Recipe: ತೂಕ ಹೆಚ್ಚಿಸಿಕೊಳ್ಳುವ ಪ್ರಕ್ರಿಯೆ ಸುಲಭದ ಮಾತಲ್ಲ. ಅನೇಕರು ಹಲವಾರು ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಆದರೂ ತೂಕ ಹೆಚ್ಚಳವಾಗುವುದಿಲ್ಲ. ಇದರಿಂದ ಅನೇಕ ರೀತಿಯ ಔಷಧಗಳ ಮೊರೆಹೋಗುತ್ತಾರೆ. ಇವು ದೇಹಕ್ಕೆ ಅಪಾಯಕಾರಿಯಾಗಿದ್ದರು ಸೇವಿಸುತ್ತಾರೆ. ಹಾಗಾಗಿ ನೀವೇನಾದರೂ ತೂಕವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಈ ರೀತಿಯ ಆಹಾರಗಳನ್ನು ಸೇವಿಸಿ....
ಬಾನಾನಾ ಪೀನಟ್ ಬಟರ್ ಸ್ಮೂಥಿ
ಬೇಕಾಗುವ ಪದಾರ್ಥಗಳು
ಮೊದಲು ಒಂದು ಮಿಕ್ಸಿ ಜಾರಿಗೆ ಬಾಳೆಹಣ್ಣು, ಪೀನಟ್ ಬಟರ್, ಹಾಲು, ಓಟ್ಸ್, ಜೇನುತುಪ್ಪ ಸೇರಿಸಿ ಮಿಕ್ಸಿ ಮಾಡಿ ನಂತರ ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಎದ್ದು ಕುಡಿಯಿರಿ. ಇದು ನಿಮ್ಮ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.
ಡ್ರೈ ಫ್ರೂಟ್ ಲಾಡು
ಬೇಕಾಗುವ ಪದಾರ್ಥಗಳು
ಮಾಡುವ ವಿಧಾನ
ಮೊದಲು ಒಂದು ಮಿಕ್ಸಿ ಜಾರಿಗೆ ಬಾದಾಮಿ, ಪಿಸ್ತಾ, ಗೋಡಂಬಿ, ಖರ್ಜೂರವನ್ನು ಹಾಕಿ ಮಿಕ್ಸಿಮಾಡಿಕೊಳ್ಳಿ. ನಂತರ ತುಪ್ಪ ಬೆರಸಿ ಲಾಡುಗಳ ರೂಪಕ್ಕೆ ಮಾಡಿ. ದಿನಕ್ಕೆ 2-3 ತಿನ್ನಿ ಇದು ತೂಕವನ್ನು ಹೆಚ್ಚಿಸುತ್ತದೆ.
ಪೀನಟ್ ಬಟರ್ ಬಾನಾನಾ ಸ್ಯಾಂಡ್‌ವಿಚ್
ಬೇಕಾಗುವ ಪದಾರ್ಥಗಳು
ಮಾಡುವ ವಿಧಾನ
ಬ್ರೆಡ್ತುಂಡುಗಳಿಗೆ ಪೀನಟ್ ಬಟರ್ ಹಚ್ಚಿ ನಂತರ ಅದಕ್ಕೆ ಬಾಳೆಹಣ್ಣನ್ನು ಇಟ್ಟು ಸಂಜೆಯ ಸ್ನಾಕ್ಸ್ ಆಗಿ ಸೇವಿಸಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.