Health Benefits ಸಾಂದರ್ಭಿಕ ಚಿತ್ರ
- ಚಳಿಗಾಲವು ಆದಷ್ಟು ಜನರಿಗೆ ಜೀರ್ಣಕಾರಿ ಸಮಸ್ಯೆಗಳು, ಆಲಸ್ಯಕ್ಕೆ ತುತ್ತಾಗುವಂತೆ ಮಾಡುತ್ತದೆ
- ಇದು ಕೆಫೇನ್ ಜಾಗರೂಕತೆಯನ್ನು ಹೆಚ್ಚಿಸಲು ತ್ವರಿತ ಪರಿಹಾರವೆಂದು ತೋರುತ್ತದೆ
- ಶೀತಗಾಳಿಯಲ್ಲಿ ಈ ಪಾನೀಯ ಸೇವಿಸುವುದು ಬೆಚ್ಚಗಿನ ಸಾಂತ್ವಾನ ಹಾಗೂ ಪೋಷಣೆಯನ್ನು ನೀಡುತ್ತದೆ
Health Benefits: ಚಳಿಗಾಲವು ಆದಷ್ಟು ಜನರಿಗೆ ಜೀರ್ಣಕಾರಿ ಸಮಸ್ಯೆಗಳು, ಆಲಸ್ಯ ಮತ್ತು ಕಡಿಮೆ ಶಕ್ತಿ ಮಟ್ಟಕ್ಕೆ ತುತ್ತಾಗುವಂತೆ ಮಾಡುತ್ತದೆ. ಇದು ಕೆಫೇನ್ ಜಾಗರೂಕತೆಯನ್ನು ಹೆಚ್ಚಿಸಲು ತ್ವರಿತ ಪರಿಹಾರವೆಂದು ತೋರುತ್ತದೆಯಾದರೂ, ಭಾರತೀಯ ಅಡುಗೆಮನೆಯು ಸಾಂಪ್ರದಾಯಿಕ ಪದಾರ್ಥಗಳ ಶ್ರೇಣಿಯನ್ನು ನೀಡುತ್ತದೆ.
ಚಳಿಗಾಲದ ತಿಂಗಳುಗಳಲ್ಲಿ ಅನೇಕ ಭಾರತೀಯ ಮನೆಗಳಲ್ಲಿ ವಿಶೇಷವಾಗಿ ಜನಪ್ರಿಯವಾಗಿರುವ ಒಂದು ಸರಳ ಮಿಶ್ರಣವೆಂದರೆ ತುಪ್ಪ-ಹಿಂಗು ನೀರು. ಈ ಪಾನೀಯವನ್ನು ಸೇವಿಸುವುದು ಶೀತಗಾಳಿಯಲ್ಲಿ ಬೆಚ್ಚಗಿನ ಸಾಂತ್ವಾನ ಹಾಗೂ ಪೋಷಣೆಯನ್ನು ನೀಡುತ್ತದೆ. ಹಾಗಾಗಿ ಈ ವಿಶಿಷ್ಟ ಸಂಯೋಜನೆಯನ್ನು ಕುಡಿಯುವುದರಿಂದ ಆಗುವಂತಹ ಪ್ರಯೋಜನಗಳನ್ನು ತಿಳಿಯೋಣ ಬನ್ನಿ..
ತುಪ್ಪ+ಇಂಗು+ ನೀರಿನ ಆರೋಗ್ಯ ಪ್ರಯೋಜನಗಳು
1. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
ಅಡುಗೆ ಬಳಸುವ ಇಂಗನ್ನು ಕಾರ್ಮಿನೇಟಿವ್ ಗುಣಗಳಿಗಾಗಿ ಬಳಸಲ್ಪಡುತ್ತದೆ. ಇದನ್ನು ಆಹಾರದಲ್ಲಿ ಸೇವಿಸುವುದರಿಂದ ಇದು ಹೊಟ್ಟೆ ಉಬ್ಬುವುದು, ಅನಿಲ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಈ ಮಿಶ್ರಣದ ನೀರನ್ನು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆ ಇರುವಂತಹವರಿಗೆ ಜೀರ್ಣವಾಗಲು ಸಹಾಯ ವಾಗುತ್ತದೆ.
