Recipe: ಚಾಕಲೇಟ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇದನ್ನು ಮಕ್ಕಳಿಂದ ಹಿಡಿದು ಹಿರಿಯರವರೆಗೂ ತಿನ್ನಲು ಇಷ್ಟ ಪಡುತ್ತಾರೆ. ಮಾರುಕಟ್ಟೆಯಲ್ಲಿ ಅನೇಕ ರೀತಿಯ ಚಾಕಲೇಟ್ಗಳನ್ನು ನಾವು ಕಾಣಬಹುದು. ಅಂಗಡಿಯಲ್ಲಿ ಸಿಗುವ ಚಾಕಲೇಟ್ಗಳನ್ನು ತಿಂದು ತಿಂದು ಬೇಜಾರಾಗಿದಿಯಾ? ಹಾಗಿದ್ದರೆ, ನಿಮ್ಮ ಮನೆಯಲ್ಲಿಯೇ ಮಾಡಿ ಈ ಚಾಕಲೇಟ್. ರುಚಿಯೂ ಹೆಚ್ಚು, ಆರೋಗ್ಯವು ಉತ್ತಮವಾಗಿರುತ್ತದೆ.
ಬೇಕಾಗುವ ಪದಾರ್ಥಗಳು
* ½ ಕಪ್ (500 ಗ್ರಾಂ) ಕೋಕೋ ಪುಡಿ
* 1 ಕಪ್ (100 ಗ್ರಾಂ) ಹಾಲಿನ ಪುಡಿ
* ½ ಕಪ್ ಬೆಣ್ಣೆ ಅಥವಾ ತುಪ್ಪ
* ರೋಸ್ಟೆಡ್ ಬಾದಾಮಿ ಕ್ಯಾಶ್ಯೂ ನಟ್ಸ್
ಮಾಡುವ ವಿಧಾನ
ಮೊದಲು ಒಂದು ಮಿಕ್ಸಿ ಜಾರಿಗೆ ಸಕ್ಕರೆಯನ್ನು ಹಾಕಿ ನುಣ್ಣಗೆ ಮಿಕ್ಸಿ ಮಾಡಿಕೊಳ್ಳಿ. ನಂತರ ಒಂದು ಪಾತ್ರೆಗೆ ಬೆಣ್ಣೆಯನ್ನು ಹಾಕಿ ಕಡಿಮೆ ಉರಿಯಲ್ಲಿ ಕರಗಿಸಿಕೊಳ್ಳಿ. ನಂತರ ಆ ಕರಗಿದ ಬೆಣ್ಣೆಗೆ ಕೋಕೋ ಪುಡಿ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಇದರ ನಂತರ ಸಕ್ಕರೆ ಪುಡಿ ಮತ್ತು ಹಾಲಿನ ಪುಡಿ ಸೇರಿಸಿ ಗಂಟು ಬರದಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇದಾದ ಬಳಿಕ ಈ ಮಿಶ್ರಣಕ್ಕೆ ರೋಸ್ಟ್ ಮಾಡಿದ ನಟ್ಸ್‌ಗಳನ್ನು ಸೇರಿಸಿ ಕಲಸಿಕೊಳ್ಳಿ. ಒಂದು ತಟ್ಟೆಗೆ ಬೆಣ್ಣೆಯನ್ನು ಹಚ್ಚಿ ಈ ಮಿಶ್ರಣವನ್ನು ಸುರಿಯಿರಿ. ನಂತರ 1-2 ಗಂಟೆಗಳ ತನಕ ಫ್ರಿಜ್ನಲ್ಲಿಟ್ಟು ಮಿಶ್ರಣವನ್ನು ಗಟ್ಟಿಮಾಡಿಕೊಳ್ಳಿ. ನಂತರ ಕತ್ತರಿಸಿ ಸೇವಿಸಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.