Green Tea (ಸಾಂದರ್ಭಿಕ ಚಿತ್ರ) 
ಆಹಾರ

ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚು! ಗ್ರೀನ್ ಟೀ ಕುಡಿಯಬಾರದ ಆ ಐದು ಮಂದಿ ಯಾರು ಗೊತ್ತಾ? Green Tea

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ದಿನಗಳಲ್ಲಿ ಗ್ರೀನ್​ ಟೀ ಬಗ್ಗೆ ಅನೇಕರು ಒಲವು ತೋರುವುದನ್ನು ನಾವು ನೋಡಿರುತ್ತೇವೆ
  • ಆರೋಗ್ಯಕರ ದೃಷ್ಟಿಕೋನದಿಂದ ಇದನ್ನು ಕುಡಿಯುವುದರಿಂದ ದೇಹದ ತೂಕವನ್ನು ಇಳಿಸಿಕೊಳ್ಳಬಹುದು
  • ಆಧುನಿಕ ವಿಜ್ಞಾನದ ಪ್ರಕಾರ, ಪ್ರತಿನಿತ್ಯ ಗ್ರೀನ್ ಟೀ ಕುಡಿಯುವುದು ಎಲ್ಲರಿಗೂ ಒಳ್ಳೆಯದಲ್ಲ
  • ಹಸಿರು ಚಹಾದಲ್ಲಿ ಕೆಫೇನ್​ ಇರುವುದರಿಂದ ಇದರ ಸೇವನೆಯು ಮಗುವಿಗೆ ಅಪಾಯ
Green Tea: ಇತ್ತೀಚಿನ ದಿನಗಳಲ್ಲಿ ಗ್ರೀನ್​ ಟೀ ಬಗ್ಗೆ ಅನೇಕರು ಒಲವು ತೋರುವುದನ್ನು ನಾವು ನೋಡಿರುತ್ತೇವೆ. ಆರೋಗ್ಯಕರ ದೃಷ್ಟಿಕೋನದಿಂದ ಇದನ್ನು ಕುಡಿಯುವುದರಿಂದ ದೇಹದ ತೂಕವನ್ನು ಇಳಿಸಿಕೊಳ್ಳಬಹುದು ಎಂದು ತಿಳಿದಿರುತ್ತಾರೆ. ಅದಕ್ಕಾಗಿ ಪ್ರತಿನಿತ್ಯ ಇದರ ಇದನ್ನು ಚಾಚು ತಪ್ಪದೇ ಕುಡಿಯುತ್ತಾರೆ.
ಆದರೆ ಗ್ರೀನ್ ಟೀ ಎಲ್ಲರಿಗೂ ಒಳ್ಳೆಯದಲ್ಲ. ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ಪ್ರಕಾರ, ಕೆಲವರು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು ಹಾಗೆಯೇ ಇನ್ನೂ ಕೆಲವರು ಸಂಪೂರ್ಣವಾಗಿ ತ್ಯಜಿಸಬೇಕು. ಹಾಗಿದ್ದರೆ, ಅವರು ಯಾರು ಮತ್ತು ಏಕೆ ಎಂದು ನೋಡೋಣ ಬನ್ನಿ...

ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು

ಗರ್ಭಾವಸ್ಥೆಯಲ್ಲಿ ಕೆಫೀನ್ ಸೇವನೆಯನ್ನು ಮಿತಗೊಳಿಸುವಂತೆ ಹೇಳಲಾಗುತ್ತದೆ. ಏಕೆಂದರೆ, ಇದು ನೇರವಾಗಿ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಹಸಿರು ಚಹಾದಲ್ಲಿ ಕೆಫೇನ್​ ಇರುವುದರಿಂದ ಇದರ ಸೇವನೆಯು ಮಗುವಿಗೆ ಅಪಾಯ ಎಂದು ಹೇಳಲಾಗುತ್ತದೆ. ಹಾಲಿನ ಮೂಲಕ ಮಗುವಿಗೆ ಕೆಫೇನ್​ ಅನ್ನು ಕಳುಹಿಸಬಹುದು. ಇದರಿಂದ ಅವರ ನಿದ್ರೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು.

