ಸಾಂದರ್ಭಿಕ ಚಿತ್ರ 
ಆಹಾರ

ಪ್ರತಿನಿತ್ಯ ಎಷ್ಟು ಗೋಡಂಬಿ ತಿನ್ನಬೇಕು? ಈ ಬಗ್ಗೆ ವೈದ್ಯರು ಹೇಳೋದೇನು! ಇಲ್ಲಿದೆ ಸಂಪೂರ್ಣ ಮಾಹಿತಿ Cashews Nuts

ಪ್ರಮುಖ ಮುಖ್ಯಾಂಶಗಳು

  • ಗೋಡಂಬಿ ಬೀಜಗಳು ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ.
  • ತಿನ್ನಲು ರುಚಿಕರವಾಗಿರುವುದರ ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತವೆ
  • ಒಣ ಹಣ್ಣುಗಳಲ್ಲಿ ಗೋಡಂಬಿ ಮತ್ತು ಒಣದ್ರಾಕ್ಷಿಗಳ ರುಚಿ ಎಲ್ಲರಿಗೂ ಇಷ್ಟವಾಗುತ್ತದೆ
  • ಅನೇಕ ಜನರು ಗೋಡಂಬಿಯನ್ನು ಹುರಿದು ಅದಕ್ಕೆ ಮಸಾಲೆ ಸೇರಿಸಿ ತಿನ್ನುತ್ತಾರೆ
Cashews Nuts: ಚಳಿಗಾಲ ಪ್ರಾರಂಭವಾಗಿದೆ. ಈ ಸಮಯದಲ್ಲಿ ಅತಿ ಹೆಚ್ಚು ಜನರು ಹುರಿದ ಧಾನ್ಯಗಳನ್ನು ತಿನ್ನಲು ಪ್ರಾರಂಭಿಸುತ್ತಾರೆ. ಅಂದಹಾಗೇ, ಗೋಡಂಬಿ ಬೀಜಗಳು ದೇಹವನ್ನು ಬೆಚ್ಚಗಿಡಲು ಹಾಗೂ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇವು ತಿನ್ನಲು ರುಚಿಕರವಾಗಿರುವುದರ ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತವೆ.
ಒಣ ಹಣ್ಣುಗಳಲ್ಲಿ ಗೋಡಂಬಿ ಮತ್ತು ಒಣದ್ರಾಕ್ಷಿಗಳ ರುಚಿ ಎಲ್ಲರಿಗೂ ಇಷ್ಟವಾಗುತ್ತದೆ. ಗೋಡಂಬಿ ಬೀಜಗಳನ್ನು ಆಹಾರ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಇದನ್ನು ಸರಳವಾಗಿಯೂ ಸೇವಿಸಬಹುದು.
ಅನೇಕ ಜನರು ಗೋಡಂಬಿಯನ್ನು ಹುರಿದು ಅದಕ್ಕೆ ಮಸಾಲೆ ಸೇರಿಸಿ ತಿನ್ನುತ್ತಾರೆ. ಆದರೆ ಗೋಡಂಬಿ ತಿನ್ನುವ ಮೊದಲು, ದಿನಕ್ಕೆ ಎಷ್ಟು ಗೋಡಂಬಿ ತಿನ್ನಬೇಕು ಮತ್ತು ಗೋಡಂಬಿ ತಿನ್ನುವುದರಿಂದ ಏನು ಪ್ರಯೋಜನ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. 
ಒಮ್ಮೆ ನೀವು ಗೋಡಂಬಿಗಳನ್ನು ತಿನ್ನಲು ಬಯಸಿದರೆ, ಹೊಟ್ಟೆ ತುಂಬಿದ ಭಾವನೆ ಬರುವುದಿಲ್ಲ. ಹಾಗಾಗಿ ಪ್ರತಿದಿನ ಎಷ್ಟು ಗೋಡಂಬಿ ತಿನ್ನಬೇಕು ಎಂದು ಮೊದಲು ತಿಳಿದುಕೊಳ್ಳಿ. 
ಆರೋಗ್ಯ ತಜ್ಞರು ಸೂಚಿಸುವಂತೆ ವಯಸ್ಕರು ಪ್ರತಿದಿನ ನಾಲ್ಕರಿಂದ ಐದು ಗೋಡಂಬಿಗಳನ್ನು ಮಾತ್ರ ತಿನ್ನಬೇಕು. ಹಾಗೆಯೇ ಚಿಕ್ಕ ಮಕ್ಕಳು  ದಿನಕ್ಕೆ ಎರಡು ಗೋಡಂಬಿ ಸೇವಿಸಬೇಕು. ನೀವು ಈ ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನಗಳು ಸಿಗುತ್ತವೆ. ಇವು ನಿಮ್ಮ ಹಸಿವನ್ನು ನಿಯಂತ್ರಿಸಲ್ಪಡುತ್ತದೆ. ಗೋಡಂಬಿಯನ್ನು ಪ್ರತಿದಿನ ಹಾಗೇ ತಿನ್ನಬಹುದು. ಇಲ್ಲವೇ, ಅವುಗಳನ್ನು ಸ್ವಲ್ಪ ಹುರಿದು ಉಪ್ಪು ಸೇರಿಸಿ ಕೂಡ ಸವಿಯಬಹುದು.
ಪ್ರತಿನಿತ್ಯ ಚಿಕ್ಕ ಮಕ್ಕಳಿಗೆ ಗೋಡಂಬಿ ನೀಡಲು ಬಯಸಿದರೆ, ಜೇನುತುಪ್ಪ ಸೇರಿಸಿ ನೀಡಬಹುದು. ಗೋಡಂಬಿ ಮತ್ತು ಜೇನುತುಪ್ಪ ತಿನ್ನುವುದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ. ದೇಹಕ್ಕೆ ಆರೋಗ್ಯಕರ ಕೊಬ್ಬು ಸಿಗುವಂತೆ ಮಾಡಿ, ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.

