Snake Bite fruits ಸಾಂದರ್ಭಿಕ ಚಿತ್ರ 
ಆಹಾರ

ಹಾವು ಕಚ್ಚಿದ ಹಣ್ಣು ತಿಂದರೆ ಸಾವು ಪಕ್ಕನಾ? ಈ ಭಯಾನಕ ಸುದ್ದಿಯ ಹಿಂದಿರುವ ಅಸಲಿ ಸತ್ಯ ಇಲ್ಲಿದೆ! Snake Bite fruits

ಪ್ರಮುಖ ಮುಖ್ಯಾಂಶಗಳು

  • ರಾಜ್ಯಾದ್ಯಂತ ಬೇಸಿಗೆಯ ಶಾಖ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರು ಹೈರಾಣಾಗಿದ್ದಾರೆ
  • ಸೂರ್ಯನ ತಾಪಕ್ಕೆ ಮನುಷ್ಯರು ಮಾತ್ರವಲ್ಲ, ಪ್ರಾಣಿ-ಪಕ್ಷಿಗಳು ಕೂಡ ಹೈರಾಣಾಗುತ್ತಿವೆ
  • ಈ ಸುಡು ಬಿಸಿಲಿನ ಸಮಯದಲ್ಲಿ ಪ್ರಕೃತಿಯಲ್ಲಿ ಒಂದು ಪ್ರಮುಖ ಬದಲಾವಣೆ ಕಂಡುಬರುತ್ತಿದೆ
  • ಅದೇನೆಂದರೆ ಭೂಮಿಯ ಒಳಗಿದ್ದ ಹಾವುಗಳು ತಂಪಾದ ಜಾಗ ಅರಸಿ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿವೆ
Snake Bite fruits: ರಾಜ್ಯಾದ್ಯಂತ ಬೇಸಿಗೆಯ ಶಾಖ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸೂರ್ಯನ ತಾಪಕ್ಕೆ ಮನುಷ್ಯರು ಮಾತ್ರವಲ್ಲ, ಪ್ರಾಣಿ-ಪಕ್ಷಿಗಳು ಕೂಡ ಹೈರಾಣಾಗುತ್ತಿವೆ. ಈ ಸುಡು ಬಿಸಿಲಿನ ಸಮಯದಲ್ಲಿ ಪ್ರಕೃತಿಯಲ್ಲಿ ಒಂದು ಪ್ರಮುಖ ಬದಲಾವಣೆ ಕಂಡುಬರುತ್ತಿದೆ. ಅದೇನೆಂದರೆ ಭೂಮಿಯ ಒಳಗಿದ್ದ ಹಾವುಗಳು ತಂಪಾದ ಜಾಗ ಅರಸಿ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿವೆ.
ಆದಾಗ್ಯೂ, ಹೊಲದಲ್ಲಿ ಬೆಳೆಯುವ ತರಕಾರಿಗಳು ಮತ್ತು ಹಣ್ಣನ್ನು ಹಾವು ಕಚ್ಚಿದರೆ ಅದು ವಿಷವಾಗುತ್ತದೆಯೇ? ಎಂಬ ಪ್ರಶ್ನೆ ಹಲವಾರು ಜನರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಒಬ್ಬ ವ್ಯಕ್ತಿಯನ್ನು ಕೊಲ್ಲಬಲ್ಲ ಹಾವು ಹೊಲದಲ್ಲಿ ಬೆಳೆಯುವ ತರಕಾರಿ ಅಥವಾ ಹಣ್ಣುಗಳನ್ನು ಕಚ್ಚಿದರೆ ವಿಷವಾಗುತ್ತದೆ ಎಂದು ಹೇಳುತ್ತಾರೆ. 
ಆದರೆ ವಿಜ್ಞಾನದಲ್ಲಿ ಅಂತಹ ವಾದಗಳಿಗೆ ಯಾವುದೇ ಪುರಾವೆಗಳಲ್ಲಿ. ಏಕೆಂದರೆ  ಹಾವು ಕಚ್ಚಿದರೆ ಹಣ್ಣು ಅಥವಾ ತರಕಾರಿ ವಿಷಕಾರಿಯಾಗುವುದಿಲ್ಲ. ಜೊತೆಗೆ ಅದನ್ನು ತಿನ್ನುವುದರಿಂದ ಯಾವುದೇ  ಪ್ರತಿಕೂಲ ಪರಿಣಾಮಗಳಿಲ್ಲ. ಹಾಗಿದ್ದರೆ, ಹಾವು ಕಚ್ಚುವುದರಿಂದ ಹಣ್ಣುಗಳು ಮತ್ತು ತರಕಾರಿಗಳು ವಿಷಕಾರಿಯಾಗುವುದಿಲ್ಲ ಎಂದು ನೋಡೋಣ ಬನ್ನಿ...
ಸಾಮಾನ್ಯವಾಗಿ ಹಾವು ಕಚ್ಚುವುದು ಹೇಗೆ ಮಾರಕವಾಗಬಹುದು? ಅದೇ ಹಾವು ಹಣ್ಣು ಅಥವಾ ತರಕಾರಿಯನ್ನು ಕಚ್ಚಿ ವಿಷಕಾರಿಯಾಗಿರದಿದ್ದರೆ ಹೇಗೆ? AFP ಫ್ಯಾಕ್ಟ್ ಚೆಕ್ ಮತ್ತು ಇತರ ವೈಜ್ಞಾನಿಕ ವರದಿಗಳ ಪ್ರಕಾರ, ಹಾವಿನ ವಿಷ ಎಂಬುದು ಒಂದು ರೀತಿಯ ಪ್ರೋಟೀನ್ ಎಂದು ಹೇಳಲಾಗುತ್ತದೆ. 
ಆದಾಗ್ಯೂ, ಹಾವಿನ ವಿಷ ರಕ್ತದಲ್ಲಿ ಸಂಚಾರಗೊಂಡಾಗ ಮಾತ್ರ ಪರಿಣಾಮವನ್ನು ಬೀರುತ್ತದೆ. ಇದನ್ನು ನೇರವಾಗಿ ನುಂಗುವುದರಿಂದ ಅದು ಹೊಟ್ಟೆಯನ್ನು ಪ್ರವೇಶಿಸಿ, ಜೀರ್ಣಕ್ರಿಯೆಯ ಸಮಯದಲ್ಲಿ ಉತ್ಪತ್ತಿಯಾಗುವ ಗ್ಯಾಸ್ಟ್ರಿಕ್​ ಆಮ್ಲದಿಂದ ಹೊರಹೋಗುತ್ತದೆ ಇದರಿಂದ ಯಾವುದೇ ರೀತಿಯಲ್ಲೂ ಪರಿಣಾಮ ಬೀರುವುದಿಲ್ಲ. 

