Mexican Rice (ಸಾಂದರ್ಭಿಕ ಚಿತ್ರ) 
ಆಹಾರ

ಖಾರ ಖಾರವಾಗಿ, ಚಟಪಟ ಅಂತಿರೋ ಮೆಕ್ಸಿಕನ್ ರೈಸ್ ರೆಸಿಪಿ ಇಲ್ಲಿದೆ ನೋಡಿ! Mexican Rice

Mexican Rice: ಇತ್ತೀಚಿನ ದಿನಗಳಲ್ಲಿ ಆಹಾರ ಪ್ರಿಯರು ಹೆಚ್ಚಾಗುತ್ತಲೇ ಇರುತ್ತಾರೆ. ಅದಕ್ಕಾಗಿ ಬಗೆ-ಬಗೆಯ ಆಹಾರವನ್ನು ತಿನ್ನಲು ಹಪ ಹಪಿಸುತ್ತಿರುತ್ತಾರೆ. ಆದಾಗ್ಯೂ, ಆಹಾರದ ಮೇಲೆ ಪ್ರೀತಿ ಇರುವವರಿಗಾಗಿ ನಾವಿಂದು ಮೆಕ್ಸಿಕನ್ ರೈಸ್ ಮಾಡುವುದನ್ನು ಹೇಳಿಕೊಡಲಿದ್ದೇವೆ. ಈ ರೈಸ್​ ಒಂದು ರುಚಿಕರವಾದ ಮತ್ತು ಸುಲಭವಾಗಿ ಮಾಡಬಹುದಾದ ಆಹಾರವಾಗಿದ್ದು, ಇದನ್ನು ಕಡಿಮೆ ಪದಾರ್ಥಗಳಿಂದ ತಯಾರಿಸಲಾಗುತ್ತದೆ.

ಬೇಕಾಗುವ ಪದಾರ್ಥಗಳು

* 1 ಕಪ್ ಅಕ್ಕಿ
* 1 ಕಪ್ ಟೊಮೆಟೊ ಪೇಸ್ಟ್
* 1 ಈರುಳ್ಳಿ
* 4-5 ಎಸಳು ಬೆಳ್ಳುಳ್ಳಿ
* 2 ಹಸಿರು ಮೆಣಸಿನಕಾಯಿ
* 1/2 ಕಪ್​ ಮಿಕ್ಸ್​ ತರಕಾರಿಗಳು
* 1 ಚಮಚ ಖಾರದ ಪುಡಿ
* 1/2 ಚಮಚ ಜೀರಿಗೆ ಪುಡಿ
* 1/2 ಚಮಚ ಕಾಳುಮೆಣಸಿನ ಪುಡಿ
* ಎಣ್ಣೆ ಅಥವಾ ಬೆಣ್ಣೆ: 2 ದೊಡ್ಡ ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ
* ನೀರು

ಮಾಡುವ ವಿಧಾನ

ಮೊದಲು ಒಂದು ಕುಕ್ಕರ್​ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ತೊಳೆದು ಒಣಗಿಸಿದ ಅಕ್ಕಿಯನ್ನು ಹಾಕಿ 3-4 ನಿಮಿಷಗಳ ಕಾಲ ಅಕ್ಕಿ ಸ್ವಲ್ಪ ಬಣ್ಣ ಬದಲಾಗುವವರೆಗೂ ಹುರಿದು ಪಕ್ಕಕ್ಕಿಟ್ಟುಕೊಳ್ಳಿ. ಅದೇ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ ಜೀರಿಗೆ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಬಾಡಿಸಿರಿ. ನಂತರ ಹೆಚ್ಚಿದ ತರಕಾರಿಗಳನ್ನು 2 ನಿಮಿಷ ಬೇಯಿಸಿರಿ.
ಈಗ ರುಬ್ಬಿದ ಟೊಮೆಟೊ ಸೇರಿಸಿ ಎಣ್ಣೆ ಬಿಡುವವರೆಗೆ ಬೇಯಿಸಿಕೊಳ್ಳಿ. ಇದಾದ ಬಳಿಕ ಖಾರದ ಪುಡಿ, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ಓರೆಗಾನೊ ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಈಗ ಹುರಿದಿಟ್ಟ ಅಕ್ಕಿಯನ್ನು ಸೇರಿಸಿ ಮಸಾಲೆಯೊಂದಿಗೆ ಚೆನ್ನಾಗಿ ಬೆರೆಸಿ. ನಂತರ 2 ಕಪ್ ನೀರು ಸೇರಿಸಿಕೊಳ್ಳಿ.
ನೀರು ಕುದಿಯಲು ಆರಂಭಿಸಿದಾಗ ಉರಿಯನ್ನು ಕಡಿಮೆ ಮಾಡಿ ಮುಚ್ಚಳ ಮುಚ್ಚಿ 10-12 ನಿಮಿಷ ಬೇಯಿಸಿರಿ. ಅನ್ನ ಬೆಂದ ನಂತರ ತಕ್ಷಣವೇ ತಿರುಗಿಸಬೇಡಿ, 5 ನಿಮಿಷ ಹಾಗೆಯೇ ಬಿಟ್ಟು ಅದಕ್ಕೆ ನಿಂಬೆ ರಸ ಮತ್ತು ಹಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.