Dal Khichdi : ಬ್ಯಾಚುಲರ್‌ಗಳಿಗೆ ಅಡುಗೆ ಮಾಡುವುದು ಒಂದು ದೊಡ್ಡ ಸಾಹಸ. ಅದರಲ್ಲೂ ಸಮಯ ಕಡಿಮೆ ಇದ್ದಾಗ ಅಥವಾ ಸುಸ್ತಾದಾಗ ಹೊಟ್ಟೆ ತುಂಬುವ ಆಹಾರ ಬೇಕೆನಿಸುವುದು ಸಹಜ. ಹಾಗಾಗಿ ಹೆಚ್ಚಾಗಿ ಅವರು ಹೋಟೆಲ್ ಮೊರೆ ಹೋಗುತ್ತಾರೆ. ಎಷ್ಟು ದಿನ ಅಂತ ಹೋಟೆಲ್ ಊಟ ಮಾಡ್ತೀರಾ? ಇದು ನಿಮ್ಮ ಹೊಟ್ಟೆಗೆ ಹಿತ ಅಲ್ಲ. ಅಂತವರಿಗಾಗಿ ನಾವಿಂದು ದಾಲ್ ಖಿಚಡಿ ಮಾಡೋದನ್ನ ಹೇಳಿ ಕೊಡ್ತಾ ಇದ್ದೀವಿ. ಈಗ್ಲೆ ಮಾಡಿ ರುಚಿ ನೋಡಿ.
ಬೇಕಾಗುವ ಪದಾರ್ಥಗಳು
* ಐಚ್ಛಿಕ: ಕ್ಯಾರೆಟ್, ಬಟಾಣಿ, ಈರುಳ್ಳಿ, ಟೊಮ್ಯಾಟೊ
ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಹೆಸರು ಬೇಳೆ ಮತ್ತು ಅಕ್ಕಿಯನ್ನು ಒಟ್ಟಿಗೆ ತೊಳೆದು 10-15 ನಿಮಿಷ ನೆನೆಸಿಟ್ಟುಕೊಳ್ಳಿ. ಕುಕ್ಕರ್ಗೆ 1 ಚಮಚ ತುಪ್ಪ ಬಿಸಿ ಮಾಡಿ, ಜೀರಿಗೆ ಹಾಕಿ ಒಗ್ಗರಣೆ ಮಾಡಿಟ್ಟುಕೊಳ್ಳಿ. ನಂತರ ಅದಕ್ಕೆ ಶುಂಠಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ. ಇದಾದ ಬಳಿಕ ಆ ಮಿಶ್ರಣಕ್ಕೆ ನೆನೆಸಿದ ಬೇಳೆ-ಅಕ್ಕಿ ಹಾಕಿ, ಅರಿಶಿನ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ 4-5 ಕಪ್ ನೀರು ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿರಿ. 3-4 ವಿಶಲ್ ಬರುವವರೆಗೆ ಬೇಯಿಸಿ ತಣ್ಣಗಾದ ನಂತರ ತುಪ್ಪ ಸೇರಿಸಿ ಸವಿಯಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.