Lauki Majjige Huli: ಡಯಟ್ ಎನ್ನುವುದು ಕೇವಲ ಆಹಾರದ ನಿಯಂತ್ರಣವಲ್ಲ, ಅದು ನಮ್ಮ ದೇಹಕ್ಕೆ ನಾವು ನೀಡುವ ಗೌರವ. ಅನಾರೋಗ್ಯದ ಸಂಕೋಲೆಯಿಂದ ಮುಕ್ತರಾಗಿ, ದಿರ್ಘಕಾಲ ಬದುಕುವ ಹಂಬಲ ಎಲ್ಲರಿಗೂ ಇರುತ್ತದೆ. ನಾವು ಖುಷಿಗಾಗಿ ಸೇವಿಸುವ ಆಹಾರಗಳು ಕೆಲವೊಮ್ಮೆ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹಾಗಾಗಿ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಯಾವಾಗಲೂ ಡಯಟ್ ಮಾಡುವುದು ಉತ್ತಮ. ಹಾಗಾಗಿ ನೀವೇನಾದರೂ ಡಯಟ್ ಮಾಡುತ್ತಿದ್ದರೆ, ಈ ಸೋರೆಕಾಯಿ ಮಜ್ಜಿಗೆ ಹುಳಿಯನ್ನು ನಿಮ್ಮ ಆಹಾರದೊಂದಿಗೆ ಸೇರಿಸಿಕೊಳ್ಳಿ. ಇದು ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಬೇಕಾಗುವ ಸಾಮಾಗ್ರಿಗಳು
ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ನೀರಿಟ್ಟು ಸೋರೆಕಾಯಿ ಬೇಯಿಸಿಕೊಳ್ಳಿ. ನಂತರ ಜೀರಿಗೆ, ಮೆಂತ್ಯ ಸೊಪ್ಪು, ಶುಂಠಿ, ಕೊತ್ತಂಬರಿ, ಉಪ್ಪು, ಹಸಿ ಮೆಣಸಿನಕಾಯಿ ಸೇರಿಸಿ ಮಜ್ಜಿಗೆಯೊಂದಿಗೆ ರುಬ್ಬಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ಒಗ್ಗರಣೆ ಹಾಕಿ ಅಕ್ಕಿ ರೊಟ್ಟಿ, ಚಪಾತಿಯೊಂದಿಗೆ ಸೇವಿಸಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.