ ಒಣದ್ರಾಕ್ಷಿ, ಬಾದಾಮಿ, ಗೋಡಂಬಿ ಹಾಕಿ 2 ಗಂಟೆ ಫ್ರಿಜ್​ನಲ್ಲಿಟ್ಟು ತಣ್ಣಗಾಗಲು ಬಿಡಿ. ನಂತರ ಸೇವಿಸಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.