Recipe: ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡಲು ಸರಳವಾದ, ಭಾರತೀಯ ಶೈಲಿಯ ಹೈ ಫೈಬರ್ ರೆಸಿಪಿಗಳು ಸಹಾಯ ಮಾಡುತ್ತವೆ. ಇವು ನಾರು ಹೆಚ್ಚಿರುವ ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳಿಂದ ತಯಾರಿಸುವುದರಿಂದ ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ, ಮಲವನ್ನು ಮೃದುಗೊಳಿಸುತ್ತದೆ. ಹಾಗಾಗಿ ನಾವಿಂದು ಗ್ಯಾಸ್ಟ್ರಿಕ್ ಕಡಿಮೆ ಮಾಡುವ ರೆಸಿಪಿ ಖಿಚಡಿ ಮಾಡುವುದನ್ನು ಹೇಳಿಕೊಡಲಿದ್ದೇವೆ.
ಬೇಕಾಗುವ ಪದಾರ್ಥಗಳು
* 1-2 ಚಮಚ ತುಪ್ಪ ಅಥವಾ ಎಣ್ಣೆ
ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಅಕ್ಕಿ ಮತ್ತು ಬೇಳೆಯನ್ನು 2-3 ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆದು 15-20 ನಿಮಿಷ ನನೆಸಿ ಬಿಡಿ. ನಂತರ ಒಂದು ಕುಕ್ಕರ್ಗೆ ತುಪ್ಪ/ಎಣ್ಣೆ ಬಿಸಿ ಮಾಡಿ. ಜೀರಿಗೆ, ಹಿಂಗು ಹಾಕಿ ಚಟಪಟ ಸಿಡಿಸಿ. ನಂತರ ಅದಕ್ಕೆ ಸೋರೆಕಾಯಿ, ಬೇಳೆ, ತರಕಾರಿ ಸೇರಿಸಿ ಸ್ವಲ್ಪ ಸಮಯ ಹುರಿದುಕೊಳ್ಳಿ. ನಂತರ ಅಕ್ಕಿ ಸೇರಿಸಿ ನೀರು, ಉಪ್ಪು ಹಾಕಿ ಚೆನ್ನಾಗಿ ಕಲಸಿ 3 ವಿಶಲ್ ಕೂಗಿಸಿಕೊಳ್ಳಿ. ನಂತರ ಸೇವಿಸಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.