Flour stored in Fridge: ಅಡುಗೆಮನೆಯಲ್ಲಿ ಫ್ರಿಡ್ಜ್ ಒಂದು ಅನಿವಾರ್ಯ ವಸ್ತು. ಇದನ್ನು ಅಡುಗೆ ಆಹಾರಗಳನ್ನು ಕೆಡದಂತೆ ಸಂಗ್ರಹಿಸಿಡಲು ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕರು ಚಪಾತಿ ಹಿಟ್ಟು, ಹೋಳಿಗೆ ಹಿಟ್ಟನ್ನು ಫ್ರಿಜ್ನಲ್ಲಿಡಲು ಬಳಸುತ್ತಾರೆ. ಈ ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್ ನಲ್ಲಿ ಎಷ್ಟು ದಿನ ಸಂಗ್ರಹಿಸಬಹುದು ಮತ್ತು ಅದನ್ನು ಹೇಗೆ ಸಂಗ್ರಹಿಸಬೇಕು ಎಂದು ನೋಡೋಣ ಬನ್ನಿ...
ಹಿಟ್ಟು ರೆಫ್ರಿಜರೇಟರ್‌ನಲ್ಲಿ ಎಷ್ಟು ಕಾಲ ಸುರಕ್ಷಿತವಾಗಿ ಉಳಿಯುತ್ತದೆ?
ಫ್ರಿಜ್‌ನಲ್ಲಿ ವಸ್ತುಗಳನ್ನು ಇಡುವುದರಿಂದ ಅದನ್ನು ಕೆಡದಂತೆ ಸಂಗ್ರಹಿಸಬಹುದು. ಬಹುತೇಕ ಜನರು ಚಪಾತಿ ಹಿಟ್ಟನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುತ್ತಾರೆ. ಇದನ್ನು ಹೇಗೆ ಸಂಗ್ರಹಿಸಬೇಕು ಎಂದು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಹಿಟ್ಟನ್ನು ಕಲಸಿದ ನಂತರ 24 ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬೇಕು.
ಅಂದರೆ, ರಾತ್ರಿಯಿಡೀ ಸಂಗ್ರಹಿಸಿದ ಹಿಟ್ಟನ್ನು ಮರುದಿನ ರಾತ್ರಿಯೊಳಗೆ ಬಳಸಬೇಕು. ನಂತರ ಈ ಹಿಟ್ಟನ್ನು ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಫ್ರಿಜ್ನಿಂದ ಹಿಟ್ಟನ್ನು ಹೊರತೆಗೆದ ನಂತರ ಅದನ್ನು 10 ರಿಂದ 15 ನಿಮಿಷಗಳ ಕಾಲ ಹೊರಗೆ ಇರಿಸಿ. ನಂತರ ಚಪಾತಿಗಳನ್ನು ಮಾಡುವುದು ಉತ್ತಮವಾಗಿದೆ.
ಬೆರೆಸಿದ ಹಿಟ್ಟನ್ನು ಫ್ರಿಜ್‌ನಲ್ಲಿ ಹೇಗೆ ಸಂಗ್ರಹಿಸುವುದು?
*ಹಿಟ್ಟನ್ನು ರೆಫ್ರಿಜರೇಟರ್‌ನಲ್ಲಿ ಇಡುವ ಮೊದಲು, ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿಡಬೇಕು.
*ಹಿಟ್ಟಿನ ತೇವಾಂಶವನ್ನು ಕಾಪಾಡಿಕೊಳ್ಳುವುದು ಮುಖ್ಯ, ಇಲ್ಲದಿದ್ದರೆ ಅದು ಸಂಪೂರ್ಣವಾಗಿ ಒಣಗುತ್ತದೆ.
*ಒಂದು ವೇಳೆ ನಿಮ್ಮ ಬಳಿ ಗಾಳಿಯಾಡದ ಪಾತ್ರೆ ಇಲ್ಲದಿದ್ದರೆ, ಸಂಪೂರ್ಣವಾಗಿ ಮುಚ್ಚಬಹುದಾದ ಪಾತ್ರೆಯನ್ನು ಬಳಸುವುದು ಉತ್ತಮ.
*ಹಿಟ್ಟಿಗೆ ಸ್ವಲ್ಪ ಎಣ್ಣೆ ಹಾಕಿ ಕಲಸುವುದು ಉತ್ತಮ. ಇದು ಹಿಟ್ಟನ್ನು ಮೃದುವಾಗಿಡಲು ಸಹಾಯ ಮಾಡುತ್ತದೆ.
ಹಿಟ್ಟು ಯಾವಾಗ ವಿಷವಾಗುತ್ತದೆ?
ಎರಡು ಅಥವಾ ಮೂರು ದಿನಗಳ ನಂತರ ಹಿಟ್ಟನ್ನು ಬಳಸುವುದರಿಂದ ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಿದೆ. ಕಲಸಿಟ್ಟ ಹಿಟ್ಟು ಹುಳಿಯಾಗಬಹುದು ಇಲ್ಲವೇ, ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಹೊಂದಬಹುದು. ಆದರಿಂದ ತಯಾರಿಸಿದ ಚಪಾತಿ ಸೇವಿಸುವುದರಿಂದ ಆರೋಗ್ಯ ಸಮಸ್ಯೆ ಉಂಟಾಗಿ, ವಾಂತಿ, ವಾಕರಿಕೆ ಭೇದಿಯಂತಹ ಸಮಸ್ಯೆಯನ್ನು ಅನುಭವಿಸಬಹುದು (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.