Multigrain Paneer Sandwich: ತೂಕ ಹೆಚ್ಚಿಸಿಕೊಳ್ಳುವುದು ಸುಲಭವಾದ ಮಾತಲ್ಲ. ಅದಕ್ಕೆ ಶಿಸ್ತು ಬದ್ಧ ಕ್ರಮ ಅಗತ್ಯವಾಗಿರುತ್ತದೆ. ಅಂದಹಾಗೇ, ನೀವೇನಾದರೂ ತೂಕ ಹೆಚ್ಚಿಸಿಕೊಳ್ಳಬೇಕೆಂದಿದ್ದರೆ, ಈ ಮಲ್ಟಿಗ್ರೇನ್ ಪನೀರ್ ಸ್ಯಾಂಡ್‌ವಿಚ್ ಸೇವಿಸಿ. ಇದು ಒಂದು ಆರೋಗ್ಯಕರ, ಪ್ರೋಟೀನ್ ಸಮೃದ್ಧ ಮತ್ತು ರುಚಿಕರವಾದ ಬ್ರೇಕ್‌ಫಾಸ್ಟ್ ಆಗಿದೆ. ಇದರ ನಿಯಮಿತ ಸೇವನೆಯು ದೇಹಕ್ಕೆ ಫೈಬರ್ ನೀಡುವುದರ ಜೊತೆಗೆ ಪ್ರೋಟೀನ್ ನಿಡುತ್ತದೆ. ಇದರಿಂದ ತೂಕ ಹೆಚ್ಚಿಸಿಕೊಳ್ಳಬಹುದು.
ಬೇಕಾಗುವ ಪದಾರ್ಥಗಳು
* 6-8 ಮಲ್ಟಿಗ್ರೇನ್ ಬ್ರೆಡ್ ಸ್ಲೈಸ್‌ಗಳು
* 2-3 ಚಮಚ ಬೆಣ್ಣೆ ಅಥವಾ ತುಪ್ಪ
* 2-3 ಚಮಚ ಬೇಯಿಸಿದ ಕಾಳುಗಳು
ಮಾಡುವ ವಿಧಾನ
ಒಂದು ಬೌಲ್ನಲ್ಲಿ ಪನೀರ್ನ್ನು ತುರಿದಿಟ್ಟುಕೊಳ್ಳಿ. ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಟೊಮೇಟೊ, ಕ್ಯಾಪ್ಸಿಕಮ್, ಕ್ಯಾರೆಟ್ , ಕಾರ್ನ್, ಕೊತ್ತಂಬರಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಅದಕ್ಕೆ ಉಪ್ಪು, ಕಾಳು ಮೆಣಸಿನ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲಾ ಸ್ವಲ್ಪ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಿ.
ಈಗ ಬ್ರೆಡ್ ತುಂಡುಗಳ ಮೇಲೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಹಚ್ಚಿರಿ. ಒಂದು ಸ್ಲೈಸ್ ಮೇಲೆ ಟೊಮೇಟೊ ಸಾಸ್ ಹಚ್ಚಿ ನಂತರ ಮಾಡಿಟ್ಟುಕೊಂಡಿರುವ ಪನೀರ್ ಫಿಲ್ಲಿಂಗ್ ಅದರ ಮೇಲಿಟ್ಟು ಮತ್ತೊಂದು ಬ್ರೆಡ್ ಸ್ಲೈಸ್ ಇಂದ ಮುಚ್ಚಿರಿ. ನಂತರ ಒಲೆಯ ಮೇಲೆ ಪ್ಯಾನ್ ಇಟ್ಟು ಎರಡೂ ಬದಿಯನ್ನು 5 ನಿಮಿಷ ಬಿಸಿ ಮಾಡಿ ಸೇವಿಸಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.