- ವಿಕೇಂಡ್ ಬಂದರೆ ಸಾಕು ಬಾರ್ ಮತ್ತು ಕ್ಲಬ್ಗಳಲ್ಲಿ ಕಾಲಿಡಲು ಸಾಧ್ಯವಾಗದಂತೆ ಜನ ಸೇರಿರುತ್ತಾರೆ
- ಈಡೀ ವಾರ ದುಡಿದು ಸುಸ್ತಾದವರು ಒಂದು ದಿನದ ಮಟ್ಟಿಗಾದರೂ ಮನಸ್ಸಿಗೆ ಶಾಂತಿ ದೊರೆಯಲೆಂದು ಪಾನ ಮತ್ತರಾಗುತ್ತಾರೆ.
- ರಾತ್ರಿ ಕಂಠಪೂರ್ತಿ ಕುಡಿದರೆ ಮಾರನೇ ದಿನ ಉಂಟಾಗುವ ಹ್ಯಾಂಗೋವರ್
Alcohol Hangover : ವಿಕೇಂಡ್ ಬಂದರೆ ಸಾಕು ಬಾರ್ ಮತ್ತು ಕ್ಲಬ್ಗಳಲ್ಲಿ ಕಾಲಿಡಲು ಸಾಧ್ಯವಾಗದಂತೆ ಜನ ಸೇರಿರುತ್ತಾರೆ. ಈಡೀ ವಾರ ದುಡಿದು ಸುಸ್ತಾದವರು ಒಂದು ದಿನದ ಮಟ್ಟಿಗಾದರೂ ಮನಸ್ಸಿಗೆ ಶಾಂತಿ ದೊರೆಯಲೆಂದು ಪಾನ ಮತ್ತರಾಗುತ್ತಾರೆ. ಆದರೆ ಈ ಸಂತೋಷ ಬಹಳ ಹೊತ್ತು ಇರಲ್ಲ, ಏಕೆಂದರೆ ರಾತ್ರಿ ಕಂಠಪೂರ್ತಿ ಕುಡಿದರೆ ಮಾರನೇ ದಿನ ಉಂಟಾಗುವ ಹ್ಯಾಂಗೋವರ್ (Hangover) ನಿಂದ ಒಂದಿಡಿ ದಿನ ಇದರಿಂದ ಸುಧಾರಿಸಿಕೊಳ್ಳುವಲ್ಲೇ ಕಳೆದು ಹೋಗುತ್ತದೆ. ಹಾಗಾದರೆ ಈ ಹ್ಯಾಂಗೋವರ್ನಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲವೇ ಎಂದು ಕೇಳಿದರೆ ಖಂಡಿತವಾಗಿ ಪರಿಹಾರ ಇದ್ದೇ ಇದೆ. ಈ ಕೆಳಗೆ ಸೂಚಿಸಿದ ವಿಧಾನವನ್ನು ನೀವು ಪಾಲಿಸಿದರೆ ನಿಮಗೆ ಇನ್ನು ಮುಂದೆ ಖಂಡಿತವಾಗಿ ಹ್ಯಾಂಗೋವರ್ ಆಗುವುದಿಲ್ಲ.
1. ಕಡಿಮೆ ಮದ್ಯವನ್ನು ಸೇವಿಸಿ
ಹೇಗೂ ನೀವು ಕುಡಿಯುತ್ತಿರುವುದು ಸಂತೋಷದ ಸಲುವಾಗಿ, ಈ ಸಂತೋಷವನ್ನೇಕೆ ನೀವು ನಿಮ್ಮ ಕೈಯಾರೆ ಹಾಳು ಮಾಡಿಕೊಳ್ಳುತ್ತಿರಿ. ಆದ್ದರಿಂದ ಮದ್ಯವನ್ನು ಕಡಿಮೆ ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಸಹ ಹದಗೆಡುವುದಿಲ್ಲ ಹಾಗೆಯೇ ನಿಮ್ಮ ಪಾರ್ಟಿ ಸಹ ಪೂರ್ಣಗೊಳ್ಳತ್ತದೆ. ಅಧಿಕ ಮದ್ಯದ ಸೇವನೆಯೆ ಹ್ಯಾಂಗೋವರ್ಗೆ ಪ್ರಾಥಮಿಕ ಕಾರಣವಾಗಿರುತ್ತದೆ.
