ಸಾಂದರ್ಭಿಕ ಚಿತ್ರ 
ಆಹಾರ

ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಓಟ್ಸ್​ ರೆಸಿಪಿ ಟ್ರೈ ಮಾಡಿ! Recipe

Recipe: ತೂಕ ಹೆಚ್ಚಿಸಿಕೊಳ್ಳುವ ಪ್ರಕ್ರಿಯೆ ಸುಲಭದ ಮಾತೇನಲ್ಲ. ಅದಕ್ಕಾಗಿ ಹಲವಾರು ಜನರು ಶ್ರಮ ಪಡುತ್ತಿರುತ್ತಾರೆ. ಅನೇಕ ರೀತಿಯ ಆಹಾರ ಕ್ರಮಗಳನ್ನು ಪಾಲಿಸಿರುತ್ತಾರೆ. ಆದರೂ ತೂಕ ಹೆಚ್ಚಾಗದೇ ಬೇಸರಗೊಳ್ಳುತ್ತಾರೆ. ತೂಕ ಇಳಿಸಿಕೊಳ್ಳಲು ವ್ಯಾಯಾಮದ ಜೊತೆ ಆಹಾರವು ಮುಖ್ಯ ಹಾಗಾಗಿ ನೀವೇನಾದರೂ ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಇಂದಿನಿಂದಲೇ ಈ ಆಹಾರವನ್ನು ತಪ್ಪದೇ ಸೇವಿಸಿ. ನಂತರ ಫಲಿತಾಂಶ ವೀಕ್ಷಿಸಿ..

ಬೇಕಾಗುವ ಸಾಮಗ್ರಿಗಳು 

1 ಕಪ್  ಓಟ್ಸ್ 
2 ಕಪ್ ಪೂರ್ಣ ಹಾಲು 
2 ಬಾಳೆಹಣ್ಣು  
2-3 ಚಮಚ ಪೀನಟ್ ಬಟರ್
2 ಟೇಬಲ್ ಸ್ಪೂನ್  ಬಾದಾಮಿ/ ಗೋಡಂಬಿ 
2 ಟೇಬಲ್ ಸ್ಪೂನ್ ಜೇನುತುಪ್ಪ 
ಸ್ವಲ್ಪ ಡ್ರೈ ಫ್ರೂಟ್ಸ್ 

ಮಾಡುವ ವಿಧಾನ

ಮೊದಲು ಹಾಲಿನಲ್ಲಿ ಓಟ್ಸ್​​ ಬೇಯಿಸಿಕೊಳ್ಳಿ. ನಂತರ ಅದಕ್ಕೆ ಬಾಳೆಹಣ್ಣು, ಪೀನಟ್ ಬಟರ್, ಜೇನುತುಪ್ಪ ಮಿಕ್ಸ್ ಮಾಡಿ. ಅದರ ಮೇಲೆ ನಟ್ಸ್​ ಮತ್ತು ಡ್ರೈ ಫ್ರೂಟ್ಸ್​ ಹಾಕಿ ಬೆಳಗಿನ ಬ್ರೇಕ್​ ಫಾಸ್ಟ್​ ಆಗಿ ಸವಿಯಿರಿ. ಈ ಆಹಾರವನ್ನು 3 ತಿಂಗಳ ಕಾಲ ಸೇವಿಸುವುದರಿಂದ ತೂಕವನ್ನು ಹೆಚ್ಚಿಸಿಕೊಳ್ಳಬಹುದು (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.