ಸಾಂದರ್ಭಿಕ ಚಿತ್ರ 
ಆಹಾರ

ಕಲ್ಲಂಗಡಿ ಹಣ್ಣು ಮತ್ತು ತಲೆನೋವು: ಇವೆರಡಕ್ಕೂ ಇರುವ ಸಂಬಂಧವೇನು? ಇಲ್ಲಿದೆ ಶಾಕಿಂಗ್ ಮಾಹಿತಿ! Water melon

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆಯಲ್ಲಿ ಜನರು ಹೆಚ್ಚು ಅವಲಂಬಿಸುವ ಹಣ್ಣುಗಳಲ್ಲಿ ಕಲ್ಲಂಗಡಿ ಕೂಡ ಒಂದು
  • ಇದು ದೇಹವನ್ನು ತಂಪಾಗಿಸುವುದರ ಜೊತೆಗೆ ಬಾಯಾರಿಕೆಯನ್ನು ನೀಗಿಸುವ ಹಣ್ಣಾಗಿದೆ
  • ಕೆಲವರಿಗೆ ಈ ಹಣ್ಣನ್ನು ತಿನ್ನುವುದರಿಂದ ತಲೆನೋವು ಬರಬಹುದೇ ಎಂಬ ಸಂಶಯ ಇರುತ್ತದೆ
  • ಶೇ. 90ಕ್ಕಿಂತ ಹೆಚ್ಚು ನೀರಿನಿಂದ ಕೂಡಿದ್ದು, ದೇಹವನ್ನು ಹೈಡ್ರೇಟ್​ ಮಾಡಲು ಸಹಾಯ ಮಾಡುತ್ತದೆ
Water melon: ಬೇಸಿಗೆಯಲ್ಲಿ ಜನರು ಹೆಚ್ಚು ಅವಲಂಬಿಸುವ ಹಣ್ಣುಗಳಲ್ಲಿ ಕಲ್ಲಂಗಡಿ ಕೂಡ ಒಂದು. ಇದು ದೇಹವನ್ನು ತಂಪಾಗಿಸುವುದರ ಜೊತೆಗೆ ಬಾಯಾರಿಕೆಯನ್ನು ನೀಗಿಸುವ ಹಣ್ಣಾಗಿದ್ದು, ಎಥೇಚ್ಛವಾಗಿ ಜನರು ಈ ಹಣ್ಣನ್ನು ಅವಲಂಬಿಸುತ್ತಾರೆ. ಆದರೆ, ಕೆಲವರಿಗೆ ಈ ಹಣ್ಣನ್ನು ತಿನ್ನುವುದರಿಂದ ತಲೆನೋವು ಬರಬಹುದೇ ಎಂಬ ಸಂಶಯ ಇರುತ್ತದೆ. ಹಾಗಿದ್ದರೆ ಇದರ ಹಿಂದಿನ ವಾಸ್ತವವೇನು ಎಂದು ನೋಡೋಣ ಬನ್ನಿ...
ಕಲ್ಲಂಗಡಿ ಸಾಮಾನ್ಯವಾಗಿ ತಲೆನೋವು ಉಂಟುಮಾಡುವ ಹಣ್ಣಲ್ಲ. ಇದರಲ್ಲಿ ಶೇ. 90ಕ್ಕಿಂತ ಹೆಚ್ಚು ನೀರಿನಿಂದ ಕೂಡಿದ್ದು, ದೇಹವನ್ನು ಹೈಡ್ರೇಟ್​ ಮಾಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಬೇಸಿಗೆಯಲ್ಲಿ ದೇಹವನ್ನು ನಿರ್ಜಲೀಕರಣದಿಂದ ಉಂಟಾಗುವ ತಲೆನೋವನ್ನು ತಪ್ಪಿಸಲು ಕಲ್ಲಂಗಡಿ ಸಹಾಯಕವಾಗಿದೆ. ಆದ್ದರಿಂದ, ಬಿಸಿ ವಾತಾವರಣದಲ್ಲಿ ಇದು ಉತ್ತಮ ಆರೋಗ್ಯಕರ ಆಯ್ಕೆಯಾಗಿದೆ.
