ಮೊಸರು  
ಆಹಾರ

ಬೇಸಿಗೆಯಲ್ಲಿ ಮೊಸರು ಬೇಗನೇ ಹುಳಿಯಾಗ್ತಿದ್ಯಾ? ಇಲ್ಲಿವೆ ಒಂದಷ್ಟು ಉಪಯುಕ್ತ ಟಿಪ್ಸ್ | Curd

Curd: ಬೇಸಿಗೆಯಲ್ಲಿ ಮೊಸರನ್ನ ತಿನ್ನೋದು ಕೆಲವರಿಗೆ ತುಂಬ ಖುಷಿ ಕೊಡುತ್ತದೆ. ಅದರಲ್ಲೂ ಮೊಸರು ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿಸುವಲ್ಲಿ ಸಹಕಾರಿ. ಈ ವಿಚಾರ ಎಷ್ಟೋ ಮಂದಿಗೆ ಗೊತ್ತಿರದು. ಮೊಸರು ಮಿಶ್ರಿತ ಅನ್ನ ಬ್ಯಾಚುಲರ್ಸ್​ಗೆ ಒಂದೊತ್ತಿನ ಊಟವಾದರೆ, ಸಂಸಾರಸ್ಥರಿಗೆ ಇದು ಮಜ್ಜಿಗೆಯಾಗಿ, ಲಸ್ಸಿಯಾಗಿ ಹೊಟ್ಟೆ ತಂಪಾಗಿಡುತ್ತದೆ. ಆದರೆ, ಗೃಹಿಣಿಯರಿಗೆ ಬೇಸಿಗೆಯಲ್ಲಿ ಮೊಸರು ಬೇಗನೆ ಹುಳಿಯಾಗುತ್ತದೆ ಎಂಬುದೇ ಚಿಂತೆ.
ಹೆಚ್ಚಿನ ತಾಪಮಾನದಲ್ಲಿ ಮೊಸರು ಬೇಗ ಹುಳಿಯಾಗುವುದು ತೀರ ಸಾಮಾನ್ಯ. ಹೀಗಿರುವಾಗ, ಬೇಸಿಗೆಯಲ್ಲಿ ಮೊಸರು ಉಳಿಯಾಗದಂತೆ ನೋಡಿಕೊಳ್ಳಲು ಏನು ಮಾಡಬೇಕು? ಮಾಡಿದರೆ ಬೆಸ್ಟ್​? ಎಂಬುದಕ್ಕೆ ಇಲ್ಲಿವೆ ನೋಡಿ ಒಂದಷ್ಟು ಉಪಯುಕ್ತ ಸಲಹೆಗಳು.

ಮೊಸರು ಹುಳಿಯಾಗದಿರಲು ಏನು ಮಾಡ್ಬೇಕು?

ಬೇಸಿಗೆಯಲ್ಲಿ ಮೊಸರು ಹುಳಿಯಾಗದಂತೆ ಇರಲು ಅದಕ್ಕೆ ತಂಪು ವಾತಾವರಣ ಬೇಕು. ಎಫ್​​ಎಸ್​ಎಸ್​ಐ (FSSAI) ಪ್ರಕಾರ, ಬೇಸಿಗೆಯಲ್ಲಿ ಹಾಲು ಹೆಪ್ಪುಗಟ್ಟಿದ ನಂತರ ಅದನ್ನು ಫ್ರಿಡ್ಜ್​ನಲ್ಲಿ ಇಡುವುದು ಉತ್ತಮ. ಇಲ್ಲಿ ಐಸ್​ ಫ್ರೀಜರ್​ನಲ್ಲಿ ಇಡಬಾರದು. ಬದಲಿಗೆ ಫ್ರಿಡ್ಜ್​ನ ಮಧ್ಯಭಾಗದಲ್ಲಿ ಇಡಬೇಕು. ಆಗಾಗ್ಗೆ ಮೊಸರು ಹೊರತೆಗೆದಷ್ಟು ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಹುಳಿಗೆ ತಿರುಗಬಹುದು. ಹೀಗಾಗಿ, ತಂಪಾದ ಅಥವಾ ಫ್ರಿಡ್ಜ್​ನಲ್ಲಿಡುವುದು ಸೂಕ್ತ.