ಪ್ರತಿದಿನ ಹೆಚ್ಚು ಗೋಡಂಬಿ ತಿನ್ನುವುದರಿಂದ ಆಗುವ ಅನಾನುಕೂಲಗಳೇನು?

1.ತೂಕ ಹೆಚ್ಚಾಗುವುದು: ಗೋಡಂಬಿಯಲ್ಲಿ ಕ್ಯಾಲೋರಿ ತುಂಬಾ ಹೆಚ್ಚಾಗಿರುತ್ತದೆ. ಇದನ್ನು ಅತಿಯಾಗಿ ತಿನ್ನುವುದರಿಂದ ಕ್ಯಾಲೋರಿ ಒಳಗಿನ ಪ್ರಮಾಣ ಹೆಚ್ಚಿ ತೂಕ ಜಾಸ್ತಿಯಾಗುತ್ತದೆ.
2.ಜೀರ್ಣಕ್ರಿಯೆಯ ಸಮಸ್ಯೆಗಳು: ಗೋಡಂಬಿಯಲ್ಲಿ  ಹೆಚ್ಚಾಗಿ ಫೈಬರ್ ಮತ್ತು ಫ್ಯಾಟ್ ಇರುವುದರಿಂದ ಅತಿಯಾಗಿ ತಿಂದರೆ ಹೊಟ್ಟೆ ಉಬ್ಬರ, ಅಜೀರ್ಣ, ಮಲಬದ್ಧತೆ ಅಥವಾ ಭೇದಿ ಆಗಬಹುದು.
3.ಅಲರ್ಜಿ ಮತ್ತು ಚರ್ಮ ಸಮಸ್ಯೆಗಳು: ಕೆಲವರಿಗೆ ಗೋಡಂಬಿಯ ಅಲರ್ಜಿ ಇರುತ್ತದೆ. ಅತಿಯಾಗಿ ತಿನ್ನುವುದರಿಂದ ಇದು ಚರ್ಮದಲ್ಲಿ ದದ್ದು, ಕೆರೆತ, ಉಬ್ಬು ಅಥವಾ ತೀವ್ರ ಅಲರ್ಜಿ ಉಂಟಾಗಬಹುದು.
4.ರಕ್ತದಲ್ಲಿ ಟ್ರೈಗ್ಲಿಸರೈಡ್ ಹೆಚ್ಚಾಗುವುದು: ಗೋಡಂಬಿಯಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಿರುವುದರಿಂದ ಅತಿಯಾಗಿ ತಿನ್ನುವುದು ರಕ್ತದಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಹೆಚ್ಚಿಸಿ ಹೃದಯಕ್ಕೆ ಅಪಾಯ ಉಂಟುಮಾಡಬಹುದು.
5.ತಲೆನೋವು ಮತ್ತು ಮೈಗ್ರೇನ್: ಗೋಡಂಬಿಯಲ್ಲಿ ಟೈರಮೈನ್ ಎಂಬ ಅಮೈನೋ ಆಮ್ಲ ಇರುತ್ತದೆ. ಇದು ಕೆಲವರಿಗೆ ಮೈಗ್ರೇನ್ ಹೆಚ್ಚಾಗಿಸುತ್ತದೆ.  ಹೆಚ್ಚು ತಿಂದರೆ ತಲೆನೋವು ಜಾಸ್ತಿಯಾಗುವ ಸಾಧ್ಯತೆ ಇದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.