Eggless Mayonnaise (ಸಾಂದರ್ಭಿಕ ಚಿತ್ರ)
Eggless Mayonnaise: ಎಗ್‌ಲೆಸ್ ಮೇಯೊನೈಸ್ ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿದೆ. ಸಸ್ಯಾಹಾರಿಗಳು ಅಥವಾ ಮೊಟ್ಟೆಯ ಅಲರ್ಜಿ ಇರುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದ್ದು, ಇದನ್ನು ಅನೇಕ ರೀತಿಯ ಆಹಾರ ಪದಾರ್ಥಗಳಲ್ಲಿ ತಿನ್ನಲು ಬಳಸುತ್ತಾರೆ. ಇದೊಂದು ಹಾಲಿನ ಪದಾರ್ಥಗಳಲ್ಲಿ ತಯಾರಿಸುವುದರಿಂದ ಸಸ್ಯಹಾರಿಗಳಿಗೆ ಉತ್ತಮವಾಗಿದೆ. ಹಾಗಿದ್ದರೆ, ಇನ್ಯಾಕೆ ತಡ ಈಗ್ಲೇ ಮಾಡಿ ಎಗ್‌ಲೆಸ್ ಮೇಯೊನೈಸ್..
ಬೇಕಾಗುವ ಸಾಮಗ್ರಿಗಳು
* ¾ ರಿಂದ 1 ಕಪ್ ರಿಫೈಂಡ್ ಆಯಿಲ್
* ½ ಟೀಸ್ಪೂನ್ ಮಸ್ಟರ್ಡ್ ಪೌಡರ್
ಮಾಡುವ ವಿಧಾನ
ಹ್ಯಾಂಡ್ ಬ್ಲೆಂಡರ್ಗೆ ತಣ್ಣನೆಯ ಹಾಲು, ಉಪ್ಪು, ಸಕ್ಕರೆ, ನಿಂಬೆ ರಸ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಮಿಶ್ರಣಕ್ಕೆ ಎಣ್ಣೆಯನ್ನು ಹಾಕುತ್ತಾ, ಮಿಶ್ರಣ ದಪ್ಪವಾಗುವವರೆಗೂ ಬ್ಲೆಂಡ್ ಮಾಡಿ. ಮಿಶ್ರಣ ದಪ್ಪವಾಗದಿದ್ದರೆ, ಸ್ವಲ್ಪ ಎಣ್ಣೆ ಸೇರಿಸಿ ಕ್ರೀಮಿ ಆಗುವವರೆಗೂ ಮಿಕ್ಸ್ ಮಾಡಿ ರುಚಿ ನೋಡಿ, ಅಗತ್ಯವಿದ್ದರೆ ಉಪ್ಪು, ನಿಂಬೆ ರಸ ಸೇರಿಸಿಕೊಳ್ಳಿ. ಗಾಜಿನ ಜಾರ್ಗೆ ಹಾಕಿಟ್ಟು ಫ್ರಿಜ್ನಲ್ಲಿಟ್ಟರೆ 1-2 ವಾರಗಳವರೆಗೆ ಹಾಗೇ ಇರುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.