Ghee: ಬಿಸಿ ಬಿಸಿ ಅನ್ನ ಸಾಂಬಾರಿಗೆ ಸ್ವಲ್ಪ ತುಪ್ಪ ಸೇರಿಸಿ ತಿಂದಾಗ ಆಗುವ ಖುಷಿಯೇ ಬೇರೆ. ಅಂದಹಾಗೆ, ಹಲವಾರು ಜನರು ಆಹಾರದಲ್ಲಿ ತುಪ್ಪವನ್ನು ಬೆರೆಸಿ ಸೇವಿಸಲು ಇಷ್ಟ ಪಡುತ್ತಾರೆ. ಇದನ್ನು ದೇಸೀ ಸೂಪರ್ ಫುಡ್ ಎಂದು ಸಹ ಕರೆಯಲಾಗುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ, ಮಾರುಕಟ್ಟೆಯಲ್ಲಿ ಅನೇಕ ಬ್ರಾಂಡ್ನ ತುಪ್ಪಗಳು ಲಗ್ಗೆ ಇಟ್ಟಿವೆ. ಇದರ ದರಗಳು ಕೂಡಾ ಬಹಳ ದುಬಾರಿಯಾಗಿದೆ. ಆದರಿಂದ ಕಲಬೆರಕೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಾಗಾಗಿ ಇವುಗಳು ಯಾವುದು ಎಂದು ನಿರ್ಧರಿಸಲು ಜನರಿಗೆ ಕಷ್ಟವಾಗುತ್ತಿದೆ.
ಹೌದು! ಕಲಬೆರೆಕೆಗಳು ಹೆಚ್ಚಾಗುತ್ತಿದ್ದಂತೆಯೇ ಆಹಾರ ಮತ್ತು ಪಾನೀಯಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತಿರುವ ಪ್ರಭಾವಿ ರೇವಂತ್ ಹಿಮತ್ಸಿಂಗ, ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಕಳಪೆ ತುಪ್ಪವನ್ನು ಪತ್ತೆ ಹಚ್ಚುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ತುಪ್ಪ ಪರೀಕ್ಷೆ ಮಾಡುವುದು ಹೇಗೆ?
ಶುದ್ಧ ತುಪ್ಪವನ್ನು ಪರೀಕ್ಷಿಸುವ ಈ ವಿಧಾನವು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ (FSSAI) ಅಧಿಕೃತ ಪರೀಕ್ಷಾ ಪುಸ್ತಕದಿಂದ ಬಂದಿದೆ ಎಂದು ರೇವಂತ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ತುಪ್ಪವನ್ನು ಪರೀಕ್ಷೆ ಮಾಡಲು ಇಲ್ಲಿದೆ ಪರಿಹಾರ!
ಮೊದಲು ಒಂದು ಬಟ್ಟಲಲ್ಲಿ ಶುದ್ಧ ತುಪ್ಪವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಸೇರಿಸಬೇಕು. ನಂತರ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಸಮಯದಲ್ಲಿ ತುಪ್ಪವು ನೀಲಿ ಬಣ್ಣಕ್ಕೆ ತಿರುಗಿದರೆ, ಅದು ನಕಲಿ ತುಪ್ಪ ಹಾಗೂ ಹಳದಿ ಬಣ್ಣದಲ್ಲಿರೆ ತುಪ್ಪ ನಿಜವಾದದ್ದು ಎಂದು ತಿಳಿಯಿರಿ.
ಚಳಿಗಾಲದಲ್ಲಿ ತುಪ್ಪ ತಿನ್ನುವುದರಿಂದಾಗುವ ಪ್ರಯೋಜನಗಳು
ಚಳಿಗಾಲದಲ್ಲಿ ಹಸಿ ತುಪ್ಪ ತಿನ್ನುವುದರಿಂದ ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದು ದೇಹದಲ್ಲಿ ಉಷ್ಣತೆ ಹೆಚ್ಚಿಸಿ, ಶೀತ ಗಾಳಿಯಿಂದ ದೇಹವನ್ನು ರಕ್ಷಿಸುತ್ತದೆ. ತುಪ್ಪವು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿ, ಜ್ವರ, ಶೀತದಂತಹ ಕಾಯಿಲೆಗಳನ್ನು ಶಮನಗೊಳಿಸುತ್ತದೆ, ಹಾಗೆಯೇ ತುಪ್ಪವು ಜೀರ್ಣಾಂಗ ವ್ಯವಸ್ಥೆಯನ್ನು ಬೆಂಬಲಿಸಿ, ಮಲಬದ್ಧತೆಯನ್ನು ನಿವಾರಿಸುತ್ತದೆ.
ಚಳಿಗಾಲದಲ್ಲಿ ತುಪ್ಪವನ್ನು ಸೇವಿಸುವುದರಿಂದ ಇದು ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಇದು ಶುಷ್ಕತೆಯಿಂದ ರಕ್ಷಿಸುತ್ತದೆ. ನೈಸರ್ಗಿಕ ತೇವಾಂಶ ಮತ್ತು ಹೊಳಪನ್ನು ನೀಡುತ್ತದೆ. ಸರಿಯಾದ ಪ್ರಮಾಣದಲ್ಲಿ ತುಪ್ಪವನ್ನು ಸೇವಿಸುವುದರಿಂದ ಮನಸ್ಸನ್ನು ಚುರುಕುಗೊಳಿಸಿ, ದೇಹವನ್ನು ಬೆಚ್ಚಗಿಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.