ಸಾಂದರ್ಭಿಕ ಚಿತ್ರ 
ಆಹಾರ

ಪದೇ ಪದೇ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದಿಯೇ? ಹಾಗಿದ್ದರೆ ಈ ಪಾನೀಯ ಟ್ರೈ ಮಾಡಿ! Recipe

Recipe: ಹೊಟ್ಟೆಯ ನೋವು ಸಾಮಾನ್ಯವಾದಂತಹ ಕಾಯಿಲೆ. ಇದು ಎಲ್ಲರಲ್ಲೂ ಕಂಡು ಬರುವ ಸಮಸ್ಯೆಯಾಗಿದೆ. ಕೆಲವೊಮ್ಮೆ ಅತಿಯಾದ ಊಟ, ಭಾರೀ ಬೋಜನಗಳು ಹೊಟ್ಟೆಯನ್ನು ತುಂಬಿಸುವಂತೆ ಮಾಡುತ್ತದೆ. ಇದರಿಂದ ಅಜೀರ್ಣ, ಸುಸ್ತು, ಆಯಾಸದಂತಹ ಪ್ರಕ್ರಿಯೆಗಳು ಆರಂಭವಾಗುತ್ತವೆ. ಇದರಿಂದ ಅನೇಕರು ಹೊಟ್ಟೆ ನೋವನ್ನು ಅನುಭವಿಸುತ್ತಾರೆ. ಹಾಗಾಗಿ ನಿಮ್ಮಲ್ಲಿ ಏನಾದರೂ, ಹೊಟ್ಟೆ ನೋವು ಕಂಡು ಬಂದರೆ, ಈ ರೀತಿಯ ಪಾನೀಯಗಳನ್ನುನಿಯಮಿತವಾಗಿ ಕುಡಿಯಿರಿ.

1. ಶುಂಠಿ ಟೀ

ಬೇಕಾಗುವ ಪದಾರ್ಥಗಳು

* 1 ಇಂಚು ತಾಜಾ ಶುಂಠಿ
* 1 ಗ್ಲಾಸ್ ನೀರು
* ನಿಂಬೆ ರಸ ಅಥವಾ ಜೇನು

ಮಾಡುವ ವಿಧಾನ

ಮೊದಲು ಒಂದು ಪಾತ್ರೆಗೆ ನೀರನ್ನು ಹಾಕಿ ಅದಕ್ಕೆ ಶುಂಠಿ ಹಾಕಿ 5-10 ನಿಮಿಷ ಕುದಿಸಿ ನಂತರ ಫಿಲ್ಟರ್ ಮಾಡಿ ಬೆಚ್ಚಗೆ ಕುಡಿಯಿರಿ.
ಶುಂಠಿಯಲ್ಲಿ ಜಿಂಜೆರಾಲ್ ಮತ್ತು ಶೋಗಾಲ್ ಎಂಬ ಸಂಯುಕ್ತಗಳು ಇರುವುದರಿಂದ ಇದರ ನಿಯಮಿತ ಸೇವನೆಯು ಹೊಟ್ಟೆಯ ಒಳಪದರದ ಉರಿಯೂತವನ್ನು ಕಡಿಮೆ ಮಾಡಿ ಹೊಟ್ಟೆ ನೋವು, ಅಜೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

2. ಪುದೀನ ಟೀ

ಬೇಕಾಗುವ ಪದಾರ್ಥಗಳು

* 10 ತಾಜಾ ಪುದೀನ ಎಲೆಗಳು
* 1 ಗ್ಲಾಸ್ ಬಿಸಿ ನೀರು

ಮಾಡುವ ವಿಧಾನ

ಒಂದು ಪಾತ್ರೆಗೆ ಬಿಸಿ ನೀರು ಹಾಕಿ, ಅದಕ್ಕೆ ಪುದೀನ ಎಲೆಗಳನ್ನು ಹಾಕಿ 5-10 ನಿಮಿಷ ಕುದಿಸಿ ನಂತರ ಕುಡಿಯಿರಿ.
ಪುದೀನವು ಹೊಟ್ಟೆ ಸ್ನಾಯುಗಳನ್ನು ರಿಲ್ಯಾಕ್ಸ್ ಮಾಡಿ ನೋವು ಮತ್ತು ಗ್ಯಾಸ್ ಕಡಿಮೆ ಮಾಡುತ್ತದೆ. ಹಾಗಾಗಿ ನಿಯಮಿತವಾಗಿ ಬೆಳಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ
ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.