ಕಬ್ಬಿಣದ ಕೊರತೆಯಿರುವ ಜನರು

ರಕ್ತಹೀನತೆ ಅಥವಾ ಕಬ್ಬಿಣದ ಕೊರತೆ ಇರುವಂತಹ ಜನರು ಹಸಿರು ಚಹಾವನ್ನು ಕುಡಿಯುವ ಅಭ್ಯಾಸವನ್ನು ಮಾಡುವುದರಿಂದ ದೇಹಕ್ಕೆ ಹಾನಿಯಾಗಬಹುದು. ಆದಾಗ್ಯೂ, ಇದರಲ್ಲಿರುವ ಟ್ಯಾನಿನ್​ಗಳು ದೇಹವು ಕಬ್ಬಿಣಾಂಶವನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಜೊತೆಗೆ ಇದು ರಕ್ತ ಹೀನತೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹಾಗಾಗಿ ಅಂತವರು ಹಸಿರು ಚಹಾ ಸೇವನೆಯನ್ನು ನಿಯಂತ್ರಿಸುವುದು ಉತ್ತಮ.

ಹೊಟ್ಟೆಯ ಕಾಯಿಲೆ ಇರುವ ಜನರು

ಆಮ್ಲೀಯತೆ, ಹುಣ್ಣುಗಳು, ಅಸಿಡಿಟಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿರುವ ಜನರು ಹಸಿರು ಚಹಾವನ್ನು ಸೇವಿಸುವ ಅಭ್ಯಾಸವನ್ನು ಇಂದೇ ಬಿಟ್ಟು ಬಿಡಿ. ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅದರಲ್ಲಿರುವ ಟ್ಯಾನಿನ್​ಗಳು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುವುದರ ಜೊತೆಗೆ ಎದೆಯುರಿ ಮತ್ತು ನೋವನ್ನು ಉಂಟು ಮಾಡುತ್ತದೆ.

ನಿದ್ರೆಯ ಸಮಸ್ಯೆ ಇರುವವರು

ನಿಮಗೆ ಸರಿಯಾದ ಸಮಯಕ್ಕೆ ನಿದ್ರೆ ಬಾರದೇ ಇದ್ದರೆ, ಅಥವಾ ಆಗ್ಗಾಗೆ ವಿಶ್ರಾಂತಿ ಇಲ್ಲದೇ ಆತಂಕ ಮತ್ತು ಖಿನ್ನತೆಗೆ ಒಳಗಾಗಿದ್ದರೆ, ಗ್ರೀನ್​ ಟೀ ಸೇವಿಸಬೇಡಿ. ಇದು ಇನ್ನಷ್ಟು ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಗ್ರೀನ್ ಟೀಯಲ್ಲಿರುವ ಕೆಫೀನ್ ನಿಮ್ಮ ಮೆದುಳನ್ನು ಹೆಚ್ಚು ಸಕ್ರಿಯಗೊಳಿಸಿ ವಿಶ್ರಾಂತಿ ಪಡೆಯಲು ಸಾಧ್ಯವಾಗದಂತೆ ಮಾಡಬಹುದು.

ಹೃದಯ ರೋಗಿಗಳು

ಅಧಿಕ ರಕ್ತದೊತ್ತಡ ಅಥವಾ ಹೃದಯ ಕಾಯಿಲೆ ಇರುವಂತಹ ಜನರು ಹಸಿರು ಚಹಾವನ್ನು ಸೀಮಿತ ಪ್ರಮಾಣದಲ್ಲಿ ಕುಡಿಯಬೇಕು. ಏಕೆಂದರೆ ಇದರಲ್ಲಿರುವ ಕೆಫೀನ್ ಹೃದಯ ಬಡಿತವನ್ನು ಹೆಚ್ಚಿಸಬಹುದು ಜೊತೆಗೆ ರಕ್ತದೊತ್ತಡದ ಮೇಲೆ ಗಂಭೀರ ಪರಿಣಾಮವನ್ನು ಬೀರಬಹುದು. ಹಾಗಾಗಿ ಹೃದಯ ರೋಗಿಗಳು ಗ್ರೀನ್ ಟೀ ಸೇವಿಸಲೇ ಬೇಡಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.