ಇಂದೇ ಟ್ರೈ ಮಾಡಿ ಚಾಕೊಲೇಟ್ ಡೆಸರ್ಟ್ ಜಾರ್! Chocolate Dessert Jar ಸಾಂದರ್ಭಿಕ ಚಿತ್ರ 
ಆಹಾರ

ದಿಢೀರ್ ಅಂತ ಸಿಹಿ ತಿನ್ಬೇಕು ಅನ್ನಿಸ್ತಿದ್ಯಾ? ಇಂದೇ ಟ್ರೈ ಮಾಡಿ ಚಾಕೊಲೇಟ್ ಡೆಸರ್ಟ್ ಜಾರ್! Chocolate Dessert Jar

Chocolate Dessert Jar: ಸಿಹಿ ಪ್ರಿಯರಿಗೆ ಚಾಕೊಲೇಟ್ ಎಂದರೆ ಎಂದಿಗೂ ಮುಗಿಯದ ಪ್ರೀತಿ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಡಿಫರೆಂಟ್ ಡೆಸರ್ಟ್‌ಗಳ ಟ್ರೆಂಡ್ ಜೋರಾಗಿದ್ದು, 'ಚಾಕೊಲೇಟ್ ಡೆಸರ್ಟ್ ಜಾರ್' ಎಲ್ಲರ ನೆಚ್ಚಿನ ಆಯ್ಕೆಯಾಗಿದೆ. ನೋಡುವುದಕ್ಕೂ ಆಕರ್ಷಕ, ತಿನ್ನಲೂ ಅಷ್ಟೇ ರುಚಿಯಾಗಿರುವ ಈ ಡೆಸರ್ಟ್ ಅನ್ನು ಯಾವುದೇ ಕಷ್ಟವಿಲ್ಲದೇ, ಮನೆಯಲ್ಲಿರುವ ಸರಳ ಪದಾರ್ಥಗಳಿಂದಲೇ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ಪಾರ್ಟಿಗಳಿಗೆ ಅಥವಾ ದಿಢೀರ್ ಆಗಿ ಬರುವ ಸಿಹಿ ಹಸಿವಿಗೆ ಇದು ಬೆಸ್ಟ್ ಕಾಂಬಿನೇಷನ್.

ಬೇಕಾಗುವ ಪದಾರ್ಥಗಳು

* 1 ಕಪ್ ಚಾಕೊಲೇಟ್ ಕೇಕ್ / ಬ್ರೌನಿ
* 4-5 ಚಮಚ ಚಾಕೊಲೇಟ್ ಸಿರಪ್​
* 1 ಕಪ್ ವಿಪ್ಪಿಂಗ್ ಕ್ರೀಮ್ 
* 2-3 ಚಮಚ ಚಾಕೊಲೇಟ್ ಚಿಪ್ಸ್
* ಸಣ್ಣಗೆ ಹೆಚ್ಚಿದ ಒಣಹಣ್ಣುಗಳು 
* 2 ಸಣ್ಣ ಗಾಜಿನ ಬಾಟಲಿ  ಗಾಜಿನ ಜಾರ್ 

ತಯಾರಿಸುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ವಿಪ್ಪಿಂಗ್ ಕ್ರೀಮ್ ತೆಗೆದುಕೊಂಡು ಅದು ಗಟ್ಟಿಯಾಗುವವರೆಗೆ  ಚೆನ್ನಾಗಿ ವಿಸ್ಕ್ ಮಾಡಿಕೊಳ್ಳಿ. ನಂತರ ಇದಕ್ಕೆ 2 ಚಮಚ  ಚಾಕೊಲೇಟ್ ಸಿರಪ್ ಸೇರಿಸಿ ಮೃದುವಾಗಿ ಮಿಕ್ಸ್ ಮಾಡಿದರೆ ಚಾಕೊಲೇಟ್ ಕ್ರೀಮ್ ತಯಾರಿಸಿಕೊಳ್ಳಿ. 
ನಂತರ ಗಾಜಿನ ಜಾರ್​ನ ತಳದಲ್ಲಿ ಪುಡಿ ಮಾಡಿದ ಚಾಕಲೇಟ್​ ಕೇಕ್​ ಅಥವಾ  ಬ್ರೌನಿಯನ್ನು ಒಂದು ಪದರ ಹಾಕಿ, ಚಮಚದಿಂದ ಹಗುರವಾಗಿ ಒತ್ತಿ. ಎರಡನೇ ಲೇಯರ್​ಗೆ ಕೇಕ್ ಮೇಲೆ ಸ್ವಲ್ಪ ಚಾಕೊಲೇಟ್ ಸಿರಪ್ ಅನ್ನು ಹಾಕಿ ಹದವಾಗಿ ಹಚ್ಚಿರಿ. ತಯಾರಿಸಿಟ್ಟುಕೊಂಡ ವಿಪ್ಪಿಂಗ್ ಕ್ರೀಮ್ ಅನ್ನು ಪೈಪಿಂಗ್ ಬ್ಯಾಗ್ ಅಥವಾ ಚಮಚದ ಸಹಾಯದಿಂದ ಕೇಕಿನ ಮೇಲೆ ಹಾಕಿ.
ನಂತರ ಕ್ರೀಮ್ ಮೇಲೆ ಚಾಕೊಲೇಟ್ ಚಿಪ್ಸ್ ಮತ್ತು ಸಣ್ಣಗೆ ಹೆಚ್ಚಿದ ಬಾದಾಮಿ ಗೋಡಂಬಿ ಚೂರುಗಳನ್ನು ಉದುರಿಸಿ. ಜಾರ್ ತುಂಬುವವರೆಗೆ ಮತ್ತೆ ಕೇಕ್ ಪುಡಿ, ಚಾಕೊಲೇಟ್ ಸಿರಪ್, ಕ್ರೀಮ್ ಮತ್ತು ಚೋಕೋ ಚಿಪ್ಸ್‌ಗಳ ಲೇಯರ್ ಅನ್ನು ಮತ್ತೊಮ್ಮೆ ಮಾಡಿ. ಇದಾದ ಬಳಿಕ ಮುಚ್ಚಳ ಮುಚ್ಚಿ 1 ರಿಂದ 2 ಗಂಟೆಗಳ ಕಾಲ ಫ್ರಿಡ್ಜ್​ನಲ್ಲಿ ಇರಿಸಿ. ತಣ್ಣಗಾದ ಮೇಲೆ ಮೇಲ್ಭಾಗದಲ್ಲಿ ಸ್ವಲ್ಪ ಚಾಕೊಲೇಟ್ ಸಿರಪ್ ಮತ್ತು ಚೆರ್ರಿ ಇಟ್ಟು ಸರ್ವ್ ಮಾಡಿ ಸೇವಿಸಿ (ಏಜೆನ್ಸೀಸ್​). 
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.