- ಬೆಳಗಿನ ಚಹಾದಿಂದ ಪ್ರಾರಂಭವಾಗಿ ಮಕ್ಕಳ ಉಪಹಾರದವರೆಗೂ ಹಾಲು ಇಲ್ಲದೇ ಅಡುಗೆ ಮನೆ ಅಪೂರ್ಣ
- ಇತ್ತೀಚಿನ ದಿನಗಳಲ್ಲಿ ಅನೇಕರು ಪ್ಯಾಕೆಟ್ ಹಾಲುಗಳನ್ನು ಬಳಸುತ್ತಾರೆ
- ಜನರು ಹಾಲು ಬೇಗನೆ ಹಾಳಾಗಬಾರದು ಎಂದು ಕುದಿಸಿ ಅದನ್ನು ಫ್ರಿಜ್ನಲಿಡುತ್ತಾರೆ
- ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಲಾದ ಹಾಲು ಎಷ್ಟು ಕಾಲದವರೆಗೆ ತಾಜಾವಾಗಿರುತ್ತದೆ?
Refrigerated milk: ಬೆಳಗಿನ ಚಹಾದಿಂದ ಪ್ರಾರಂಭವಾಗಿ ಮಕ್ಕಳ ಉಪಹಾರದವರೆಗೂ ಹಾಲು ಇಲ್ಲದೇ ಅಡುಗೆ ಮನೆ ಅಪೂರ್ಣವೆಂಬುದು ಎಲ್ಲರಿಗೂ ತಿಳಿದಿರುವಂತಹ ಮಾಹಿತಿ. ಇತ್ತೀಚಿನ ದಿನಗಳಲ್ಲಿ ಅನೇಕರು ಪ್ಯಾಕೆಟ್ ಹಾಲುಗಳನ್ನು ಬಳಸುತ್ತಾರೆ. ಆದಾಗ್ಯೂ, ಜನರು ಹಾಲು ಬೇಗನೆ ಹಾಳಾಗಬಾರದು ಎಂದು ಕುದಿಸಿ ಅದನ್ನು ಫ್ರಿಜ್ನಲಿಡುತ್ತಾರೆ. ಈ ಅಭ್ಯಾಸ ಎಲ್ಲಾ ಮನೆಯವರಲ್ಲಿಯೂ ನಡೆಯುವಂತ ಪ್ರಕ್ರಿಯೆ. ನಿಮಗಿದು ಗೊತ್ತಾ? ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಲಾದ ಹಾಲು ಎಷ್ಟು ಕಾಲದವರೆಗೆ ತಾಜಾವಾಗಿರುತ್ತದೆ? ಅದು ಯಾವಾಗ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ? ಎಂದು ಅನೇಕ ಜನರಿಗೆ ಮಾಹಿತಿ ತಿಳಿದಿರುವುದಿಲ್ಲ. ಹಾಗಾಗಿ ನಾವಿಂದು ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಿಚ್ಚಿಡಲಿದ್ದೇವೆ.
ಹಾಲು ರೆಫ್ರಿಜರೇಟರ್‌ನಲ್ಲಿ ಎಷ್ಟು ಕಾಲ ಉಳಿಯುತ್ತದೆ?
ಪ್ರತಿಯೊಬ್ಬರೂ ಕೂಡ ಹಾಲನ್ನು ಕುದಿಸಿ ಫ್ರಿಜ್ನಲ್ಲಿಟ್ಟರೆ, ಅದು 2-3 ದಿನಗಳ ವರೆಗೆ ಚೆನ್ನಾಗಿ ಇರುತ್ತದೆ. ಇದು ಫ್ರಿಜ್ನ ತೇವಾಂಶವನ್ನು ಅವಲಂಬಿಸಿರುತ್ತದೆ. ಹಾಲನ್ನು ಶೇಖರಿಸಿಟ್ಟಾಗ ಅದು ದೀರ್ಘಕಾಲ ಉಳಿಯಬೇಕೆಂದರೆ, ಫ್ರಿಜ್ ತಾಪಮಾನವನ್ನು 4 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ಇರಿಸಿ ಇದು ಹಾಲು ಬೇಗನೆ ಹಾಳಾಗಾದಂತೆ ತಡೆಯುತ್ತದೆ. ಆದಾಗ್ಯೂ, ಹಾಲನ್ನು ಕುದಿಸದೆ ಹಾಗೆಯೇ ಫ್ರಿಜ್ನಲ್ಲಿಟ್ಟರೆ ಇದು ಬೇಗನೆ ಹಾಳಾಗುತ್ತದೆ.
ಪ್ಯಾಕ್ ಮಾಡಿದ ಹಾಲು ಹೆಚ್ಚು ಕಾಲ ಬಾಳಿಕೆ ಬರುತ್ತದೆಯೇ?