ಪ್ರತಿಯೊಬ್ಬರ ದೇಹಕ್ಕೂ ಎಲ್ಲವೂ ಹೊಂದಿಕೊಳ್ಳಬೇಕೆಂಬುದು ಇಲ್ಲ. ಕೆಲವೊಂದಿಷ್ಟು ಜನರು ಕಲ್ಲಂಗಡಿ ಹಣ್ಣನ್ನು ತಿಂದ ನಂತರ ವಿಭಿನ್ನವಾಗಿ ಪ್ರತಿಕ್ರಿಯಿಸಬಹುದು. ಇದರಲ್ಲಿರುವ ನೈಸರ್ಗಿಕ ಸಕ್ಕರೆ ಮತ್ತು ಸಾವಯುವ ಸಂಯುಕ್ತಗಳು ಕೆಲವರಿಗೆ ಸಣ್ಣ ತಲೆನೋವನ್ನು ಉಂಟು ಮಾಡಬಹುದು. ನಿರ್ದಿಷ್ಟವಾಗಿ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೆಲವು ಆಹಾರಗಳು ತೊಂದರೆ ನೀಡಬಹುದು. ಅದರಲ್ಲಿ ಕಲ್ಲಂಗಡಿ ಕೂಡಾ ಒಂದಾಗಿದೆ.
ಇನ್ನೊಂದು ಕಾರಣವೆಂದರೆ ರಕ್ತದಲ್ಲಿನ ಸಕ್ಕರೆಯಲ್ಲಿನ ಬದಲಾವಣೆಗಳು ಎಂದು ಭಾವಿಸಲಾಗಿದೆ. ಆದಾಗ್ಯೂ, ಒಮ್ಮಿಂದೊಮ್ಮೆಲೆ ಹೆಚ್ಚು ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಕೆಲವು ಜನರಿಗೆ ಹಠಾತ್​ ತಲೆತಿರುಗುವಿಕೆ, ವಾಂತಿ, ವಾಕರಿಕೆ ಉಂಟಾಗಬಹುದು.
ಅದೇ ರೀತಿ, ಫ್ರಿಜ್​ನಲ್ಲಿಟ್ಟಿರುವ ತುಂಬಾ ತಣ್ಣನೆಯ ಕಲ್ಲಂಗಡಿಯನ್ನು ಬೇಗನೇ ತಿನ್ನುವುದರಿಂದ "ಮೆದುಳಿನ ಫ್ರೀಜ್" ಎಂದು ಕರೆಯಲ್ಪಡುವ ತಾತ್ಕಾಲಿಕ ತಲೆನೋವು ಉಂಟಾಗುತ್ತದೆ. ಇದು ಜೀವಕ್ಕೆ ಅಪಾಯಕಾರಿಯಲ್ಲದಿದ್ದರೂ ಕೆಲವು ಕ್ಷಣಗಳ ಅಸ್ವಸ್ಥತೆಗೆ ಕಾರಣವಾಗಬಹುದು. ಬಿಸಿ ವಾತಾವರಣದಿಂದ ಬಂದ ತಕ್ಷಣ ತುಂಬಾ ತಣ್ಣನೆಯ ಹಣ್ಣನ್ನು ತಿನ್ನುವುದರಿಂದಲೂ ಕೆಲವೊಂದು ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.
ಒಟ್ಟಾರೆಯಾಗಿ, ಕಲ್ಲಂಗಡಿ ಸಾಮಾನ್ಯವಾಗಿ ಸುರಕ್ಷಿತ ಮತ್ತು ಆರೋಗ್ಯಕರ ಹಣ್ಣಾಗಿದ್ದು, ಅದನ್ನು ತಿಂದ ನಂತರ ನೀವು ನಿರಂತರವಾಗಿ ತಲೆನೋವು ಅನುಭವಿಸುತ್ತಿದ್ದರೆ ಪ್ರಮಾಣವನ್ನು ಕಡಿಮೆ ಮಾಡುವುದು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಬೇಸಿಗೆಯ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಕಲ್ಲಂಗಡಿ ಸೇವಿಸುವುದರಿಂದ ಆಹಾರ ಕ್ರಮಕ್ಕೆ ಉತ್ತಮವಾಗಿದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.