Matar Paneer Tikki (ಸಾಂದರ್ಭಿಕ ಚಿತ್ರ) 
ಆಹಾರ

ಮಕ್ಕಳ ಫೇವರೆಟ್ ಹೆಲ್ದೀ ಸ್ನ್ಯಾಕ್ಸ್: ಮಟರ್ ಪನೀರ್ ಟಿಕ್ಕಿ ಮಾಡುವ ಸುಲಭ ವಿಧಾನ! Matar Paneer Tikki

Matar Paneer Tikki: ಮಟರ್ ಪನೀರ್ ಟಿಕ್ಕಿ ಒಂದು ರುಚಿಕರ, ಆರೋಗ್ಯಕರ ಮತ್ತು ಕ್ರಿಸ್ಪಿ ಸ್ನ್ಯಾಕ್ ಆಗಿದ್ದು, ಇದನ್ನು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಸೇವಿಸಬಹುದಾಗಿದೆ. ಇದನ್ನು ಆರೋಗ್ಯಕರ ಪದಾರ್ಥಗಳಿಂದ ತಯಾರಿಸುವುದರಿಂದ ಈ ಆಹಾರವು ಹೆಲ್ದಿಯಾಗಿರುತ್ತದೆ. ಹಾಗಿದ್ದರೆ, ಇನ್ಯಾಕೆ ತಡ ಈಗ್ಲೇ ಮಾಡಿ ಮಟರ್ ಪನೀರ್ ಟಿಕ್ಕಿ.

ಬೇಕಾಗುವ ಪದಾರ್ಥಗಳು

* 1 ಕಪ್  ಬೇಯಿಸಿದ ಹಸಿ ಬಟಾಣಿ 
* 1 ಕಪ್ ಪನೀರ್ 
* 1-2  ಆಲೂಗಡ್ಡೆ
* 1 ಈರುಳ್ಳಿ  
* 2-3  ಹಸಿ ಮೆಣಸಿನಕಾಯಿ 
* 1 ಇಂಚು ಶುಂಠಿ
* ಕೊತ್ತಂಬರಿ ಸೊಪ್ಪು 
* ಉಪ್ಪು – ರುಚಿಗೆ ತಕ್ಕಂತೆ
* ½ ಚಮಚ ಮೆಣಸಿನ ಪುಡಿ
* ½ ಚಮಚ ಜೀರಿಗೆ ಪುಡಿ
* ½ ಚಮಚ ಗರಮ್ ಮಸಾಲಾ 
* ಬ್ರೆಡ್ ಕ್ರಂಬ್ಸ್ 
* ಎಣ್ಣೆ 

ಮಾಡುವ ವಿಧಾನ

ಮೊದಲು ಹಸಿ ಬಟಾಣಿಯನ್ನು ಬೇಯಿಸಿಕೊಳ್ಳಿ. ನಂತರ ಅದನ್ನು ಸ್ಮಾಶ್​ ಮಾಡಿಕೊಳ್ಳಿ. ದೊಡ್ಡ ಬಟ್ಟಲಿನಲ್ಲಿ ಹಿಸುಕಿದ ಬಟಾಣಿ, ಗ್ರೇಟ್ ಮಾಡಿದ ಪನೀರ್, ಮ್ಯಾಶ್ ಮಾಡಿದ ಆಲೂಗಡ್ಡೆ ಸೇರಿಸಿ. ಇದಕ್ಕೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಕೊತ್ತುಂಬರಿ, ಎಲ್ಲಾ ಮಸಾಲೆಗಳು ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಿ. ಮಿಶ್ರಣ ಒಟ್ಟಾಗಿ ಆಗದಿದ್ದರೆ ಸ್ವಲ್ಪ ಬ್ರೆಡ್ ಕ್ರಂಬ್ಸ್ ಅಥವಾ ಕಾರ್ನ್‌ಫ್ಲೋರ್ ಸೇರಿಸಿಕೊಳ್ಳಿ.
ಮಿಶ್ರಣವನ್ನು ತೆಗೆದುಕೊಂಡು ಅವುಗಳನ್ನು ಚಪ್ಪಟೆ ಆಕಾರವನ್ನು ಮಾಡಿಕೊಳ್ಳಿ. ನಂತರ ಒಲೆಯನ್ನು ಹಚ್ಚಿ ಕಡಾಯಿಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ. ಟಿಕ್ಕಿಗಳನ್ನು ಮಧ್ಯಮ ಜ್ವಾಲೆಯಲ್ಲಿ ಎರಡು ಬದಿಯೂ ಗೋಲ್ಡನ್ ಬ್ರೌನ್ ಆಗುವವರೆಗೆ ಕರಿಯಿರಿ. ಇದನ್ನು ಟೊಮೊಟೋ ಸಾಸ್​ ಜೊತೆ ಸವಿಯಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.