ಈ ರೀತಿಯ ಪ್ರಶ್ನೆ ಅನೇಕ ಜನರಲ್ಲಿ ಕಾಡುವುದು ಸಹಜ. ಅಂದಹಾಗೇ, ಹೆಚ್ಚಿನ ಮನೆಗಳಲ್ಲಿ ಟೋನ್ಡ್ ಅಥವಾ ಪೂರ್ಣ ಕ್ರೀಮ್ ಪ್ಯಾಕ್ ಮಾಡಿದ ಹಾಲನ್ನು ಬಳಸುತ್ತಾರೆ. ಈ ಹಾಲನ್ನು ಈಗಾಗಲೇ ಸಂಸ್ಕರಿಸಲಾಗಿರುತ್ತದೆ. ಕೆಲವೊಂದು ಟೆಟ್ರಾ-ಪ್ಯಾಕ್ಡ್ ಹಾಲುಗಳನ್ನು ರೆಫ್ರಿಜರ್ನಲ್ಲಿಟ್ಟು ಸಂಗ್ರಹಿಸಿದ್ದರು, ಕೂಡಲೇ ಸೇವಿಸಬೇಕು. ಇಲ್ಲದಿದ್ದರೆ, ಹಾಳಾಗುವುದು ಹೆಚ್ಚಾಗುತ್ತದೆ.
ಕುದಿಸದ ಹಾಲು ಕುಡಿಯುವುದು ಸುರಕ್ಷಿತವೇ?
ಪ್ಯಾಕ್ ಮಾಡಿದ ಹಾಲನ್ನು ಸಂಪೂರ್ಣವಾಗಿ ಬಿಸಿ ಮಾಡುವುದನ್ನು ಪಾಶ್ಚರೀಕರಿಸಿದ ಹಾಲು ಎಂದು ಕರೆಯಲಾಗುತ್ತದೆ. ಇಂತಹ ಹಾಲನ್ನು ಕುಡಿಯಲು ತುಂಬಾ ಸುರಕ್ಷಿತವಾಗಿರುತ್ತದೆ. ಪದೇ ಪದೇ ಹಾಲನ್ನು ಕುದಿಸಿ ಕುಡಿಯುವುದರಿಂದ ಇದು ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಪಾಲಿಪ್ಯಾಕ್ ಮಾಡಿದ ಹಾಲನ್ನು ಕುದಿಸುವ ಅಗತ್ಯ ಇಲ್ಲ. ಬದಲಿಗೆ ಸ್ವಲ್ಪ ಬಿಸಿ ಮಾಡಿ ಸೇವಿಸಿರಿ.
ರೆಫ್ರಿಜರೇಟರ್‌ನಲ್ಲಿ ಇಟ್ಟ ಹಾಲು ಹಾಳಾಗಿದೆಯೇ ಎಂದು ತಿಳಿಯುವುದು ಹೇಗೆ?
1. ಹಾಲು ಹುಳಿ ಅಥವಾ ವಿಚಿತ್ರವಾದ ವಾಸನೆ ಬರಲು ಪ್ರಾರಂಭಿಸಿದರೆ, ಇದು ಹಾಳಾಗಿದೆ ಎಂದು ತಿಳಿಯಿರಿ
2. ಹಾಲು ಕುಡಿದಾಗ ಸ್ವಲ್ಪ ಹುಳಿ ರುಚಿ ಬಂದರೂ, ಅದು ಹಾಳಾಗಿದೆ ಎಂಬುದರ ಸಂಕೇತ
3. ಕೆಲವೊಮ್ಮೆ ಹಾಳಾದ ಹಾಲಿನ ಮೇಲ್ಭಾಗದಲ್ಲಿ ತೆಳುವಾದ ಪದರ ಅಥವಾ ಹರಳಿನ ರಚನೆ ಕಾಣಿಸಿಕೊಳ್ಳುತ್ತದೆ
4. ಹಾಲನ್ನು ಕುದಿಸಿದ ನಂತರ ಅದರಲ್ಲಿ ಸಣ್ಣ ಉಂಡೆಗಳಂತೆ ಕಂಡುಬಂದರೆ, ಅದು ಕೂಡಾ ಹಾಳಾಗಿದೆ ಎಂದು ತಿಳಿಸುತ್ತದೆ
5. ಹಾಲು ಕೆಟ್ಟ ವಾಸನೆ ಬರುತ್ತಿದ್ದರೆ, ಅದನ್ನು ಮರುಬಳಕೆ ಮಾಡುವ ತಪ್ಪನ್ನು ಮಾಡಬೇಡಿ
ಹಾಲು ದೀರ್ಘಕಾಲದವರೆಗೆ ಸುರಕ್ಷಿತವಾಗಿಡುವುದು ಹೇಗೆ?
ಹಾಲನ್ನು ಕುದಿಸಿ ತಣ್ಣಗಾದ ನಂತರವೇ ಯಾವಾಗಲೂ ಬಳಸಿರಿ. ಹಾಲನ್ನು ಸ್ಟೀಲ್ ಪಾತ್ರೆಯಲ್ಲಿ ಸಂಗ್ರಹಿಸಿ. ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ತುಂಬಿಸುವುದನ್ನು ನಿಲ್ಲಿಸಿರಿ. ಏಕೆಂದರೆ, ಈ ರೀತಿಯ ಅಭ್ಯಾಸವು ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.