ಸಾಂದರ್ಭಿಕ ಚಿತ್ರ 
ಆಹಾರ

ಬಾಟಲಿಯಲ್ಲಿರುವ ಸಕ್ಕರೆ ಗಟ್ಟಿಯಾಗಿದೆಯೇ? ಸಕ್ಕರೆಯನ್ನು ದೀರ್ಘಕಾಲ ತಾಜಾವಾಗಿಡಲು ಇಲ್ಲಿವೆ ಸಿಂಪಲ್ ಟಿಪ್ಸ್! Sugar store

ಪ್ರಮುಖ ಮುಖ್ಯಾಂಶಗಳು

  • ಸಕ್ಕರೆಯು ನಮ್ಮ ದೈನಂದಿನ ಆಹಾರದ ಅವಿಭಾಜ್ಯ ಅಂಗವಾಗಿದೆ
  • ಕೆಲವೊಂದು ಅಡುಗೆಗಳಲ್ಲಿ ಸಕ್ಕರೆ ಇಲ್ಲದೇ, ಆಹಾರ ತಯಾರಿಸಲು ಸಾಧ್ಯವೇ ಇಲ್ಲ
  • ನಾವೆಲ್ಲರೂ ಈ ಸಕ್ಕರೆಯನ್ನು ಗಾಜಿನ ಡಬ್ಬಿ ಅಥವಾ ಪ್ಲಾಸ್ಟಿಕ್​ ಡಬ್ಬದಲ್ಲಿ ಇಡುತ್ತೇವೆ
  • ಸಕ್ಕರೆ ವಾತಾವರಣದಲ್ಲಿರುವ ತೇವಾಂಶವನ್ನು ಹೀರಿಕೊಳ್ಳುವುದರಿಂದ ಸಕ್ಕರೆಯು ಉಂಡೆ ರೀತಿಯಲ್ಲಾಗುತ್ತದೆ
Sugar store: ಸಕ್ಕರೆಯು ನಮ್ಮ ದೈನಂದಿನ ಆಹಾರದ ಅವಿಭಾಜ್ಯ ಅಂಗವಾಗಿದೆ, ಕೆಲವೊಂದು ಅಡುಗೆಗಳಲ್ಲಿ ಸಕ್ಕರೆ ಇಲ್ಲದೇ, ಆಹಾರ ತಯಾರಿಸಲು ಸಾಧ್ಯವೇ ಇಲ್ಲ. ನಾವೆಲ್ಲರೂ ಈ ಸಕ್ಕರೆಯನ್ನು ಗಾಜಿನ ಡಬ್ಬಿ ಅಥವಾ ಪ್ಲಾಸ್ಟಿಕ್​ ಡಬ್ಬದಲ್ಲಿ ಇಡುತ್ತೇವೆ. ಕೆಲವೊಮ್ಮೆ ಬಾಟಲಿಯಲ್ಲಿ ಇಟ್ಟಿರುವ ಸಕ್ಕರೆ ತೇವಾಂಶದಿಂದಾಗಿ ಅಂಟಿಕೊಳ್ಳುವುದು, ಗಟ್ಟಿಯಾದ, ಕಲ್ಲಿನಂತಹ ಉಂಡೆಗಳು ಕಾಣುತ್ತದೆ.
ಸಕ್ಕರೆ ವಾತಾವರಣದಲ್ಲಿರುವ ತೇವಾಂಶವನ್ನು ಹೀರಿಕೊಳ್ಳುವುದರಿಂದ ಸಕ್ಕರೆಯು ಉಂಡೆ ರೀತಿಯಲ್ಲಿ ರೂಪುಗೊಳ್ಳುತ್ತದೆ. ಹಾಗಾಗಿ ಇದನ್ನು ತೇವಾಂಶದಿಂದ ಕಾಪಾಡುವುದು ಕಷ್ಟವಾಗುತ್ತದೆ. ಅದೇ ರೀತಿ ಜಾಗರೂಕತೆಯಿಂದ ವರ್ತಿಸಿದರೆ, ಇರುವೆಗಳು ಸಕ್ಕರೆ ಒಳಗೆ ಹೋಗಿ ಮೊಟ್ಟೆಗಳನ್ನು ಇಡಲು ಪ್ರಾರಂಭಿಸುತ್ತದೆ.

ಸಕ್ಕರೆಯನ್ನು ಹೇಗೆ ಸಂಗ್ರಹಿಸುವುದು ಹೇಗೆ?

ಪ್ರತ್ಯೇಕ ಪಾತ್ರೆಯಲ್ಲಿ ಸಂಗ್ರಹಿಸಿ

ಸಕ್ಕರೆಯನ್ನು ಯಾವಾಗಲು ಪ್ರತ್ಯೇಕ ಪಾತ್ರೆಯಲ್ಲಿ ಸಂಗ್ರಹಿಸಿ ಗಾಳಿ ಹೋಗದಂತೆ ನೋಡಿಕೊಳ್ಳಬೇಕು. ನೀವು ಎಲ್ಲೆಂದರಲ್ಲಿ ಸಕ್ಕರೆ ಪಾತ್ರೆಯನ್ನು ಇಡುವುದರಿಂದ ಅದು ಒಣಗಲು ಪ್ರಾರಂಭವಾಗುತ್ತದೆ. ಆದರಿಂದ ಗಾಳಿಯಾಡದ ಗಾಜಿನ ಪಾತ್ರೆಯಲ್ಲಿ ಅಥವಾ ಉತ್ತಮ ಪ್ಲಾಸ್ಟಿಕ್ ಪಾತ್ರೆಯಲ್ಲಿ ಸಕ್ಕರೆಯನ್ನು ಸಂಗ್ರಹಿಸಿ ಇಡಬೇಕು.

