Garlic egg rice: ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೇ ಬಿಸಿ ಬಿಸಿ ಆಹಾರವನ್ನು ಸೇವಿಸಬೇಕೆಂಬ ಹಂಬಲ ಎಲ್ಲರಲ್ಲಿಯೂ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಬೆಳ್ಳುಳ್ಳಿ ಎಗ್ ಫ್ರೈಡ್ ರೈಸ್ ಸವಿಯುವುದು ಬಹಳ ರುಚಿಕರವಾಗಿರುತ್ತದೆ. ಹಾಗಾಗಿ ನೀವೇನಾದರೂ ಫ್ರೈಡ್ ರೈಸ್ ತಿನ್ನಬೇಕೆಂಬ ಹಂಬಲ ನಿಮ್ಮಲ್ಲಿದ್ದರೆ, ಇಂದೇ ಬೆಳ್ಳುಳ್ಳಿ ಎಗ್ ಫ್ರೈಡ್ ರೈಸ್ ಮಾಡಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು
* ¾ ಕಪ್ ಸಣ್ಣಗೆ ಹೆಚ್ಚಿದ ಕ್ಯಾರೆಟ್, ಬೀನ್ಸ್, ಕ್ಯಾಬೇಜ್
* 2 ಟೇಬಲ್ ಸ್ಪೂನ್ ಸೋಯಾ ಸಾಸ್
* 3-4 ಟೇಬಲ್ ಸ್ಪೂನ್ ಆಲಿವ್ ಆಯಿಲ್
* ¾ ಟೀಸ್ಪೂನ್ ಬಿಳಿ ಪೆಪ್ಪರ್ ಪೌಡರ್
ಮಾಡುವ ವಿಧಾನ
ಮೊದಲು ಬೆಳ್ಳುಳ್ಳಿ ಸೇರಿದಂತೆ ಎಲ್ಲಾ ತರಕಾರಿಗಳನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ ನಂತರ ಸಣ್ಣಗೆ ಹೆಚ್ಚಿ ಬದಿಗಿಟ್ಟುಕೊಳ್ಳಿ. ನಂತರ ಒಂದು ಬಾಣಲೆಗೆ 1 ಟೇಬಲ್ ಸ್ಪೂನ್ ಎಣ್ಣೆ ಬಿಸಿ ಮಾಡಿ. ಅದಕ್ಕೆ ಮೊಟ್ಟೆಗಳನ್ನು ಹಾಕಿ ಚೆನ್ನಾಗಿ ಬೀಟ್ ಮಾಡಿ. ಅದಕ್ಕೆ ಸ್ವಲ್ಪ ಉಪ್ಪು, ಪೆಪ್ಪರ್ ಪುಡಿ ಸೇರಿಸಿ. ಚೆನ್ನಾಗಿ ಹುರಿದುಕೊಳ್ಳಿ. ನಂತರ ಇನ್ನೊಂದು ಬಾಣಲೆಗೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಅದಕ್ಕೆ ಬೆಳ್ಳುಳ್ಳಿ ಹಾಕಿ ಮಧ್ಯಮ ಒಲೆಯಲ್ಲಿ ಚಿನ್ನದ ಬಣ್ಣ ಬರುವವರೆಗೂ ಹುರಿದುಕೊಳ್ಳಿ.
ನಂತರ ತರಕಾರಿಗಳನ್ನು ಸೇರಿಸಿಕೊಳ್ಳಿ. ಎಲ್ಲಾ ಹಸಿ ವಾಸನೆ ಹೋಗುವವರೆಗೆ 2 ನಿಮಿಷ ಚೆನ್ನಾಗಿ ಹುರಿಯಿರಿ. ನಂತರ ಅನ್ನವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಇದಕ್ಕೆ ಸೋಯಾ ಸಾಸ್, ಬಿಳಿ ಪೆಪ್ಪರ್ ಪೌಡರ್, ಸ್ವಲ್ಪ ಉಪ್ಪು ಹಾಕಿ ಎಲ್ಲಾ ಜೊತೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ತಯಾರಿಸಿಟ್ಟುಕೊಂಡಿರುವ ಮೊಟ್ಟೆಯನ್ನು ಸೇರಿಸಿ ಕಲಸಿರಿ. ನಂತರ ರುಚಿ ರುಚಿಯಾದ ಬೆಳ್ಳುಳ್ಳಿ ಎಗ್ ಫ್ರೈಡ್ ರೈಸ್ ಸವಿಯಿರಿ(ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.