Recipe: ಇಂದಿನ ದಿನಗಳಲ್ಲಿ ಬ್ಯಾಚುಲರ್ಸ್ಗಳಿಗೆ ಅಡುಗೆ ಮಾಡುವುದು ಒಂದು ಸವಾಲಾಗಿ ಮಾರ್ಪಟ್ಟಿದೆ. ಆದರಿಂದ ಪ್ರತಿನಿತ್ಯ ಹೊರಗೆ ತಿನ್ನುವ ಅಭ್ಯಾಸವನ್ನು ರೂಢಿಮಾಡಿಕೊಂಡಿರುತ್ತಾರೆ. ಈ ರೀತಿಯಾಗಿ ಹೊರಗಿನ ಆಹಾರವನ್ನು ಸೇವಿಸುವುದರಿಂದಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಯಾವುದೇ ಟೆಶ್ಯನ್ ಇಲ್ಲದೇ, ಸುಲಭವಾಗಿ ದಿಡೀರ್ ಈ ಖಿಚಡಿಯನ್ನು ಮಾಡಿ ಸೇವಿಸಿರಿ...
ಬೇಕಾಗುವ ಪದಾರ್ಥಗಳು
* ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಹೆಸರು ಬೇಳೆ ಮತ್ತು ಅಕ್ಕಿಯನ್ನು ಒಟ್ಟಿಗೆ ತೊಳೆದು 10 ನಿಮಿಷ ನೆನೆಸಿ ಇಡಿ. ನಂತರ ಒಂದು ಕುಕ್ಕರ್ಗೆ ತುಪ್ಪ ಹಾಕಿ ಬಿಸಿ ಮಾಡಿ ನಂತರ, ಜೀರಿಗೆ, ಸಾಸಿವೆ ಹಾಕಿ ಸಿಡಿಯಲು ಬಿಡಿ. ಇದಾದ ಬಳಿಕ ಈರುಳ್ಳಿ, ಹಸಿ ಮೆಣಸು, ಶುಂಠಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಟೊಮೇಟೋ ಸೇರಿಸಿ ಈ ಮಿಶ್ರಣಕ್ಕೆ ಅರಿಶಿನ ಮತ್ತು ಉಪ್ಪು ಸೇರಿಸಿ ಫ್ರೈ ಮಾಡಿ.
ನಂತರ ನೆನಸಿಟ್ಟುಕೊಂಡಿರುವ ಅಕ್ಕಿ ಮತ್ತು ಬೇಳೆಯನ್ನು ಹಾಕಿ ಅದಕ್ಕೆ 3-4 ಕಪ್ ನೀರು ಸೇರಿಸಿ ಮುಚ್ಚಳ ಹಾಕಿ 3-4 ವಿಸಿಲ್ ಬರುವವರೆಗೂ ಬೇಯಿಸಿರಿ. ತಣ್ಣಗಾದ ನಂತರ ಕೊತ್ತುಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ. ತುಪ್ಪ ಸೇರಿಸಿ ಸವಿಯಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.