ಮೊಸರು ಹೆಪ್ಪಿಡಲು ಸ್ಥಳ, ಪಾತ್ರೆ ಮುಖ್ಯ

ನಿಮ್ಮ ಅಡುಗೆ ಮನೆಯಲ್ಲಿ ಹೆಚ್ಚು ಅಥವಾ ಕೊಂಚವಾದರೂ ತಂಪಿರುವ ಸ್ಥಳದಲ್ಲಿ ಮೊಸರನ್ನು ಹೆಪ್ಪಾಗಿಸಲು ಇಡಬೇಕು. ಮೊಸರು ಮಾಡಿಕೊಳ್ಳಲು ಜಾಗ ಸಹ ಮುಖ್ಯವಾಗುತ್ತದೆ. ಗ್ಯಾಸ್​ ಸ್ಟೌವ್ ಪಕ್ಕ, ಬಿಸಿ ಪಾತ್ರೆ ಇಡುವ ಸ್ಥಳದಲ್ಲಿ ಮೊಸರಿನ ಪಾತ್ರೆ ಇಳಿಸುವುದನ್ನು ಆದಷ್ಟು ತಪ್ಪಿಸಿ.
ಮೊಸರು ಹೆಪ್ಪು ಹಾಕಲು ಸಾಮಾನ್ಯವಾಗಿ ಜನರು ಸ್ಟೀಲ್​ ಪಾತ್ರೆ ಅಥವಾ ಸ್ಟೇನ್​ ಲೆಸ್​ ಸ್ಟೀಲ್ ಪಾತ್ರೆ ಬಳಸುತ್ತಾರೆ. ಆದರೆ, ಇದರ ಬದಲಿಗೆ ಗಾಜು ಅಥವಾ ಮಣ್ಣಿನ ಕುಡಿಕೆ ಬಳಸುವುದು ಬೆಸ್ಟ್​. ಎಲ್ಲ ಪಾತ್ರೆಗಳು ಪದಾರ್ಥಗಳೊಂದಿಗೆ ರಿಯಾಕ್ಟ್ ಮಾಡುತ್ತವೆ. ಅದೇ ಗಾಜು ಮತ್ತು ಮಣ್ಣಿನಿಂದ ಮಾಡಲ್ಪಟ್ಟ ಪಾತ್ರೆಗಳು ಮಾತ್ರ ಹೆಚ್ಚಾಗಿ ತಂಪಾಗಿರಿಸುತ್ತದೆ.

ಯಾವಾಗ ಫ್ರಿಡ್ಜ್​ನಲ್ಲಿ ಇಡಬೇಕು?

ಬೆಚ್ಚಗಿನ ಹಾಲಿಗೆ ಮೊಸರನ್ನು ಹಾಕಿ ಹೆಪ್ಪುಗಟ್ಟಿಸಲು ಶುರು ಮಾಡಿದ 8-10 ಗಂಟೆಯ ನಂತರ ಅದನ್ನು ಫ್ರಿಡ್ಜ್​ನಲ್ಲಿಡಿ. ಚೂರು ಹೆಪ್ಪುಗಟ್ಟಿದ್ದರು ಅದನ್ನು ತೆಗೆದಿಡಬೇಕು. ಕೆಲವರು ಪೂರ್ತಿ ಹೆಪ್ಪುಗಟ್ಟುವವರೆಗೂ ಕಾಯುತ್ತಾರೆ. ಆದರೆ, ಅದು ತಪ್ಪು ಎಂದು ತಜ್ಱರು ಅಭಿಪ್ರಾಯಿಸುತ್ತಾರೆ,(ಏಜೆನ್ಸೀಸ್).