vegetable soup: ಚಳಿಗಾಲದಲ್ಲಿ ಬಿಸಿ ಬಿಸಿ ಸೂಪ್ ಕುಡಿಯಲು ಬಯಸಿದರೆ, ಮಿಶ್ರ ತರಕಾರಿ ಸೂಪ್ ಪಾಕವಿಧಾನವನ್ನು ಪ್ರಯತ್ನಿಸಿ, ನೀವು ಇದನ್ನು ಮಾಡಿ ರುಚಿ ನೋಡಯಲು ಬಯಸಿದರೆ ನಾವು ಇಂದು ಈ ಸೂಪ್ ಮಾಡಲು ಬೇಕಾಗುವ ಸಾಮಗ್ರಿಗಳ ಸಹಿತ ಮಾಡುವ ವಿಧಾನವನ್ನು ತಿಳಿಸಲಿದ್ದೇವೆ.
ತರಕಾರಿ ಸೂಪ್ ಮಾಡಲು ಬೇಕಾಗಿರುವುದು ಸಾಮಗ್ರಿಗಳು:
1) 2 ಸಣ್ಣಗೆ ಹೆಚ್ಚಿದ ಕ್ಯಾರೆಟ್
2) ಸಣ್ಣಗೆ ಹೆಚ್ಚಿದ ಹೂಕೋಸು-ಅರ್ಧ ಕಪ್
3) ಹಸಿರು ಬಟಾಣಿ- ಅರ್ಧ ಕಪ್
4) ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ-1
5) ಶುಂಠಿ - ಸ್ವಲ್ಪ
6) ಕಾರ್ನ್ ಹಿಟ್ಟು- 2 ಚಮಚ
7) ಬೆಣ್ಣೆ - 2 ಚಮಚ
8) ಕರಿಮೆಣಸುಪುಡಿ- ಅರ್ಧ ಚಮಚ
9) ಮೆಣಸಿನಕಾಯಿ ಸಾಸ್- 1 ಚಮಚ
10) ಉಪ್ಪು- ರುಚಿಗೆ ತಕ್ಕಷ್ಟು
11) ಅರ್ಧ ನಿಂಬೆ
12) ಕೊತ್ತಂಬರಿ ಸೊಪ್ಪು- ಸ್ವಲ್ಪ
1) ಬೆಣ್ಣೆಯನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ. ನಂತರ ಬಿಸಿ ಬೆಣ್ಣೆಗೆ ಶುಂಠಿ ಪೇಸ್ಟ್ ಮತ್ತು ಕತ್ತರಿಸಿದ ತರಕಾರಿಗಳನ್ನು ಸೇರಿಸಿ ಚೆನ್ನಾಗಿ ಪ್ರೈ ಮಾಡಿ.
2) ಕಾರ್ನ್ ಫ್ಲೋರ್ ಅನ್ನು 2 ಚಮಚ ನೀರಿನೊಂದಿಗೆ ಬೆರೆಸಿ ಕುದಿಯುತ್ತಿರುವ ಪಾತ್ರೆಗೆ ಹಾಕಿ. ನಂತರ ತರಕಾರಿಗಳು ಬೇಯಲು 1-2 ನಿಮಿಷಗಳ ಕಾಲ ಮುಚ್ಚಿಡಿ.
3) ಬೇಕಾದಷ್ಟು ನೀರು, ಕರಿಮೆಣಸು, ಚಿಲ್ಲಿ ಸಾಸ್ ಮತ್ತು ಉಪ್ಪು ಹಾಕಿ ಸೂಪನ್ನು ಚೆನ್ನಾಗಿ ಕುದಿಸಿ. ತರಕಾರಿ ಸೂಪ್‌ನ ಪರಿಮಳವನ್ನು ಹೆಚ್ಚಿಸಲು ನಿಂಬೆ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಬಹುದು.
ಚಳಿ ತಗುಲಿದಾಗ ಬಿಸಿ ಸೂಪ್ ಕುಡಿದರೆ ಒಳಗಿನಿಂದ ದೇಹಕ್ಕೆ ಬೆಚ್ಚಗಿನ ಅನುಭವವಾಗುತ್ತದೆ. ಇದರಿಂದ ಜೊತೆಗೆ ರಕ್ತದೊತ್ತಡ ಸಹ ಸ್ವಲ್ಪ ಸುಧಾರಿಸುತ್ತದೆ.
ತರಕಾರಿ ಸೂಪ್, ಚಿಕನ್ ಸೂಪ್, ಮೂಳೆ ಸೂಪ್ (bone broth) ಇತ್ಯಾದಿಗಳಲ್ಲಿ ವಿಟಮಿನ್, ಮಿನರಲ್ಸ್, ಪ್ರೋಟೀನ್ ಹೇರಳವಾಗಿರುತ್ತವೆ. ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ಸಾಮಾನ್ಯ, ಆಗ ಇಂಥ ಪೌಷ್ಟಿಕ ಸೂಪ್‌ಗಳು ತುಂಬಾ ಸಹಾಯಕ.
ಬಿಸಿ ಸೂಪ್ ಕುಡಿದರೆ ಹೊಟ್ಟೆ ತುಂಬಿದ ಫೀಲಿಂಗ್ ಬರುತ್ತದೆ, ಆದರೆ ಕ್ಯಾಲರಿ ಕಡಿಮೆ. ಚಳಿಗಾಲದಲ್ಲಿ ತೂಕ ಜಾಸ್ತಿಯಾಗದಂತೆ ಎಚ್ಚರ ವಹಿಸುವವರಿಗೆ ಇದು ಸೂಪರ್ ಆಯ್ಕೆ.