ಇಂಗು ಮತ್ತು ತುಪ್ಪವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಅನಿಲ ಮತ್ತು ಉಬ್ಬುವಿಕೆಯನ್ನು ಕಡಿಮೆ ಮಾಡಿ, ಪಿತ್ತರಸದ ಹರಿವಿಗೆ ಸಹಾಯ ಮಾಡುತ್ತದೆ. ತುಪ್ಪವು ಕೊಬ್ಬಿನಲ್ಲಿ ಕರಗುವ ಜೀವಸತ್ವಗಳನ್ನು ಪರಿಣಾಮಕಾರಿಯಾಗಿ ಜೀರ್ಣಿಸಿಕೊಳ್ಳುವ ದೇಹದ ಸಾಮರ್ಥ್ಯವನ್ನು ಬೆಂಬಲಿಸುತ್ತದೆ. ಈ ಎರಡು ಪದಾರ್ಥಗಳು ಸೌಮ್ಯವಾದ ಉರಿಯೂತ ನಿವಾರಕ ಪ್ರಯೋಜನಗಳನ್ನು ನೀಡುತ್ತದೆ. ಯಾವುದೇ ವ್ಯಕ್ತಿ ದೀರ್ಘಕಾಲದ ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ಮಿಶ್ರಣವನ್ನು ಸೇವಿಸುವುದು ಬಹಳ ಪ್ರಯೋಜನಕಾರಿ.
2. ನಿಮ್ಮನ್ನು ಬೆಚ್ಚಗಿಡುತ್ತದೆ
ತುಪ್ಪವು ಪಾನೀಯಕ್ಕೆ ಸಮೃದ್ಧವಾಗಿದೆ. ಇದು ಬೆಚ್ಚಗಾಗುವ ಗುಣವನ್ನು ಸೇರಿಸುತ್ತದೆ. ಇದರಿಂದ ಈ ಮಿಶ್ರಣವನ್ನು ಚಳಿಗಾಲದಲ್ಲಿ ಸೇವಿಸುವುದರಿಂದ ಇದು ಆರಾಮದಾಯಕ ಆಯ್ಕೆಯಾಗಿದೆ.
3. ಪೌಷ್ಟಿಕಾಂಶ ನೀಡುತ್ತದೆ
ತುಪ್ಪವು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ. ಇದರಲ್ಲಿರುವ ಬ್ಯುಟೈರೇಟ್ ಗುಣವು ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡಿ. ಕರುಳಿನ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದು ಕೊಬ್ಬು ಕರಗುವ ವಿಟಮಿನ್ ಎ, ಡಿ, ಇ ಮತ್ತು ಕೆಯನ್ನು ಒಳಗೊಂಡಿದೆ.
4. ರೋಗನಿರೋಧಕ ಶಕ್ತಿ ಮತ್ತು ಉಸಿರಾಟದ ಆರೋಗ್ಯವನ್ನು ಹೆಚ್ಚಿಸುತ್ತದೆ
ತುಪ್ಪ ಮತ್ತು ಇಂಗು ಸಂಯೋಜನೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹಾಗೆಯೇ ಇದು ಶೀತ ಮತ್ತು ಜ್ವರದ ಸಮಯದಲ್ಲಿ ಸೇವಿಸುವುದರಿಂದ ಉತ್ತಮ ಫಲವನ್ನು ಪಡೆಯಬಹುದು. ಹಾಗೆಯೇ ಇಂಗು ಉಸಿರಾಟದ ಆರೋಗ್ಯವನ್ನು ಬೆಂಬಲಿಸಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಟ ನಡೆಸುತ್ತದೆ.
ತಯಾರಿ ಹೇಗೆ
ಮೊದಲು ಒಂದು ಕಪ್ ಬಿಸಿ ನೀರನ್ನು ತೆಗೆದುಕೊಳ್ಳಿ. ಅದಕ್ಕೆ 1 ಚಮಚ ತುಪ್ಪ ಹಾಗೂ ಒಂದು ಚಿಟಿಕೆ ಇಂಗು ಮಿಕ್ಸ್ ಮಾಡಿ ಬಿಸಿ ಇರುವಾಗಲೇ ಕುಡಿಯಿರಿ.
ಸೇವಿಸುವುದು ಯಾವಾಗ?
ಈ ಪಾನೀಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯವಾಗಿದೆ. ಹಾಗೆಯೇ ಪ್ರತಿನಿತ್ಯ ಒಂದೇ ಬಾರಿ ಸೇವಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಅನುಸರಿಸಬೇಕಾದ ಸುರಕ್ಷತಾ ಮುನ್ನೆಚ್ಚರಿಕೆಗಳು
ತಜ್ಞರ ಪ್ರಕಾರ, "ಲ್ಯಾಕ್ಟೋಸ್ ಅಸಹಿಷ್ಣುತೆ, ಕಡಿಮೆ ರಕ್ತದೊತ್ತಡ ಮತ್ತು ಗರ್ಭಿಣಿಯರು ಇಂತಹ ವ್ಯಕ್ತಿಗಳು ಈ ಸಾಂಪ್ರದಾಯಿಕ ಪಾನೀಯವನ್ನು ತಪ್ಪಿಸಬೇಕು ಇದು ಅವರ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.