ಈ ಸ್ಥಳದಲ್ಲಿ ಎಂದಿಗೂ ಇಡಬೇಡಿ

ನಿಮ್ಮ ಮನೆಯ ಸಕ್ಕರೆ ಬಟ್ಟಲನ್ನು ಒಲೆಯ ಬಳಿ ಅಥವಾ ಸಿಂಕ್ ಕೆಳಗಿರುವ ಶೆಲ್ಫ್‌ನಲ್ಲಿ ಎಂದಿಗೂ ಸಂಗ್ರಹಿಸಬೇಡಿ. ಏಕೆಂದರೆ, ತಾಪಮಾನದ ಏರಿತವು ಸಕ್ಕರೆಯನ್ನು ಗಟ್ಟಿಯಾಗಿಸುತ್ತದೆ. ಹಾಗೆಯೇ ಇದು ಶಾಖ ಹೆಚ್ಚಾದ ಪ್ರದೇಶದಲ್ಲಿ ಇಡುವುದರಿಂದ ಸಕ್ಕರೆ ತೇವಾಂಶವನ್ನು ಕಳೆದುಕೊಳ್ಳುತ್ತದೆ.

ಸಕ್ಕರೆಗೆ ಮಾರ್ಷ್ಮ್ಯಾಲೋಗಳನ್ನು ಸೇರಿಸಿ

ನೀವು ಸಂಗ್ರಹಿಸುವ ಸಕ್ಕರೆ ಬಟ್ಟಲಿಗೆ ಒಂದು ಅಥವಾ 2 ಮಾರ್ಷ್ಮ್ಯಾಲೋಗಳನ್ನು ಸೇರಿಸಿರಿ. ಇದು ಸಕ್ಕರೆಯನ್ನು ತೇವವಾಗಿಡಲು ಮತ್ತು ಶುದ್ಧವಾಗಿರುವಂತೆ ಸಹಾಯ ಮಾಡುತ್ತದೆ. ಈ ರೀತಿ ಮಾಡುವುದರಿಂದ ಮಾರ್ಷ್ಮ್ಯಾಲೋಗಳು ಸಕ್ಕರೆ ಬಟ್ಟಲಿನಿಂದ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತವೆ. ಹಾಗೆಯೇ ಸಕ್ಕರೆ ಡಬ್ಬಕ್ಕೆ ಅಂಟಿಕೊಳ್ಳದಂತೆ ತಡೆಯುತ್ತದೆ.

ಮಣ್ಣಿನ ದೀಪವನ್ನು ಇಡಿ

ಸಕ್ಕರೆ ಬಟ್ಟಲಿನಲ್ಲಿ ಶುದ್ಧವಾದ ಜೇಡಿ ಮಣ್ಣಿನಿಂದ ತಯಾರದ ಮಣ್ಣಿನ ದೀಪವನ್ನು ಇಡುವುದು ಬಹಳ ಪ್ರಯೋಜನಕಾರಿ. ಹೀಗೆ ಮಾಡುವುದರಿಂದ ಇದು ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಸಕ್ಕರೆ ಗಟ್ಟಿಯಾಗುವುದನ್ನು ತಡೆಯುತ್ತದೆ. ಹಾಗೆಯೇ ಇದು ತುಂಬಾ ದಿನಗಳವರೆಗೆ ತಾಜಾವಾಗಿರುತ್ತದೆ.

ಒಣಗಿದ ಕಿತ್ತಳೆ ಸಿಪ್ಪೆ ಇಡಿ

ನೀವು ಸಂಗ್ರಹಿಸಿಟ್ಟುರುವ ಸಕ್ಕರೆ ಡಬ್ಬಕ್ಕೆ ಒಣಗಿದ ಕಿತ್ತಳೆ ಸಿಪ್ಪೆಯನ್ನು ಇಡುವುದು ಉತ್ತಮ ಆಯ್ಕೆಯಾಗಿದೆ. ಇದು ತೇವಾಂಶವನ್ನು ಹೀರಿಕೊಳ್ಳುವುದಲ್ಲದೇ, ಇರುವೆಗಳು ಸಕ್ಕರೆ ಒಳಗೆ ಸೇರಿಕೊಳ್ಳದಂತೆ ತಡೆಯುತ್ತದೆ. ಸಿಪ್ಪೆ ಪೂರ್ತಿಯಾಗಿ ಒಣಗಿದೆಯೇ ಎಂದು ತಿಳಿದುಕೊಳ್ಳಿ. ಇಲ್ಲದಿದ್ದರೆ, ಕಿತ್ತಳೆ ಹಣ್ಣಿನ ತೇವಾಂಶವು ಸಕ್ಕರೆಯನ್ನು ಹಾಳು ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.