ಹಾವಿನ ವಿಷವು ಹಣ್ಣು ಮತ್ತು ತರಕಾರಿಗಳ ಮೇಲೆ ಪರಿಣಾಮ ಬೀರುವುದಿಲ್ಲವೇ?

ಹಾವುಗಳು ತಮ್ಮ ಹಲ್ಲುಗಳನ್ನು ಎಂದಿಗೂ ಬಳಸುವುದಿಲ್ಲವಾದ್ದರಿಂದ ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಹಾವುಗಳು ಕಚ್ಚುವ ಸಾಧ್ಯತೆ ಬಹಳ ಕಡಿಮೆ. ಆದಾಗ್ಯೂ, ಹಾವುಗಳು ಮಾಂಸಹಾರಿಯಾಗಿರುವುದರಿಂದ ಎಂದಿಗೂ ನಿರ್ಜೀವ ವಸ್ತುಗಳನ್ನು ಕಚ್ಚುವುದಿಲ್ಲ. ಆದ್ದರಿಂದ, ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಹಾವುಗಳು ಕಚ್ಚುವ ಸಾಧ್ಯತೆಗಳು ಬಹಳ ಕಡಿಮೆ ಇರುತ್ತದೆ. 
ಒಂದು ವೇಳೆ ಹಾವು ತರಕಾರಿ ಅಥವಾ ಹಣ್ಣನ್ನು ಕಚ್ಚಿದರೂ ಸಹ, ಅದರ ವಿಷವು ಅವುಗಳ ಮೇಲೆ ಪರಿಣಾಮ ಬೀರುವುದಿಲ್ಲ. ಸಸ್ಯಗಳು ಹಾವಿನ ವಿಷವನ್ನು ಹೀರಿಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಅದು ಒಂದು ರೀತಿಯ ಪ್ರೋಟೀನ್ ಆಗಿರುವುದರಿಂದ ಹಣ್ಣು ಮತ್ತು ತರಕಾರಿಯನ್ನು ಕಚ್ಚಲು ಸಾಧ್ಯವಿಲ್ಲ.
ಆದಾಗ್ಯೂ, ಹಣ್ಣುಗಳು ಮತ್ತು ತರಕಾರಿಗಳನ್ನು ಎಂದಿಗೂ ಜಮೀನಿನಿಂದ ನೇರವಾಗಿ ತಂದು ತಿನ್ನಬಾರದು. ಏಕೆಂದರೆ, ಹಾವಿನ ವಿಷದ ಪರಿಣಾಮಕ್ಕಿಂತ ಹೆಚ್ಚಾಗಿ, ಹಾವು ತೆವಳುವುದರಿಂದ ಮಣ್ಣಿನಿಂದ ಹಣ್ಣು ಅಥವಾ ತರಕಾರಿಗೆ ಸೂಕ್ಷ್ಮ ಜೀವಿಗಳು ಮತ್ತು ಇತರ ಬ್ಯಾಕ್ಟೀರಿಯಾಗಳು ವರ್ಗಾವಣೆಯಾಗಬಹುದು ಮತ್ತು ಅವುಗಳನ್ನು ನೇರವಾಗಿ ತಿನ್ನುವುದರಿಂದ ಸೋಂಕು ಹರಡಬಹುದು. ಆದ್ದರಿಂದ, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವ ಮೊದಲು ಯಾವಾಗಲೂ ತೊಳೆದು ಸೇವಿಸುವುದು ಉತ್ತಮ (ಏಜೆನ್ಸೀಸ್​).