2. ಕಡಿಮೆ ಆಹಾರ ಸೇವಿಸಿ
ಎಷ್ಟು ಮದ್ಯವನ್ನು ಸೇವಿಸುತ್ತೇವೋ ಅದರ ಅರ್ಧವಷ್ಟನ್ನೇ ಊಟ ಮಾಡಬೇಕು. ಆದರೆ ನಮ್ಮ ಮದ್ಯಪ್ರೀಯರು ಖಾಧ್ಯಪ್ರೀಯರು ಸಹ ಆಗಿರುವ ಕಾರಣ ಕುಡಿದ ಎರಡು ಪಟ್ಟು ಗಡದ್ದಾಗಿ ಊಟ ಮಾಡಿದ ಪರಿಣಾಮವಾಗೆ ಮಾರನೇ ದಿನ ಹಾಸಿಗೆಯಿಂದ ಎದ್ದೇಳದ ಪರಿಸ್ಥಿತಿ ತಲುಪುವುದು. ಆದ್ದರಿಂದ ಮದ್ಯವನ್ನು ಸೇವಿಸುವ ದಿನ ಕಡಿಮೆ ಊಟವನ್ನು ತೆಗೆದು ಕೊಳ್ಳುವುದು ಉತ್ತಮ.
3. ಆರೋಗ್ಯಕರ ಸೈಡ್ಸ್ಗಳನ್ನು ಸೇವಿಸಿ
ಪಾರ್ಟಿಯಲ್ಲಿ ಮಧ್ಯಕ್ಕಿಂತ ಉನ್ನತ ಸ್ಥಾನವನ್ನು ಈ ಸೈಡ್ಸ್ಗಳು ಪಡೆದಿವೆ. ಕುಡಿಯಲು ಒಪ್ಪದ ಸ್ನೇಹಿತರು ಈ ಸೈಡ್ಸ್ಗಳನ್ನು ತಿನ್ನಲೆಂದೇ ಬಂದಿರುತ್ತಾರೆ. ಆದರೆ ಹ್ಯಾಂಗೋವರ್ನ್ನು ತಡೆಯುವಲ್ಲಿ ಮದ್ಯದಷ್ಟೇ ಪಾತ್ರ ಸೈಡ್ಸ್ದದ್ದು ಇರುತ್ತದೆ. ಹುರಿದ ಶೇಂಗಾ, ಚಿಕನ್ ಕಬಾಬ್, ತಂದೂರಿ ಇವುಗಳ ಬದಲು ಸಲಾಡ್, ಹಣ್ಣು ಮತ್ತು ಒಣ ಹಣ್ಣುಗಳನ್ನು ಸೇವಿಸಿ.
4. ಹರ್ಬಲ್ ಟೀಗಳನ್ನು ಕುಡಿಯಿರಿ
ಹಿಂದಿನ ದಿನ ಕುತ್ತಿಗೆವರೆಗೆ ಕುಡಿದು ಮಾರನೇ ದಿನ ಹ್ಯಾಂಗೋವರ್ನ್ನು ತಕ್ಷಣವೇ ಕಡಿಮೆ ಮಾಡಿಕೊಳ್ಳಲು ಶುಂಠಿ ಟೀ ಮತ್ತು ಗ್ರೀನ್ ಟೀ ಗಳನ್ನು ಕುಡಿಯಿರಿ. ಹಾಗೆಯೇ ಮಜ್ಜಿಗೆ ಸೇವನೆ ಸಹ ನಿಮಗೆ ಹ್ಯಾಂಗೋವರ್ನಿಂದ ಮುಕ್ತಿಯನ್ನು ನೀಡುತ್ತದೆ.
5. ನೋವು ನಿವಾರಕ( ಪೇನ್ ಕಿಲ್ಲರ್) ವನ್ನು ಸೇವಿಸಿ
ಕುಡಿತದ ಮಾರನೇಯ ದಿನ ಏನು ಮಾಡಿದರೂ ಹ್ಯಾಂಗೋವರ್ ಇಳಿಯುತ್ತಿಲ್ಲ ಎಂದರೆ ಐಬುಪ್ರೊಫೆನ್ (Ibuprofen) ಅಥವಾ ಪ್ಯಾರಾಸಿಟಾಮೋಲ್ (Paracetamol) ನಂತಹ ನೋವು ನಿವಾರಕ( ಪೇನ್ ಕಿಲ್ಲರ್) ವನ್ನು ಸೇವಿಸಿ. ಆದರೆ ಈ ನೋವು ನಿವಾರಕಗಳ ನಿರಂತರ ಸೇವನೆಯಿಂದ ಕಿಡ್ನಿ ವೈಫಲ್ಯ ಸಂಭವಿಸಬಹುದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ.